ಗದಗ(ಜೂ.11): ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ಲಾಬಿ ಜೋರಾಗಿದ್ದು, ಬಲವಂತದ ಬದಲಾಗಿ ಪಾಲಕರನ್ನು ಶಾಲೆಗೆ ಕರೆಯಿಸಿ ಪ್ರೀತಿ ವಿಶ್ವಾಸದಿಂದಲೇ ಶುಲ್ಕ ವಸೂಲಿ ಮಾಡುತ್ತಿದ್ದಾರೆ.

ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ 100 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು ಇವುಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಶಾಲೆಗಳು ಜೂನ್‌ 1ನೇ ತಾರೀಖಿನಿಂದಲೇ ಶುಲ್ಕ ವಸೂಲಿ ಮಾಡುತ್ತಿವೆ. ಆದರೆ ನಮಗೂ ಶಾಲೆಗಳನ್ನು ನಡೆಸುವುದು ಕಷ್ಟವಾಗಿದೆ. ಕಾರ್ಮಿಕ ಇಲಾಖೆ ನಿಯಮಗಳ ಅಡಿಯಲ್ಲಿ ಶಿಕ್ಷಕರಿಗೆ ವೇತನ ನೀಡಬೇಕು. ಹಲವಾರು ಸಮಸ್ಯೆಗಳಿರುತ್ತವೆ ಶುಲ್ಕ ಭರಿಸಿ ಅನುಕೂಲ ಕಲ್ಪಿಸಿ ಎಂದು ವಿನಂತಿಸುತ್ತಲೇ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಜಿಲ್ಲೆಯಲ್ಲಿನ ಯಾವುದೇ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ. ಕೆಲವು ಶಾಲೆಗಳಲ್ಲಿ ಮಾರ್ಚ್‌ ತಿಂಗಳಲ್ಲೇ ಈ ಬಗ್ಗೆ ಪಾಲಕರಿಗೆ ಆದರೆ ಕೊರೋನಾ ಬಂದ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ತಿಳಿಸಿದ್ದರು.

5ನೇ ತರಗತಿವರೆಗೆ ಆನ್‌ಲೈನ್‌ ಕ್ಲಾಸಿಲ್ಲ: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ!

ಶೇ.10 ರಷ್ಟು ವಿನಾಯಿತಿ

ಗದಗ ನಗರದಲ್ಲಿನ ಕೆಲವು ಶಾಲೆಗಳು ಶುಲ್ಕ ವಸೂಲಿಗೆ ಹೊಸ ಮಾರ್ಗವನ್ನು ಕಂಡು ಕೊಂಡಿದ್ದು ಶಾಲಾ ಶುಲ್ಕವನ್ನು ಯಾವ ಪಾಲಕರು ಸ್ವಯಂ ಪ್ರೇರಣೆಯಿಂದ ಬಂದು ಭರಿಸುತ್ತಾರೋ ಅವರಿಗೆ ಒಟ್ಟು ಶುಲ್ಕದಲ್ಲಿ ಶೇ. 10ರಷ್ಟು ವಿನಾಯ್ತಿ ನೀಡುತ್ತಿದ್ದು ಈ ಮೂಲಕ ಪಾಲಕರಲ್ಲಿ ಶುಲ್ಕ ಭರಿಸಲು ಪ್ರೇರಣೆ ಮಾಡುತ್ತಿದ್ದಾರೆ. ಅರ್ಧ ವರ್ಷದ ಫೀಸ್‌ ಕಟ್ಟಿದರೆ ಶೇ. 10ರಷ್ಟು ಪೂರ್ಣ ಪ್ರಮಾಣದ ಶುಲ್ಕವನ್ನು ಒಂದೇ ಬಾರಿಗೆ ಭರಿಸುವವರಿಗೆ ಶೇ. 15 ರಷ್ಟು ವಿನಾಯ್ತಿ ನೀಡುತ್ತಿದ್ದು, ಆ ಮೂಲಕ ಪಾಲಕರಲ್ಲಿ ಒತ್ತಾಯ ಮಾಡದೇ ತಮ್ಮ ಶುಲ್ಕ ವಸೂಲಿ ಮುಂದಾಗಿದ್ದಾರೆ.

ಉಳ್ಳವರಿಗೆ ಅನುಕೂಲ

ಗದಗ ನಗರದ ಕೆಲವು ಶಾಲೆಗಳು ಶುಲ್ಕ ಭರಿಸುವವರಿಗೆ ನೀಡಿರುವ ವಿನಾಯಿತಿ ಕೂಡಾ ಬಡ, ಮಧ್ಯಮ ವರ್ಗದವರಿಗೆ ಉಪಯೋಗವಾಗುವುದಕ್ಕಿಂತ ಉಳ್ಳವರಿಗೆ ಹೆಚ್ಚಿಗೆ ಅನುಕೂಲವಾಗಿದೆ. ಅಷ್ಟೊಂದು ಹಣವನ್ನು ಭರಿಸುವ ಶಕ್ತಿ ಇರುವವರೇ ಶುಲ್ಕ ತುಂಬಿ ವಿನಾಯಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರಾರಂಭದ ದಿನಾಂಕವೇ ನಿಗದಿಯಾಗಿಲ್ಲ. ಶಾಲೆಗಳು ಪ್ರಾರಂಭಕ್ಕೆ ಸರ್ಕಾರ ಇನ್ನು ದಿನಾಂಕವನ್ನೇ ನಿಗದಿ ಮಾಡಿಲ್ಲ. ಆಗಲೇ ಶಾಲೆಯ ಶುಲ್ಕದ ವಿಷಯದಲ್ಲಿ ಖಾಸಗಿ ಶಾಲೆಗಳು ನಡೆಸುತ್ತಿರುವ ಒತ್ತಡದ ಪರಿಣಾಮವೇ ಇಂದು ಸರ್ಕಾರ ಶಾಲೆ ಪ್ರಾರಂಭದ ಕುರಿತು ಚರ್ಚಿಸುತ್ತಿದೆ. ಇನ್ನು ಬಹುತೇಕ ಅಂತಾರಾಷ್ಟ್ರೀಯ ಗುಣಮಟ್ಟಎಂದು ಬಿಂಬಿಸಿಕೊಂಡಿರುವ ಆಯಾ ತಾಲೂಕು ಕೇಂದ್ರದಲ್ಲಿ ಅತ್ಯತ್ತಮ ಶಾಲೆ ಎಂದು ಗುರುತಿಸಲ್ಪಡುವ ಶಾಲೆಗಳಲ್ಲಿ ಪಾಲಕರೇ ಹೋಗಿ ಶುಲ್ಕ ತುಂಬಿ ತಮ್ಮ ಮಕ್ಕಳ ಸೀಟ್‌ ಕಾಯ್ದಿದಿರಿಸಿ ಬಂದ ಉದಾಹಣೆಗಳು ಸಾಕಷ್ಟಿವೆ.