ಸುಬ್ರಹಣ್ಯ(ಡಿ.03): ಪುಣ್ಯ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಷಷ್ಠಿಯ ದಿನವಾದ ಸೋಮವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 314 ಮಂದಿ ಎಡೆಸ್ನಾನ ಸೇವೆಗೈದಿದ್ದಾರೆ.

ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು. ಚೌತಿ ದಿನ 100 ಭಕ್ತರು, ಪಂಚಮಿ ದಿನ 399 ಮಂದಿ ಹಾಗೂ ಷಷ್ಠಿಯಂದು 314 ಭಕ್ತರು ಈ ಸೇವೆ ನೆರವೇರಿಸಿದ್ದರು. ಚೌತಿ, ಪಂಚಮಿ ಹಾಗೂ ಷಷ್ಠಿಯಂದು ಮೂರು ದಿನ ಭಕ್ತಾದಿಗಳು ಸೇವೆ ನೆರವೇರಿಸುವುದರೊಂದಿಗೆ ಎಡೆಸ್ನಾನ ಸಮಾಪ್ತಿಯಾಯಿತು.

ಕೃಷ್ಣಮಠದಲ್ಲಿ ಎಡೆಸ್ನಾನಕ್ಕೂ ವಿದಾಯ: ಪಲಿಮಾರು ಶ್ರೀ ದಿಟ್ಟ ನಿರ್ಧಾರ!

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಮತ್ತು ಕುಕ್ಕೆ ದೇವಳದ ಆಡಳಿತಾಧಿಕಾರಿ ಎಂ. ಜೆ. ರೂಪ, ಕಾರ್ಯನಿರ್ವಹಣಾಧಿಕಾರಿ ಹಾಗೂ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್‌ ಉಳ್ಳಾಲ್‌, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್‌, ಆಗಮ ಪಂಡಿತರು, ಶ್ರೀ ದೇವಳದ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್‌, ಶಿಷ್ಠಾಚಾರ ಅಧಿಕಾರಿ ಕೆ. ಎಂ. ಗೋಪಿನಾಥ್‌ ನಂಬೀಶ ಮತ್ತು ದೇವಳದ ಸಿಬ್ಬಂದಿ ಉಪಸ್ಥಿತರಿದ್ದರು. ಎಎಸ್‌ಪಿ ದಿನಕರ ಶೆಟ್ಟಿನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂದೋಬಸ್‌್ತ ಮಾಡಿದ್ದರು.

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ