ನವದೆಹಲಿ(ಮೇ 05)   ಕೊರೋನಾ ಕಾರಣಕ್ಕೆ ಕೊನೆಗೂ ಚುನಾವಣಾ ಆಯೋಗ ಬುದ್ಧಿ ಕಲಿತಂತೆ  ಕಾಣುತ್ತಿದೆ.  ಸದ್ಯಕ್ಕಿಲ್ಲ ಸಿಂಧಗಿ ಉಪಚುನಾವಣೆ ಎಂಬ ಸುದ್ದಿ ಹೊರಗೆ ಬಂದಿದೆ.

ಕೋರೋನಾ ಕಾರಣಕ್ಕಾಗಿ ಉಪಚುನಾವಣೆ ಗಳನ್ನು ಆಯೋಗ ಮುಂದಕ್ಕೆ ಹಾಕಿದೆ.  ಕೊರೋನಾ ಎರಡನೇ ಅಲೆ ಭೀಕರ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಪಂಚಾರಾಜ್ಯ ಚುನಾವಣೆ ಬಳಿಕ ಚುನಾವಣಾ ಆಯೋಗವನ್ನು ಮದ್ರಾಸ್ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನಿಮ್ಮ ಮೇಲೆ ಯಾಕೆ ಕೊಲೆ ಪ್ರಕರಣ ದಾಖಲಿಸಬಾರದು ಎಂದು ಕೇಳಿತ್ತು.

ಬೆಳಗಾವಿ ಕಾಂಗ್ರೆಸ್ ಸೋಲಿಗೆ ಇದೇ ಕಾರಣ

ದೇಶದ ಮೂರು ಲೋಕಸಭೆ ಮತ್ತು ಎಂಟು ವಿಧಾನಸಭೆ ಸ್ಥಾನಗಳು ವಿವಿಧ ಕಾರಣಕ್ಕೆ ಖಾಳಿಯಾಗಿವೆ. ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಮುಂದೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.
 
ಜೆಡಿಎಸ್ ಶಾಸಕ ಎಂಸಿ ಮನಗೂಳಿ ಅವರ ನಿಧನದಿಂದ ಸಿಂಧಗಿ ಕ್ಷೇತ್ರ ತೆರವಾಗಿತ್ತು. ಬಸವ ಕಲ್ಯಾಣ, ಮಸ್ಕಿ ಮತ್ತು  ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು ಫಲಿತಾಂಶವೂ ಹೊರಗೆ ಬಂದಿದೆ.