* ಕರಕುಶಲ ಕರ್ಮಿಗಳು, ಸಣ್ಣ, ಅತೀ ಸಣ್ಣ ಉದ್ದಿಮೆಗಳ ಪುನಶ್ಚೇತನಕ್ಕೆ ಮೇಳ ಸಹಕಾರಿ* ಯುವ ಜನರು ದೇಶಿ ಸಂಸ್ಕೃತಿಗೆ ಸಾಗುತ್ತಿರುವುದು ಉತ್ತಮ ಬೆಳವಣಿಗೆ* ಸ್ವದೇಶಿ ಮೇಳದಲ್ಲಿ ಕೇವಲ ಸ್ವದೇಶಿ ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ಮಾತ್ರ ಅವಕಾಶ
ಬೆಂಗಳೂರು(ಏ.11): ಸ್ವದೇಶಿ ವಸ್ತುಗಳ ಬಳಕೆಯಿಂದ ವಿದೇಶಿ ವಸ್ತುಗಳ ಆಮದು ಪ್ರಮಾಣ ಕಡಿಮೆಯಾಗಲಿದೆ. ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ದೇಶದಲ್ಲಿ ಆರ್ಥಿಕತೆ(Economy) ಸದೃಢವಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್(Thaawarchand Gehlot) ಅಭಿಪ್ರಾಯಪಟ್ಟರು.
ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್-ಕರ್ನಾಟಕ ಆಯೋಜಿಸಿದ್ದ ಸ್ವದೇಶಿ ಮೇಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಸ್ವದೇಶಿ ಮೇಳಗಳನ್ನು ಪ್ರೋತ್ಸಾಹಿಸುವುದರಿಂದ ಇಲ್ಲಿನ ಕರಕುಶಲ ಕರ್ಮಿಗಳು, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳ ಪುನಶ್ಚೇತನಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸ್ವದೇಶಿ ಜಾಗರಣ ಮಂಚ್(Jaganran Manch) ಸಮಾಜದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
Ravichandran: ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್
ಸ್ವದೇಶಿ ಮೇಳದಲ್ಲಿ ಕೇವಲ ಸ್ವದೇಶಿ ವಸ್ತುಗಳ ಮಾರಾಟ, ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡದೆ, ಸಾಂಸ್ಕೃತಿಕ ಮತ್ತು ವೈಚಾರಿಕ ಕಾರ್ಯಕ್ರಮಗಳಿಂದ ಜನರಲ್ಲಿ ಸ್ವದೇಶಿ ಭಾವ ಮೂಡಿಸುವ ಪ್ರಯತ್ನ ಆಗುತ್ತಿರುವುದು ಸ್ವಾಗತಾರ್ಹ. ಸ್ವದೇಶಿ ಮೇಳದಿಂದ ದೇಶದ(India) ಜನರಲ್ಲಿ ದೇಸಿ ವಸ್ತುಗಳನ್ನು ಕೊಳ್ಳುವ ಮನಸ್ಥಿತಿ ಹೆಚ್ಚಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಯುವ ಜನರು ದೇಸಿ ಸಂಸ್ಕೃತಿ, ಉತ್ಪನ್ನಗಳತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ದೇಶದ ಆರ್ಥಿಕತೆಯು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾವು 40 ವರ್ಷಗಳ ಹಿಂದೆ ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರಾಗಿದ್ದ ಸಮಯವನ್ನು ಸ್ಮರಿಸಿದರು. ಸ್ವದೇಶಿ ಜಾಗರಣ ಮಂಚ್ ಸಂಸ್ಥಾಪಕ ದತ್ತೋಪಂತ್ ಠೇಂಗಡಿ ಅವರು ಭಾರತೀಯ ಮಜ್ದೂರ್ ಸಂಘದಲ್ಲಿ ಮಾಡಿದ ಕಾರ್ಯಗಳನ್ನು ಸ್ಮರಿಸಿದರು.
ಸ್ವದೇಶಿ ಜಾಗರಣ ಮಂಚ್‌ನ ರಾಷ್ಟ್ರೀಯ ಸಂಘಟಕ ಕಾಶ್ಮೀರಿಲಾಲ್ ಮಾತನಾಡಿ, ದೇಶದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಸ್ವಾವಲಂಬಿ ಭಾರತ್ ಅಭಿಯಾನ ನಡೆಯುತ್ತಿದೆ. ಇನ್ನೂ ಒಂದೂವರೆ ವರ್ಷ ಅಭಿಯಾನ ನಡೆಯಲಿದ್ದು, ಅದಕ್ಕೆ ಪ್ರೋತ್ಸಾಹ ಕೊಡುವ ರೀತಿಯಲ್ಲಿ ಈ ಸ್ವದೇಶಿ ಮೇಳ ಆಯೋಜಿಸಲಾಗಿತ್ತು. ಸ್ವದೇಶಿ ಮೇಳದಲ್ಲಿ ನಿರೀಕ್ಷೆಗೂ ಮೀರಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ವದೇಶಿ ಮೇಳಗಳ ಆಯೋಜನೆಗೆ ಸ್ಫೂರ್ತಿ ಸಿಕ್ಕಿದೆ ಎಂದರು.
ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕ ಎನ್.ಆರ್.ಮಂಜುನಾಥ್, ದಕ್ಷಿಣ ಮಧ್ಯ ಕ್ಷೇತ್ರ ಸಹ ಸಂಯೋಜಕ ಲಿಂಗಮೂರ್ತಿ, ಸಂಸದ ತೇಜಸ್ವಿ ಸೂರ್ಯ, ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಸಂಚಾಲಕ ಪ್ರಕಾಶ್ ಬೆಳವಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Ukraine ಯುದ್ಧದಲ್ಲಿ ಮೃತನಾದ ನವೀನ್ ಮನೆಗೆ ರಾಜ್ಯಪಾಲರ ಭೇಟಿ, ಸಾಂತ್ವನ
ಮೇಳಕ್ಕೆ 2.25 ಲಕ್ಷ ಜನರು ಭೇಟಿ
ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಕಳೆದ ಐದು ದಿನಗಳಿಂದ ನಡೆದ ಸ್ವದೇಶಿ ಮೇಳ ಯಶಸ್ವಿಯಾಗಿದ್ದು, ಸುಮಾರು 2.25 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ. ಮೇಳದಲ್ಲಿ ನಿರ್ಮಿಸಲಾದ 220 ಮಳಿಗೆಗಳಲ್ಲಿ ಸ್ವದೇಶಿ ವಸ್ತುಗಳ ಖರೀದಿಯಲ್ಲಿ ಗ್ರಾಹಕರಿಂದ ನಿರೀಕ್ಷೆಗೂ ಮೀರಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ವದೇಶಿ ಮೇಳ ಆಯೋಜನೆ ಮುನ್ನವೇ ಸ್ವದೇಶಿ ಜಾಗರಣ ಮಂಚ್-ಕರ್ನಾಟಕದ ಕಾರ್ಯಕರ್ತರು ಸುಮಾರು 80 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ಮಾಡಿ, ಮೇಳದ ಬಗ್ಗೆ ಮಾಹಿತಿ ನೀಡಿದ್ದರು. ವೈಚಾರಿಕ ಕಾರ್ಯಕ್ರಮದೊಂದಿಗೆ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ವದೇಶಿ ಜಾಗರಣ ಮಂಚ್ ಸಾರ್ವಜನಿಕರ ಗಮನ ಸೆಳೆದಿತ್ತು. ಹೀಗೆ ಕಳೆದ ಐದು ದಿನಗಳ ಸ್ವದೇಶಿ ಮೇಳ ಯಶಸ್ವಿಯಾಗಿದ್ದು ಭಾನುವಾರ ಮುಕ್ತಾಯಗೊಂಡಿತು.
ವಿವಿಧ ಕಾರ್ಯಕ್ರಮ
ಸ್ವದೇಶಿ ಮೇಳದಲ್ಲಿ ಭಾನುವಾರ ಬೆಳಗ್ಗೆ ಸ್ವದೇಶಿ ವಸ್ತು ಭಂಡಾರ ತರಬೇತಿ ಕಾರ್ಯಾಗಾರ ನಡೆಯಿತು. ಮಧ್ಯಾಹ್ನ ಆಯುರ್ವೇದ ತಜ್ಞ ಡಾ.ಗಿರಿಧರ್ ಕಜೆ ಅವರಿಂದ ಜಗತ್ತಿಗೆ ಭಾರತದ ಕೊಡುಗೆ ಆಯುರ್ವೇದ ಎಂಬ ವಿಷಯದ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ರಾತ್ರಿ ಸಂಸ್ಕಾರ ಭಾರತೀ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಬಡಿಕ್ಕಿಲ ಮತ್ತು ತಂಡದಿಂದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಕಾರ್ಯಕ್ರಮ ನಡೆಯಿತು.
