ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸಿದ ವಿದ್ಯುತ್‌ ರೈಲು..!

ಎಲೆಕ್ಟ್ರಿಕ್‌ ರೈಲಿನ ಟ್ರಯಲ್‌ ಅನ್ನು ಜೂ.17 ಕ್ಕೆ ಎಂದು ನಿಗದಿಗೊಳಿಸಲಾಗಿದ್ದ ಸಮಯಕ್ಕಿಂತ ಮುಂಚೆಯೆ ಗುರುವಾರ ಜನಜತಾಬ್ದಿ ರೈಲಿಗೆ ಎಲೆಕ್ಟ್ರಿಕ್‌ ಇಂಜಿನ್‌ ಜೋಡಿಸಿದ್ದು, ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿತು. ನಾಳೆ ಪುನಃ ಇದೇ ಇಂಜಿನ್‌ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದೆ.

Electric Train Ran for the first time Between Bengaluru to Shivamogga grg

ಶಿವಮೊಗ್ಗ(ಜೂ.09): ಶಿವಮೊಗ್ಗ-ಬೆಂಗಳೂರು ನಡುವೆ ಗುರುವಾರ ಮೊದಲ ಬಾರಿಗೆ ಎಲೆಕ್ಟ್ರಿಕ್‌ ಇಂಜಿನ್‌ ಮೂಲಕ ರೈಲು ಸಂಚಾರ ನಡೆಸಿದೆ. ಬೆಂಗಳೂರಿನಿಂದ ಜನ ಶತಾಬ್ದಿ ರೈಲು ತನ್ನ ಮಾಮೂಲಿ ಡೀಸೆಲ್‌ ಎಂಜಿನ್‌ ಬದಲಿಗೆ ಎಲೆಕ್ಟ್ರಿಕ್‌ ಇಂಜಿನ್‌ ಮೂಲಕ ರಾತ್ರಿ 9.20ಕ್ಕೆ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿತು. 

ಎರಡು ತಿಂಗಳ ಹಿಂದೆಯೇ ಶಿವಮೊಗ್ಗ-ಬೆಂಗಳೂರು ನಡುವೆ ವಿದ್ಯುತ್‌ ಬಳಕೆಯ ರೈಲು ಸಂಚಾರಕ್ಕೆ ಲೈನ್‌ಗಳ ಅಳವಡಿಕೆ ಕಾರ್ಯ ಮುಗಿದಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. 

SHIVAMOGGA: ಕಾಡುಹಂದಿಗಳ ದಾಳಿಯಿಂದ ಗಾಯಗೊಂಡಿದ್ದ ನಾಲ್ಕು ವರ್ಷದ ಚಿರತೆ ಸಾವು!

ಈ ಮಾರ್ಗದಲ್ಲಿ ಎಲೆಕ್ಟ್ರಿಕ್‌ ರೈಲಿನ ಟ್ರಯಲ್‌ ಅನ್ನು ಜೂ.17 ಕ್ಕೆ ಎಂದು ನಿಗದಿಗೊಳಿಸಲಾಗಿದ್ದ ಸಮಯಕ್ಕಿಂತ ಮುಂಚೆಯೆ ಗುರುವಾರ ಜನಜತಾಬ್ದಿ ರೈಲಿಗೆ ಎಲೆಕ್ಟ್ರಿಕ್‌ ಇಂಜಿನ್‌ ಜೋಡಿಸಿದ್ದು, ರಾತ್ರಿ ಶಿವಮೊಗ್ಗಕ್ಕೆ ಆಗಮಿಸಿತು. ನಾಳೆ ಪುನಃ ಇದೇ ಇಂಜಿನ್‌ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿದೆ.

Latest Videos
Follow Us:
Download App:
  • android
  • ios