ಕೋಲಾರದಲ್ಲಿ ಪರಿಸರ ಸ್ನೇಹಿ ದೀಪಾವಳಿ, ಪಟಾಕಿ ಖರೀದಿಗೆ ಬಂದವರಿಗೆ ಗಿಡಗಳ ವಿತರಣೆ
ಕೋಲಾರದಲ್ಲಿ ಈ ಬಾರಿ ವಿಭಿನ್ನವಾಗಿ ದೀಪಾವಳಿ ಹಬ್ಬ ಆಚರಿಸಲಾಗ್ತಿದೆ. ಒಂದೂ ಕಡೆ ಬಿರುಸಿನಿಂದ ಪಟಾಕಿ ಖರೀದಿಸುತ್ತಿರುವ ಜನರು. ಚಿಕ್ಕ ಮಕ್ಕಳಿಂದಿಡಿದು ದೊಡ್ಡವರವರಗೂ ಪಟಾಕಿ ವ್ಯಾಪಾರ. ಮತ್ತೊಂದೆಡೆ ಪಟಾಕಿ ಖರೀದಿಸೋಕ್ಕೆ ಬಂದಿರುವ ಗ್ರಾಹಕರಿಗೆ ಗಿಡಗಳ ವಿತರಣೆ ಕಾರ್ಯಕ್ರಮ
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಅ.23): ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಪಟಾಕಿ ಸಿಡಿಸಿ ಸಂಭ್ರಮಿಸೋಣ ಅದೆಷ್ಟೋ ಜನರು ಪ್ಲಾನ್ ಮಾಡಿರುತ್ತಾರೆ. ಕೆಲವರಂತು ತರಹೇವಾರಿ ಪಟಾಕಿಗಳನ್ನು ಖರೀದಿಸಿ ಹಬ್ಬಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಪಟಾಕಿ ಸಿಡಿಸೋದ್ರಿಂದ ಪರಿಸರಕ್ಕೆ ಆಗುವ ಹಾನಿಗಳು ಅದೆಷ್ಟೋ, ಹೀಗಾಗಿ ಕೋಲಾರದಲ್ಲಿ ಈ ಬಾರಿ ವಿಭಿನ್ನವಾಗಿ ದೀಪಾವಳಿ ಹಬ್ಬ ಆಚರಿಸಲಾಗ್ತಿದೆ. ಒಂದೂ ಕಡೆ ಬಿರುಸಿನಿಂದ ಪಟಾಕಿ ಖರೀದಿಸುತ್ತಿರುವ ಜನರು. ಚಿಕ್ಕ ಮಕ್ಕಳಿಂದಿಡಿದು ದೊಡ್ಡವರವರಗೂ ಪಟಾಕಿ ವ್ಯಾಪಾರ. ಮತ್ತೊಂದೆಡೆ ಪಟಾಕಿ ಖರೀದಿಸೋಕ್ಕೆ ಬಂದಿರುವ ಗ್ರಾಹಕರಿಗೆ ಗಿಡಗಳ ವಿತರಣೆ ಕಾರ್ಯಕ್ರಮ . ಅಂದಹಾಗೆ ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಜ್ಯೂನಿಯರ್ ಕಾಲೇಜು ಆವರಣದಲ್ಲಿ. ದೀಪಾವಳಿ ಹಬ್ಬ ಬತಿ೯ದಂತೆ ಎಲ್ಲಿ ನೋಡಿದ್ರು ಪಟಾಕಿಗಳದ್ದೆ ಅಬ್ಬರ ಮನೆಯ ಮುಂದೆ ಉರಿಸುವ ಪಟಾಕಿಗಳಿಂದ ಹಿಡಿದು ಆಕಾಶಕ್ಕೆ ಮುತ್ತಿಕುವ ಪಟಾಕಿಗಳವರೆಗೂ ಖರೀದಿಸಿ ಜನರು ಸಂಭ್ರಮಿಸುತ್ತಾರೆ. ಆದ್ರೆ ಪಟಾಕಿ ಸಿಡಿಸೋದ್ರಿಂದ ಆಗುವ ಪರಿಸರ ಹಾನಿ ಬಗ್ಗೆ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ, ಪಟಾಕಿ ಸಿಡಿಸುವಾಗ ಸ್ಪೋಟಕ ವಸ್ತು ಸಿಡಿದು ಗಾಯಗಳಾಗಿ ಅದೆಷ್ಟೋ ಮಕ್ಕಳು ಗಾಯಗೊಂಡು ಆಸ್ಪತ್ರೆ ಸಹ ಸೇರುತ್ತಾರೆ.
ಹೀಗಾಗಿಯೇ ಇದಕ್ಕೆಲ್ಲಾ ಸ್ವಲ್ಪ ಮಟ್ಟಿಗಾದ್ರು ಕಡಿವಾಣ ಹಾಕಬೇಕೆಂದು ಕೋಲಾರ ಜಿಲ್ಲೆಯ ಪರಿಸರ ಪ್ರೇಮಿಗಳ ಬಳಗವೊಂದು ಕಳೆದ ಮೂರು ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಬಂದಿದೆ. ಹೌದು ಪಟಾಕಿ ಖರೀದಿ ಮಾಡೋದಕ್ಕೆ ಬಂದ ಗ್ರಾಹಕರಿಗೆ ಉಚಿತವಾಗಿ ಒಂದೊಂದು ಸಸಿ ಕೊಟ್ಟು,ಮನೆಗಳ ಮುಂದೆ ಹಾಕಿ ಅದನ್ನು ಪೋಷಿಸಿ ಬೆಳೆಸುವ ಮೂಲಕ ಶುದ್ಧ ಗಾಳಿಗೆ ಸಹಾಯ ಮಾಡಿ ಅನ್ನೋ ಮೂಲ ಉದ್ದೇಶದಿಂದ ಈ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ್ರು.ಇನ್ನು ಈ ಕಾರ್ಯಕ್ರಮ ವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್ ಅವರು ಚಾಲನೆ ನೀಡಿ ಖುಷಿ ಪಟ್ಟಿದ್ದು ಕಾರ್ಯಕ್ರಮ ದ ಮತ್ತೊಂದು ವಿಶೇಷ.
ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!
ಇನ್ನು ಪರಿಸರ ಪ್ರೇಮಿ ಬಳಗ ಕಳೆದ ಮೂರು ವಷ೯ಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದೆ.ಮೊದಲನೆ ವಷ೯ಕ್ಕಿಂತ ಈ ಬಾರಿ ಜನರಿಂದ ಹೆಚ್ಚಿನ ಬೆಂಬೆಲ ಸಿಕ್ಕಿದೆ. ಯಾವುದೇ ಬೇರೆ ಉದ್ದೇಶವಿಲ್ಲದೇ ತಾವೇ ಹಣ ಹಾಕಿಕೊಂದು ಸಸಿಗಳನ್ನು ಖರೀದಿಸಿ ಉಚಿತವಾಗಿ ನೀಡಿಕೊಂಡು ಬರುತ್ತಿದ್ದಾರೆ. ಪ್ರಮುಖವಾಗಿ ಮನೆಯಲ್ಲೆ ಬೆಳಸಬಹುದಾದ ಹೂ ಸಸಿಗಳು, ಹಣ್ಣಿನ ಸಸಿಗಳು ಸೇರಿದಂತೆ ಬೃಹತ್ತಾಗಿ ಬೆಳೆಯುವ ಸಸಿಗಳನ್ನು ನೀಡ್ತಿರೋದು ಈ ಕಾರ್ಯಕ್ರಮ ದ ವಿಶೇಷ. ಇನ್ನು ಪಟಾಕಿ ಸಿಡಿಸೋದ್ರಿಂದ ಗಾಳಿ ಮತ್ತು ಶಬ್ಧ ಮಾಲೀನ್ಯ ಆಗೋದ್ರಿಂದ ಬಲೂನ್ ಗಳನ್ನು ಸಿಡಿಸುವ ಮೂಲಕ ಎಸ್ಪಿ ದೇವರಾಜ್ ಅವರು ಕಾರ್ಯಕ್ರಮ ಕ್ಕೆ ಮತ್ತಷ್ಟೂ ಮೆರಗೂ ತಂದುಕೊಟ್ಟರು. ಬಳಿಕ ಪಟಾಕಿ ಖರೀದಿಸೋಕೆ ಬಂದಿದ್ದ ಮಹಿಳೆಯರು ಹಾಗೂ ಮಕ್ಕಳಿಗೆ ಸಸಿ ಕೊಟ್ಟು,ಪಟಾಕಿ ಸಿಡಿಸೋದ್ರಿಂದ ಪರಿಸರಕ್ಕೆ ಹೇಗೆಲ್ಲಾ ಹಾನಿ ಆಗುತ್ತೆ ಅಂತ ಮಾಹಿತಿ ಸಹ ನೀಡಲಾಯ್ತು.
ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?
ಒಟ್ಟಾರೆ ದೀಪಾವಳಿ ಹಬ್ಬವನ್ನು ಕೋಲಾರ ಜಿಲ್ಲೆಯಲ್ಲಿ ಅಥ೯ಪೂಣ೯ಕವಾಗಿ ಆಚರಣೆ ಮಾಡೋದಕ್ಕೆ ಚಾಲನೆ ನೀಡಲಾಗಿದೆ .ಇದೂ ಕೇವಲ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಾಗದೇ ಎಲ್ಲಾ ಕಡೆಗಳನ್ನುಈ ಆಚರಣೆ ಮಾಡಿದ್ರೆ ಮುಂದಿನ ಪೀಳಿಗೆಗೆ ಅನುಕೂಲವಾಗಿ,ಉಸಿರಾಡಲು ಶುದ್ದಗಾಳಿ ದೊರಕುತ್ತೆ ಅನ್ನೋದು ನಮ್ಮ ಆಶಯ ಕೂಡ.