ಮಂಡ್ಯ(ಫೆ.25): ಹಲವು ಸಾರಿ ಹಿಂದೆ ಅಲೆದು ಮನವಿ ಸಲ್ಲಿಸಿದರೂ ಕ್ಯಾರೇ ಅನ್ನದವರ ಮಧ್ಯೆಯೇ ವಾಟ್ಸಾಪ್ ಮೆಸೇಜ್ ನೋಡು ಪರಿಶೀಲನೆಗೆ ಬಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.

ವಾಟ್ಸಪ್‌ನಲ್ಲಿ ಬಂದ ದೂರು ಆಧರಿಸಿ ಪರಿಶೀಲನೆಗೆ ಬಂದ ಸಚಿವ ಶ್ರೀರಂಗಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಸುರೇಶ್ ಕುಮಾರ್ ದಿಢೀರ್ ಭೇಟಿ ಕೊಟ್ಟಿದ್ದಾರೆ.

ಕೋಲಾರ: ಮಾವು ರಕ್ಷಿಸಲು ಮೋಹಕ ಬಲೆ

ಶಾಲೆಗೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಸಚಿವರ ವಾಟ್ಸಪ್‌ನಲ್ಲಿ ದೂರು ಬಂದಿತ್ತು. ಸ್ನೇಹಿತರೊಬ್ಬರು ನೀಡಿದ ದೂರು ಆಧರಿಸಿ ಮೊರಾರ್ಜಿ ಶಾಲೆಗೆ ದಿಢೀರ್ ಭೇಟಿ ಕೊಟ್ಟ ಸುರೇಶ್ ಕುಮಾರ್ ಅಧಿಕಾರಿಗಳ ಜೊತೆ ಶಾಲೆ ವಾತಾವರಣ ಪರಿಶೀಲಿಸಿದ್ದಾರೆ.

ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಸುರೇಶ ಕುಮಾರ್, ಸ್ನೇಹಿತರು ನೀಡಿದ ದೂರಿನ ಮೇರೆಗೆ ಮೊರಾರ್ಜಿ ಶಾಲೆಗೆ ಆಗಮಿಸಿದ್ದೇನೆ. ಶಾಲೆಯಲ್ಲಿ ಕುಡಿಯುವ ನೀರಿಲ್ಲ, ಮಲಗಲು ಸ್ಥಳವಿಲ್ಲ , ಸ್ನಾನಕ್ಕೆ ಬಿಸಿನೀರು ಕೊರತೆ ಇದೆ ಎಂದು ಸ್ನೇಹಿತರೊಬ್ಬರು ವಾಟ್ಸಪ್‌ನಲ್ಲಿ ಕಳುಹಿಸಿದ್ದರು. ಇಂದು ನಂಜನಗೂಡಿನಲ್ಲಿದ್ದ ಅಧಿಕೃತ ಕಾರ್ಯಕ್ರಮಕ್ಕೆ ತೆರಳಬೇಕಾದ್ರೆ ಮಾರ್ಗ ಮಧ್ಯೆ ಈ ಶಾಲೆಗೆ ಬಂದಿದ್ದೇನೆ ಎಂದಿದ್ದಾರೆ.

ನೆಲದಲ್ಲಿ ಕುಳಿತು ಮಕ್ಕಳೊಂದಿಗೆ ಬಿಸಿಯೂಟ ಸವಿದ ಶಿಕ್ಷಣ ಸಚಿವ

ಇಲ್ಲಿನ ಮಕ್ಕಳ ಜೊತೆ ಮಾತನಾಡಿದೆ. ವಸತಿ ಶಾಲೆಗೆ ಬೇಕಾದ ಸೌಕರ್ಯ ಈ ಶಾಲೆಯಲ್ಲಿ ಇಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಯೋಗ್ಯ ವಾತಾವರಣ ಸೃಷ್ಟಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.