ಸ್ವಾಮೀಜಿ ನೇತೃತ್ವದಲ್ಲಿ ಈದ್‌ ಮಿಲಾದ್‌ ಆಚರಣೆ

ನಗರದ ಡಾ. ಎಪಿಜೆ ಅಬ್ದುಲ್‌ ಕಲಾಂ ಫೌಂಡೇಶನ್‌ ಹಾಗೂ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌, ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಈದ್‌ ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಮೂಲಕ ನಗರದಲ್ಲಿ ಭಾನುವಾರ ಭಾವೈಕ್ಯತೆಗೆ ಸಾಕ್ಷಿ ಆಯಿತು.

Eid Milad celebrated under the leadership of Swamiji  snr

ಚಿಕ್ಕಬಳ್ಳಾಪುರ (ಅ.10): ನಗರದ ಡಾ. ಎಪಿಜೆ ಅಬ್ದುಲ್‌ ಕಲಾಂ ಫೌಂಡೇಶನ್‌ ಹಾಗೂ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌, ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಈದ್‌ ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ಮೂಲಕ ನಗರದಲ್ಲಿ ಭಾನುವಾರ ಭಾವೈಕ್ಯತೆಗೆ ಸಾಕ್ಷಿ ಆಯಿತು.

ಪ್ರವಾದಿ ಪೈಗಂಬರ್‌ ಮುಹಮ್ಮದ್‌ ಮುಸ್ತಫಾ ರವರ ಜನ್ಮ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯ(Valmiki jayanthi) ಪ್ರಯುಕ್ತ ನಗರದ ಡಾ. ಎಪಿಜೆ ಅಬ್ದುಲ್‌ ಕಲಾಂ ಫೌಂಡೇಶನ್‌ ಹಾಗೂ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿನ (Hos[ital) ನೂರಾರು ಒಳ ಮತ್ತು ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಸವೇಶ್ವರ ಶ್ರೀಮದ್‌ ಸರ್ವಧರ್ಮ ಸಂಸ್ಥಾನದ ಜಗದ್ಗುರುಗಳಾದ ಶ್ರೀ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿಗಳು, ಈದ್‌ ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಿಸಿದರು. ಈ ವೇಳೆ ಶ್ರೀಗಳನ್ನು ಡಾ. ಎಪಿಜೆ ಅಬ್ದುಲ್‌ ಕಲಾಂ ¶ೌಂಡೇಶನ್‌ ಹಾಗೂ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಸನ್ಮಾನಿಸಿದರು.

ಈ ವೇಳೆ ಡಾ.ಎಪಿಜೆ ಅಬ್ದುಲ್‌ ಕಲಾಂ ಫೌಂಡೇಶನ್‌ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಡಾ. ನಂದಿ ಬಾಷ ಮಾತನಾಡಿ, ದೇಶದಲ್ಲಿ ಎಲ್ಲಾ ಜಾತಿ, ಧರ್ಮಗಳು ಒಂದಾಗಿ ಸಾಗಬೇಕಿದೆಯೆಂದರು. ಆದ್ದರಿಂದ ಈದ್‌ ಮಿಲಾದ್‌ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಒಟ್ಟಾಗಿ ಆಚರಿಸಿದ್ದಾಗಿ ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು ಜಿಲ್ಲಾಧ್ಯಕ್ಷರಾದ ವಿ ರಾಜಶೇಖರ ತಾಲೂಕು ಅಧ್ಯಕ್ಷ ಸೈಫುಲ್ಲಾ ಝಿಯಾವುಲ್ಲಾ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಅಮಾನುಲ್ಲಾ ಸಾಹೇಬ್‌ ರೆಹಮಾನ್‌ ಸಾಬ್‌ ಮೀರ್‌ ಜರಾರ್‌ ಹುಸೇನ್‌ ಮತ್ತಿತರರು ಉಪಸ್ಥಿತರಿದ್ದರು.

  • ಸ್ವಾಮೀಜಿ ನೇತೃತ್ವದಲ್ಲಿ ಈದ್‌ ಮಿಲಾದ್‌ ಆಚರಣೆ
  • ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ: ಭಾವೈಕ್ಯತೆಗೆ ಸಾಕ್ಷಿಯಾದ ಈದ್‌ ಮಿಲಾದ್‌

ಸರಳ ಜೀವನದ ಆದರ್ಶ ತೋರಿದ ಪ್ರವಾದಿ

ಇಂದು ಪ್ರವಾದಿ ಮುಹಮ್ಮದರು ಜನಿಸಿದ ದಿನ. ವಿಶ್ವಕ್ಕೇ ಮಾದರಿ ಎಂದು ಕುರ್‌ಆನ್‌ ಪರಿಚಯಿಸಿದ ಮುಹಮ್ಮದರ ಜನ್ಮದಿನವನ್ನು ವಿಶ್ವದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅತಿರೇಕವಿಲ್ಲದ ಸರಳ ಜೀವನ ವಿಧಾನವನ್ನು ಬೋಧಿಸಿದ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ನಮ್ಮದು ಮಾದರಿ ಸಮಾಜವಾಗುವುದರಲ್ಲಿ ಸಂಶಯವಿಲ್ಲ.

ಪ್ರವಾದಿ ಮುಹಮ್ಮದರು ಜನಿಸಿದ, ಇಸ್ಲಾಮಿಕ್‌ ಕ್ಯಾಲೆಂಡರ್‌ನ 3ನೇ ತಿಂಗಳು ರಬೀವುಲ್‌ ಅವ್ವಲ್‌ ಮತ್ತೊಮ್ತೆ ಬಂದಿದೆ. ಈ ತಿಂಗಳು ಜಾಗತಿಕ ಮುಸ್ಲಿಮರಿಗೆ ಅತ್ಯಂತ ಪುಣ್ಯದ ಮಾಸ. ಈ ರಬೀವುಲ್‌ ಅವ್ವಲ್‌ ತಿಂಗಳ 12ರಂದು ಜಗತ್ತಿನೆಲ್ಲೆಡೆ ಮೀಲಾದುನ್ನಬಿ ಅಥವಾ ಈದ್‌ ಮಿಲಾದ್‌ ಆಚರಿಸಲಾಗುತ್ತದೆ. ಇಡೀ ವಿಶ್ವಕ್ಕೇ ಮಾದರಿಯಾಗಿ ತಮ್ಮನ್ನು ಸೃಷ್ಟಿಸಲಾಗಿದೆ ಎಂದು ಪ್ರವಾದಿ ಮುಹಮ್ಮದ್‌ ಅವರ ಬಗ್ಗೆ ಕುರ್‌ಆನ್‌ ಹೇಳುತ್ತದೆ. ಮದ್ಯಪಾನ, ಮಹಿಳಾ ಶೋಷಣೆ, ಅನ್ಯಾಯ, ಕರಿಯ ಬಿಳಿಯನೆಂಬ ಭೇದಭಾವಗಳನ್ನೆಲ್ಲಾ ತೊಡೆದು ಹಾಕಿದ ಮುಹಮ್ಮದರು ಜಗತ್ತಿಗೆ ಶಾಂತಿಯ ಸಂದೇಶಗಳನ್ನು ಪಸರಿಸಿದರು.

ಪ್ರವಾದಿಯವರು ತಮ್ಮ ಅನುಯಾಯಿಗಳಿಗೆ ಬೋಧಿಸಿದ ಪ್ರಮುಖ ವಿಚಾರಗಳಲ್ಲಿ ಒಂದು ಮದ್ಯ ನಿಷೇಧ. ಮದ್ಯವು ಪಾಪದ ಜನನಿ, ಎಲ್ಲ ಕೆಡುಕುಗಳ ಕೀಲಿಕೈ ಎಂದು ಪ್ರವಾದಿಯವರು ಎಚ್ಚರಿಸಿದರು. ಮುಹಮ್ಮದರು 1400 ವರ್ಷಗಳ ಹಿಂದೆ ಮಕ್ಕಾದಲ್ಲಿ ಜನಿಸಿದಾಗ ಮದ್ಯಪಾನ ಅಲ್ಲಿ ಸಾಮಾನ್ಯ ವಿಷಯವಾಗಿತ್ತು. ಇಂದಿನಂತೆ ಬಹಳ ಸುಲಭದಲ್ಲಿ ಮದ್ಯ ಲಭಿಸುತ್ತಿತ್ತು. ಮದ್ಯಪಾನ ಮಾಡಿ ನಶೆಯಲ್ಲಿರುವುದನ್ನು ಜನರು ಬಹಳ ಇಷ್ಟಪಡುತ್ತಿದ್ದ ಕಾಲವಾಗಿತ್ತು. ಮುಹಮ್ಮದರು ಅಂತಹ ವಾತಾವರಣದಲ್ಲಿ ಜನಿಸಿದರೂ ಎಂದಿಗೂ ಮದ್ಯವನ್ನು ಮುಟ್ಟಿರಲಿಲ್ಲ. ಅವರು ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸಿದಾಗ ಮೊದಲು ಎತ್ತಿಕೊಂಡ ವಿಷಯ ಮದ್ಯ ನಿಷೇಧವಾಗಿತ್ತು.

Gandhi Jayanti 2022: ಲೈಫ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಗಾಂಧೀಜಿಯವರ ಮಾತುಗಳು

ತಾವು ಸಚ್ಚಾರಿತ್ರ್ಯವಂತರು, ಸಜ್ಜನರು ಎಂದು ಕರೆಸಿಕೊಳ್ಳುವ ವ್ಯಕ್ತಿಗಳು ಕೂಡ ಮದ್ಯಪಾನಿಗಳಾಗಿ ಮಾರ್ಪಟ್ಟಿರುವ ಸಮಾಜದಲ್ಲಿ ಬದುಕುತ್ತಿರುವ ನಮಗೆ ಮದ್ಯವು ಸಮಾಜದಲ್ಲಿ ಉಂಟುಮಾಡುವ ವಿನಾಶಗಳ ಬಗ್ಗೆ ಆಗಲೇ ಎಚ್ಚರಿಸಿದ್ದ ಪ್ರವಾದಿಯವರು ಆದರ್ಶರಾಗಿ ನಿಲ್ಲುತ್ತಾರೆ. ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸದೆ ಯಾವುದೇ ಸಮಾಜವನ್ನು ಕೆಡುಕಿನಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಸಾರಿದ ಅವರು, ಸಂಪೂರ್ಣ ಪಾನ ನಿಷೇಧ ಕಾಯ್ದೆಯನ್ನು ತಮ್ಮ ಆಡಳಿತ ಕಾಲದಲ್ಲಿ ಜಾರಿಗೆ ತಂದರು.

Latest Videos
Follow Us:
Download App:
  • android
  • ios