ಭಾರತ ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ

ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ/ ಪ್ರಸಾರ ಮಾಡಿದ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ-2022 ಅರ್ಜಿ ಆಹ್ವಾನಿಸಿದೆ.

Election commission invites  media For Awards  to Voting Awareness snr

 ಭಾರತ ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ

 ಮೈಸೂರು (ಅ.18):  ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ/ ಪ್ರಸಾರ ಮಾಡಿದ ಕಾರ್ಯಕ್ಕಾಗಿ ಭಾರತ ಚುನಾವಣಾ ಆಯೋಗ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ-2022 ಅರ್ಜಿ ಆಹ್ವಾನಿಸಿದೆ.

ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ (TV), ವಿದ್ಯುನ್ಮಾನ ಮಾಧ್ಯಮ (ರೇಡಿಯೋ) ಹಾಗೂ ಆನ್‌ಲೈನ್‌ (Online) /ಸಾಮಾಜಿಕ ಜಾಲತಾಣ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2022ರ ಸಾಲಿನಲ್ಲಿ ಮತದಾರರ ಜಾಗೃತಿ ಕುರಿತು ಪ್ರಕಟಿಸಿದ ಲೇಖನಗಳನ್ನು ಅಥವಾ ಪ್ರಸಾರ ಮಾಡಿದ ಸುದ್ದಿಗಳನ್ನು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬಹುದು.

ಮುದ್ರಣ ಮಾಧ್ಯಮದ ಸಂಸ್ಥೆಗಳು ತಮ್ಮ ಸುದ್ದಿಯ ತುಣುಕುಗಳನ್ನು ಪ್ರಕಟಿಸಿದ ದಿನಾಂಕ ಸೇರಿದಂತೆ ಮುದ್ರಣ ಮಾಡಿದ ಸುದ್ದಿ/ ಲೇಖನಗಳು ಹಾಗೂ ಪ್ರಕಟವಾಗಿರುವ ಸುದ್ದಿಯ ಅಳತೆಯನ್ನು ಪಿಡಿಎಫ್‌ ಸಾ¶್ಟ… ಕಾಪಿ/ ಸಂಬಂಧಿಸಿದ ಜಾಲತಾಣದ ವಿಳಾಸ/ ಪೂರ್ಣ ಅಳತೆಯ ವೃತ್ತಪತ್ರಿಕೆ ಛಾಯಾಪ್ರತಿ/ ಲೇಖನಗಳನ್ನು, ನೇರ ಸಾರ್ವಜನಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಇತರೆ ಯಾವುದೇ ವಿವರಗಳನ್ನು ಸಲ್ಲಿಸುವುದು.

ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳು (ಎಲೆಕ್ಟ್ರಾನಿಕ್‌) ಮತ್ತು ರೇಡಿಯೋ (ಎಲೆಕ್ಟ್ರಾನಿಕ್‌) ಸಂಬಂಧಿತ ಅವಧಿಯಲ್ಲಿ ನಡೆಸಿದ ಪ್ರಚಾರ/ ಕೆಲಸದ ಕುರಿತು ಸಂಕ್ಷಿಪ್ತವಾಗಿ ಮಾಹಿತಿಯನ್ನು, ಪ್ರಸಾರದ ಅವಧಿ ಮತ್ತು /ಟೆಲಿಕಾಸ್ವ್‌ ಕಾರ್ಯಕ್ರಮವನ್ನು ಸಿಡಿ ಅಥವಾ ಡಿವಿಡಿ ಅಥವಾ ಪೆನ್‌ ಡ್ರೈವ್‌ನಲ್ಲಿ ಮತದಾರರ ಜಾಗೃತಿ ಕುರಿತು ಸುದ್ದಿ ವೈಶಿಷ್ಟ್ಯಗಳು ಮತ್ತು ಆ ಅವಧಿಯಲ್ಲಿ ಪ್ರಸಾರವಾದ ಪ್ರತಿ ಸ್ಥಳದ ಒಟ್ಟು ಸಮಯ, ಹಾಗೂ ಪ್ರಸಾರ ಸಮಯದ ಮೊತ್ತ ಸಲ್ಲಿಸುವುದು.

ಆನ್‌ಲೈನ್‌ (ಇಂಟರ್ನೆಟ್‌) /ಸಾಮಾಜಿಕ ಮಾಧ್ಯಮಗಳು ಪ್ರಸಾರದ ಯಾವುದೇ ಕೆಲಸದ ಸಾರಾಂಶವನ್ನು ಒಳಗೊಂಡ ಪೋಸ್ಟ್‌ಗಳ ಸಂಖ್ಯೆ/ ಬ್ಲಾಗ್‌ಗಳು/ ಅಭಿಯಾನಗಳು/ ಟ್ವೀಟ್‌ಗಳು/ ಲೇಖನಗಳು ಇತ್ಯಾದಿಗಳನ್ನು  ಕಾಪಿ ಅಥವಾ ಸಂಬಂಧಿತ ವೆಬ್‌ ವಿಳಾಸಕ್ಕೆ ಲಿಂಕ್‌ ಜೊತೆ ಸಲ್ಲಿಸಬೇಕು.

ಆಯೋಗದ ತೀರ್ಮಾನವು ಅಂತಿಮವಾಗಿದ್ದು, ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗವು ಎಲ್ಲಾ ಹಕ್ಕುಗಳನ್ನು ಹೊಂದಿದೆ. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ… ಸಂಖ್ಯೆಗಳು ಮತ್ತು ಇ-ಮೇಲ್‌ ಅನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಅರ್ಜಿಗಳನ್ನು ನ. 30 ರೊಳಗೆ ನೇರವಾಗಿ ಲವ್ಕುಶ್‌ ಯಾದವ್‌, ಅಧೀನ ಕಾರ್ಯದರ್ಶಿ (ಸಂವಹನ) ಭಾರತದ ಚುನಾವಣಾ ಆಯೋಗ, ನಿರ್ವಚನ ಸದನ, ಅಶೋಕ ರಸ್ತೆ, ನವದೆಹಲಿ 110001. ಹಾಗೂ ಇಮೇಲ್.  ದೂ. 011-23052033 ಸಲ್ಲಿಸಬಹುದು.

ಇಂಗ್ಲಿಷ್‌/ಹಿಂದಿ ಹೊರತು ಪಡಿಸಿ ಬೇರೆ ಭಾಷೆಯಲ್ಲಿ ಸಲ್ಲಿಸ ಲಾಗುವ ಅರ್ಜಿಗಳ ಜೊತೆಗೆ ಇಂಗ್ಲಿಷ್‌ ಅನುವಾದದ ಪ್ರತಿಯೊಂದಿಗೆ ಸಲ್ಲಿಸಬೇಕು. ವಿಫಲವಾದರೆ ನಿರಾಕರಣೆಗೆ ಒಳಪಟ್ಟಿರುತ್ತದೆ. ಪ್ರಸಾರದ ವಿಷಯವನ್ನು ಸಲ್ಲಿಸುವ ಪ್ರವೇಶದಾರರು ಜ್ಯೂರಿ ವೈಶಿಷ್ಟ್ಯಗಳು/ ಕಾರ್ಯ ಕ್ರಮದ ಮೊದಲ ಹತ್ತು ನಿಮಿಷಗಳನ್ನು ಮಾತ್ರ ಬಳಸಬಹುದಾಗಿದೆ.

ಭಾರತ ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ

ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ/ ಪ್ರಸಾರ ಮಾಡಿದ ಕಾರ್ಯ

ವಿದ್ಯುನ್ಮಾನ ಮಾಧ್ಯಮ ಸಂಸ್ಥೆಗಳು (ಎಲೆಕ್ಟ್ರಾನಿಕ್‌) ಮತ್ತು ರೇಡಿಯೋ (ಎಲೆಕ್ಟ್ರಾನಿಕ್‌) ಸಂಬಂಧಿತ ಅವಧಿಯಲ್ಲಿ ನಡೆಸಿದ ಪ್ರಚಾರ/ ಕೆಲಸ

ಮುದ್ರಣ ಮಾಧ್ಯಮದ ಸಂಸ್ಥೆಗಳು ತಮ್ಮ ಸುದ್ದಿಯ ತುಣುಕುಗಳನ್ನು ಪ್ರಕಟಿಸಿದ ದಿನಾಂಕ ಸೇರಿದಂತೆ ಮುದ್ರಣ ಮಾಡಿದ ಸುದ್ದಿ/ ಲೇಖನಗಳು

Latest Videos
Follow Us:
Download App:
  • android
  • ios