Asianet Suvarna News Asianet Suvarna News

ಸಿರಿಧಾನ್ಯ ಸೇವಿಸಿ, ರೋಗಗಳನ್ನು ಓಡಿಸಿ: ಗೋವಿಂದಗೌಡ

ಹಿಂದಿನ ಕಾಲದಲ್ಲಿ ಜನತೆ ಸಿರಿಧಾನ್ಯಗಳಿಂದಲೇ ದೃಢಕಾಯ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಆಹಾರದಲ್ಲಾದ ಬದಲಾವಣೆಯಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಸಿರಿಧಾನ್ಯ ಸೇವಿಸುವ ಮೂಲಕ ರೋಗಗಳನ್ನು ಓಡಿಸಿ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿ. ಗೋವಿಂದಗೌಡ ತಿಳಿಸಿದರು.

 Eat Millets, drive away diseases: Govinda Gowda snr
Author
First Published Aug 14, 2023, 7:53 AM IST

  ತಿಪಟೂರು :  ಹಿಂದಿನ ಕಾಲದಲ್ಲಿ ಜನತೆ ಸಿರಿಧಾನ್ಯಗಳಿಂದಲೇ ದೃಢಕಾಯ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಆಹಾರದಲ್ಲಾದ ಬದಲಾವಣೆಯಿಂದ ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಸಿರಿಧಾನ್ಯ ಸೇವಿಸುವ ಮೂಲಕ ರೋಗಗಳನ್ನು ಓಡಿಸಿ ಎಂದು ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿ. ಗೋವಿಂದಗೌಡ ತಿಳಿಸಿದರು.

ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟಗಾಮದಲ್ಲಿ ಸಿರಿಧಾನ್ಯಗಳ ಪಾಕ ಸ್ಪರ್ಧೆ ಹಾಗೂ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಜರು ಹೆಚ್ಚಾಗಿ ಉಪಯೋಗಿಸುತ್ತಿದ್ದ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ ಮತ್ತು ಕೊರಲೆಯಿಂದ ಮಾಡುತ್ತಿದ್ದ ಅನ್ನ, ಮುದ್ದೆ, ರೊಟ್ಟಿಉತ್ತಮ ಆಹಾರವಾಗಿತ್ತು. ಅವರು ಆರೋಗ್ಯವಂತರಾಗಿ, ಬಲಿಷ್ಟರಾಗಿ ದಿನವೆಲ್ಲ ಕೆಲಸ ಮಾಡಿದರೂ ಆಯಾಸಗೊಳ್ಳುತ್ತಿರಲಿಲ್ಲ. ಸಿರಿಧಾನ್ಯಗಳು ಭವಿಷ್ಯದ ಬೆಳೆಗಳಾಗಿವೆ, ಅತ್ಯಂತ ಸುಸ್ಥಿರ ಆಹಾರಗಳಾಗಿದ್ದು ದಿನನಿತ್ಯ ಸಿರಿಧಾನ್ಯ ಸೇವಿಸಿ ರೋಗವನ್ನು ಓಡಿಸಿ ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಎಂ.ಈ. ದರ್ಶನ್‌ ಹಾಗೂ ಡಾ. ಕೆ. ನಿತ್ಯಶ್ರೀ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ರುಚಿ ರುಚಿಯಾದ ಸಿರಿಧಾನ್ಯಗಳ ಪಾಕಗಳು ನೋಡುಗರ ಬಾಯಲ್ಲಿ ನೀರೂರಿಸಿದವು. ಸಿರಿಧಾನ್ಯಗಳ ಪೌಷ್ಟಿಕಾಂಶದ ಮಹತ್ವಗಳು, ಬಳಕೆಯ ವಿಧಾನಗಳು, ಆರೋಗ್ಯಕರ ಅಂಶಗಳ ಪ್ರಯೋಜನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಆಹಾರ ಮೇಳದಲ್ಲಿ 35 ರೈತ ಮಹಿಳೆಯರು ಭಾಗವಹಿಸಿ ಸಿರಿಧಾನ್ಯಗಳ ವಿವಿಧ ಪದಾರ್ಥಗಳಾದ ರಾಗಿ ದೋಸೆ, ರಾಗಿ ಶಾವಿಗೆ, ರಾಗಿ ಹಲ್ವ, ರಾಗಿ ಲಡ್ಡು, ರಾಗಿ ಉಪ್ಪಿಟ್ಟು, ರಾಗಿ ಹುರಿಹಿಟ್ಟು, ರಾಗಿ ಪಡ್ಡು, ರಾಗಿ ಇಡ್ಲಿ, ರಾಗಿ ಪಕೋಡ, ರಾಗಿ ಹಾಲಬಾಯಿ, ರಾಗಿ ಮಿಟಾಯಿ, ಹಾರಕದ ಖಾರ, ಹಾರಕ ಲಡ್ಡು, ಸಿರಿಧಾನ್ಯಗಳ ಹಪ್ಪಳ, ನವಣೆ ಚಕ್ಕುಲಿ, ನವಣೆ ಪಾಯಸ, ನವಣೆ ಪಲಾವ್‌, ಸಾಮೆ ಲಡ್ಡು ಹಾಗೂ ಇತರೆ ಪದಾರ್ಥಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿ ತಂದಿದ್ದರು.

ಕಾರ್ಯಕ್ರಮದಲ್ಲಿ ತುಮಕೂರು ನಬಾರ್ಡ್‌ ಡಿ.ಡಿ.ಎಮ್‌ ಕೀರ್ತಿ ಪ್ರಭಾ, ಎನ್‌ಆರ್‌ಎಲ್‌ಎಂ ಅಧ್ಯಕ್ಷರಾದ ಗೌರಮ್ಮ, ಮುಖ್ಯ ಪುಸ್ತಕ ಬರಹಗಾರ್ತಿ ರಂಗಮ್ಮ, ಯೋಜನಾ ಸಮನ್ವಯ ಅಧಿಕಾರಿ ಲಕ್ಷ್ಮೇಕಾಂತ, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಗಂಗಾಧರಯ್ಯ ಸೇರಿದಂತೆ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.

Follow Us:
Download App:
  • android
  • ios