ಕೋಲಾರ(ಫೆ.05): ವಾರಂಟ್ ಜಾರಿ ಮಾಡಲೆಂದು ಹೋದ ಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದ ಮೇರೆಗೆ ವಾರಂಟ್ ಜಾರಿ ಮಾಡಲು ಹೋದ ಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ವಾರಂಟ್ ಜಾರಿ ಮಾಡಲು ಹೋದ ಕೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದ್ದು, ಕೋಲಾರ ನಗರದ ಪಿ.ಸಿ.ಬಡಾವಣೆಯಲ್ಲಿ ಘಟನೆ ನಡೆದಿದೆ.

ತಾಯಿಯನ್ನೇ ಕೊಂದು ಲವರ್ ಜೊತೆ ಎಸ್ಕೇಪ್ ಆಗಿದ್ದ ಅಮೃತಾ ಅರೆಸ್ಟ್

ಬಂಗಾರಪೇಟೆ ಕೋರ್ಟ್‌ನ ಸಿಬ್ಬಂದಿ ಅಮೀನಾ ನಾರಾಯಣಪ್ಪ ಮತ್ತು ಅವರ ಸಹಾಯಕರು ಹಲ್ಲೆಗೊಳಗಾದವರು. ನಾರಾಯಣಸ್ವಾಮಿ ಹಾಗೂ ಇತರರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ಸಿವಿಲ್ ವಿವಾದಕ್ಕೆ ಸಂಬಂಧಿಸಿದಂತೆ ವಾರಂಟ್ ಜಾರಿ ಮಾಡಲು‌‌ ಹೋಗಿದ್ದಾಗ ಘಟನೆ ಸಂಭವಿಸಿದೆ.

ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

ಬಂಗಾರಪೇಟೆ ಸಿವಿಲ್ ನ್ಯಾಯಾಲಯದಿಂದ ವಾರಂಟ್ ಹೊರಡಿಸಲಾಗಿತ್ತು. ಅಮೀನಾ ನಾರಾಯಣಪ್ಪ ಅವರು ಕೋಲಾರ ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ‌ ನಾರಾಯಣಸ್ವಾಮಿಯನ್ನು ಬಂಧಿಸಲಾಗಿದ್ದು, ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೇ ಸ್ವಂತ ಮಗನನ್ನು ಕಿಡ್ನ್ಯಾಪ್ ಮಾಡಿದ ತಂದೆ..!