ಕೋಲಾರ(ಫೆ.05): ಶಿಕ್ಷಣ ಸಚಿವ ಮಕ್ಕಳೊಂದಿಗೆ ಬಿಸಿಯೂಟ ಸವಿದಿದ್ದಾರೆ. ನೆಲದಲ್ಲಿಯೇ ಕುಳಿತ ಸಚಿವರು ಮಕ್ಕಳ ಜೊತೆಗೆ ಸಿರಿ ಧಾನ್ಯಗಳ ಊಟ ಸೇವಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಪರಿಶೀಲಿಸಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನಂತರ ಶಾಲೆಯಲ್ಲಿಯೇ ಊಟ ಮಾಡಿದ್ದಾರೆ.

ಕೋಲಾರ ತಾಲೂಕಿನ ವಡಗೂರು ಗ್ರಾಮಕ್ಕೆ ಆಗಮಿಸಿದ ಸಚಿವರು ಮಕ್ಕಳೊಂದಿಗೆ ಊಟ ಮಾಡಿದ್ದಾರೆ. ಮಕ್ಕಳೊಟ್ಟಿಗೆ ಸಿರಿ ಧಾನ್ಯಗಳ ಊಟ ಸವಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪುಟ್ಟ ಮಗು ರಂಜಿತ್‌ನೊಂದಿಗೆ ಊಟ ಮಾಡಿದ್ದಾರೆ.

ವಾರಂಟ್ ಜಾರಿ ಮಾಡಲು ಹೋದ ಕೋರ್ಟ್ ಸಿಬ್ಬಂದಿ ಮೇಲೆಯೇ ಹಲ್ಲೆ

ಸಚಿವರು ಪಾಯಸ, ಹೆಸರು ಬೇಳೆ ಪಲ್ಯ, ಕಾಳು ಸಾರು, ಅನ್ನ ಸವಿದಿದ್ದಾರೆ. ಸಚಿವರೊಂದಿಗೆ ಎಂಎಲ್‌ಸಿ ನಾರಾಯಣಸ್ವಾಮಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಜಿಲ್ಲಾಧಿಕಾರಿ ಜಿ..ಮಂಜುನಾಥ್ ಸಾಥ್ ಕೊಟ್ಟಿದ್ದಾರೆ.

ಆಂಧ್ರಪ್ರದೇಶ ಗಡಿ ಶಾಲೆಯಲ್ಲಿ ಕನ್ನಡಕ್ಕೆ ಕೊಕ್‌: ಸುರೇಶ್‌ ಆಕ್ಷೇಪ