South East Central Railway Recruitment 2022: ಕ್ರೀಡಾ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಸೇರಲು ಭರ್ಜರಿ ಅವಕಾಶ
ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕ್ರೀಡಾ ಕೋಟದ ಮೇಲೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 5, 2022 ಕೊನೆಯ ದಿನವಾಗಿದೆ.
ಬೆಂಗಳೂರು(ಫೆ.19): ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಆಗ್ನೇಯ ಮಧ್ಯ ರೈಲ್ವೆ (South East Central Railway -SECR ) ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಸಿ ಹುದ್ದೆಗಳಿಗೆ ಕ್ರೀಡಾ ಕೋಟದ (Sports Quota) ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 5, 2022 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ತಾಣ https://secr.indianrailways.gov.in/ ಗೆ ಭೇಟಿ ನೀಡಬಹುದು.
ಅರ್ಹತೆಗಳು: ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕ್ರಾಸ್ ಕಂಟ್ರಿ, ಹ್ಯಾಂಡ್‌ಬಾಲ್, ಹಾಕಿ, ಖೋ-ಖೋ ಮತ್ತು ಟೇಬಲ್ ಟೆನ್ನಿಸ್‌ನಂತಹ ಕ್ರೀಡೆ/ಆಟಗಳಲ್ಲಿ ಭಾಗವಹಿಸಿದ್ದ ಎಲ್ಲಾ ಆಸಕ್ತ ಕ್ರೀಡಾಪಟುಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಲೆವೆಲ್ 2, 3, 4 ಮತ್ತು 5 ವಿಭಾಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
BBMP Recruitment 2022: ಕಾನೂನಿನ ಅರಿವಿದ್ದರೆ ಬಿಬಿಎಂಪಿಯಲ್ಲಿ
ಶೈಕ್ಷಣಿಕ ವಿದ್ಯಾರ್ಹತೆ: ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಾಸ್ ಮಾಡಿರಬೇಕು.
ಲೆವೆಲ್ 2 ಮತ್ತು3: ತಾಂತ್ರಿಕೇತರ ಹುದ್ದೆಗಳಿಗೆ ಕ್ರೀಡಾ ಸಾಧನೆಗಳೊಂದಿಗೆ 12 ನೇ ತರಗತಿ/ಪಿಯುಸಿ ಉತ್ತೀರ್ಣ ಆಗಿರಬೇಕು.
ತಾಂತ್ರಿಕ ಹುದ್ದೆಗಳಿಗೆ ಕ್ರೀಡಾ ಸಾಧನೆಗಳೊಂದಿಗೆ 10 ನೇ ತರಗತಿ ಅಥವಾ ಐಟಿಐ ಮಾಡಿರಬೇಕು. ಅಭ್ಯರ್ಥಿಗಳು
10 ನೇ ವಿದ್ಯಾರ್ಹತೆಯನ್ನು ಹೊಂದಿರುವವರನ್ನು ತಾಂತ್ರಿಕ ವರ್ಗಗಳಿಗೆ ಮಾತ್ರ ಪರಿಗಣಿಸಲಾಗುತ್ತದೆ ಮತ್ತು ಅಭ್ಯರ್ಥಿಗಳು ಸಂಬಂಧಿತ ವ್ಯಾಪಾರದಲ್ಲಿ ITI ಅರ್ಹತೆಯನ್ನು ಉತ್ತೀರ್ಣರಾಗಿರದಿದ್ದರೆ ಅವರ ತರಬೇತಿ ಅವಧಿಯು 03 ವರ್ಷಗಳಾಗಿರುತ್ತದೆ. ಉಳಿದವುಗಳಿಗೆ 06 ತಿಂಗಳು ತರಬೇತಿ ಇರುತ್ತದೆ.
ಲೆವೆಲ್ 4: ಕ್ರೀಡಾ ಸಾಧನೆಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಅಥವಾ 1ನೇ ವರ್ಷದ ಬಿ.ಎಸ್ಸಿ. (ಭೌತಶಾಸ್ತ್ರ) ಅಥವಾ ಕ್ರೀಡಾ ಸಾಧನೆಗಳೊಂದಿಗೆ ವಿಜ್ಞಾನದಲ್ಲಿ 12ನೇ (+2 ಹಂತ) ತರಗತಿ (ಭೌತಶಾಸ್ತ್ರ ಅಥವಾ ಗಣಿತ) ಪಾಸಾಗಿರಬೇಕು.
ಅಥವಾ ಸ್ಟೆನೋಗ್ರಫಿಯಯಲ್ಲಿ 12ನೇ (+2 ಹಂತ) (ರೈಲ್ವೆಯ ನೇಮಕಾತಿಗಾಗಿ ನಿಗದಿತ ಮಾನದಂಡಗಳ ಪ್ರಕಾರ ಹಿಂದಿ ಅಥವಾ ಇಂಗ್ಲಿಷ್) ಜೊತೆಗೆ ಕ್ರೀಡಾ ಸಾಧನೆಗಳೊಂದಿಗೆ ಉತ್ತೀರ್ಣರಾಗಿರಬೇಕು.
ಲೆವೆಲ್ 5: ಕ್ರೀಡಾ ಸಾಧನೆಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.
Indian Navy Tradesman Recruitment 2022: ನೌಕಾದಳದಲ್ಲಿ ಟ್ರೇಡ್ಸ್‌ಮ್ಯಾನ್ ಸ್ಕಿಲ್ಡ್ ಹುದ್ದೆ
ಕನಿಷ್ಠ ಕ್ರೀಡಾ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲ ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
ವರ್ಗ ಎ, ಬಿ, ಸಿ ಎಂದು ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳ ವರ್ಗೀಕರಣ ಮಾಡಲಾಗಿದೆ.
ವರ್ಗ ಎ: ಒಲಿಂಪಿಕ್ ಕ್ರೀಡಾಕೂಟದ ಹಿರಿಯ.
ವರ್ಗ ಬಿ:
ವಿಶ್ವಕಪ್ (ಜೂನಿಯರ್ / ಯೂತ್ / ಸೀನಿಯರ್)
ವಿಶ್ವ ಚಾಂಪಿಯನ್‌ಶಿಪ್‌ಗಳು (ಜೂನಿಯರ್/ಸೀನಿಯರ್)
ಏಷ್ಯನ್ ಗೇಮ್ಸ್ (ಹಿರಿಯ)
ಕಾಮನ್‌ವೆಲ್ತ್ ಗೇಮ್ಸ್ (ಹಿರಿಯ)
ಯೂತ್ ಒಲಿಂಪಿಕ್ಸ್, ಡೇವಿಸ್ ಕಪ್ (ಟೆನಿಸ್)
ಕ್ಯಾಂಪಿಯನ್ಸ್ ಟ್ರೋಫಿ (ಹಾಕಿ)
ಥಾಮಸ್ ಕಪ್ / ಉಬರ್ ಕಪ್ ಬ್ಯಾಡ್ಮಿಂಟನ್)
ವರ್ಗ ಸಿ:
ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳು (ಜೂನಿಯರ್/ಸೀನಿಯರ್)
ಏಷ್ಯನ್ ಚಾಂಪಿಯನ್‌ಶಿಪ್‌ಗಳು / ಏಷ್ಯಾ ಕಪ್ (ಜೂನಿಯರ್/ಸೀನಿಯರ್)
ದಕ್ಷಿಣ ಏಷ್ಯಾ ಒಕ್ಕೂಟಗಳು (SAF) ಆಟಗಳು (ಹಿರಿಯ)
USIC (ವಿಶ್ವ ರೈಲ್ವೆ) ಚಾಂಪಿಯನ್‌ಶಿಪ್‌ಗಳು (ಹಿರಿಯ)
ವಿಶ್ವ ವಿಶ್ವವಿದ್ಯಾಲಯ ಆಟಗಳು.
ಆಯ್ಕೆ ಪ್ರಕ್ರಿಯೆ: ಆಟದ ಕೌಶಲ್ಯ , ದೈಹಿಕ ಸಾಮರ್ಥ್ಯ, ಮತ್ತು ತರಬೇತುದಾರರ ವೀಕ್ಷಣೆ ಆಧಾರದಲ್ಲಿ 40 ಅಂಕಗಳು, ಜೊತೆಗೆ ಕ್ರೀಡಾ ಸಾಧನೆಯ ಮಾನದಂಡಗಳ ಪ್ರಕಾರ ಮಾನ್ಯತೆ ಪಡೆದ ಕ್ರೀಡಾ ಸಾಧನೆಗೆ 50 ಅಂಕಗಳು ಮತ್ತು ಶೈಕ್ಷಣಿಕ ವಿದ್ಯಾರ್ಹತೆಗೆ 10 ಅಂಕಗಳು ಮೀಸಲಿಡಲಾಗಿದ್ದು, ಇದರಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ಮತ್ತು SC/ST, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 150 ರೂ ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.