ಡಿಕೆಶಿ ಪರಮಾಪ್ತಗೆ ಎದುರಾಯ್ತು ಸಂಕಷ್ಟ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರಮಾಪ್ತರೊರ್ವರಿಗೂ ಇದೀಗ ಸಂಕಷ್ಟ ಎದುರಾಗಿದೆ. ಏನದು..? ಯಾರದು..?
ರಾಮನಗರ (ಅ.08): ಸಿಬಿಐ ಅಧಿಕಾರಿಗಳ ದಾಳಿ ಬೆನ್ನ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ರಾಮನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎ.ಇಕ್ಬಾಲ್ ಹುಸೇನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅ.9 ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.
ದೆಹಲಿ ಇಡಿ ಕಚೇರಿಯಲ್ಲಿ ಸೆ.17 ಮತ್ತು ಅ.1ರಂದು ಇಕ್ಬಾಲ್ ಹುಸೇನ್ ವಿಚಾರಣೆಗೆ ಒಳಪಟ್ಟಿದ್ದರು. ಇದಾದ ಮೂರು ದಿನಗಳ ನಂತರ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಡಿ.ಕೆ.ಸುರೇಶ್ ಅವರಿಗೆ ಸೇರಿದ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.
ಡಿಕೆಶಿ ಭೇಟಿ ಮಾಡಿದ ಜೆಡಿಎಸ್ ಮುಖಂಡ ಜಿಟಿಡಿ .
ಮೊದಲ ಹಂತದ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಇಕ್ಬಾಲ್ ಅವರಿಗೆ 10 ವರ್ಷಗಳ ಆದಾಯ ಮೂಲ ಹಾಗೂ ಬ್ಯಾಂಕ್ ವಿವರ ಒದಗಿಸುವಂತೆ ಸೂಚನೆ ನೀಡಿತ್ತು. ಅದರಂತೆ ಎರಡನೇ ಬಾರಿಯ ವಿಚಾರಣೆಯಲ್ಲಿ ಇಕ್ಬಾಲ್ ದಾಖಲೆಗಳನ್ನು ಒದಗಿಸಿ ವಿಚಾರಣೆ ಮುಗಿಸಿ ಬಂದಿದ್ದರು. ಹೆಚ್ಚಿನ ವಿಚಾರಣೆಗಾಗಿ ಅ.9ರಂದು ಹಾಜರಾಗುವಂತೆ ಇಕ್ಬಾಲ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.