ಮತ್ತೆ ಕೈ ಕೊಟ್ಟ ಪೂರ್ವ ಮುಂಗಾರು: ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತ
ರಾಜ್ಯದಲ್ಲಿ ಬೀಕರ ಬರಗಾಲವಿದೆ. ರಾಜ್ಯದ ಹಲವೆಡೆ ಕಳೆದ ಎರಡು ಮೂರು ದಿನದಿಂದ ಅಲ್ಲಲ್ಲಿ ಮಳೆ ಸುರಿದಿದೆ. ಆದ್ರೆ ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತಗೊಂಡು ಕೃಷಿ ಪಂಪ್ಸೆಟ್ ಬೋರ್ವೆಲ್ಗಳು ಬತ್ತಿಹೋಗಿವೆ.
ವರದಿ: ಪುಟ್ಟರಾಜು.ಆರ್.ಸಿ.ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಮೇ.06): ರಾಜ್ಯದಲ್ಲಿ ಬೀಕರ ಬರಗಾಲವಿದೆ. ರಾಜ್ಯದ ಹಲವೆಡೆ ಕಳೆದ ಎರಡು ಮೂರು ದಿನದಿಂದ ಅಲ್ಲಲ್ಲಿ ಮಳೆ ಸುರಿದಿದೆ. ಆದ್ರೆ ಚಾಮರಾಜನಗರ ಜಿಲ್ಲೆಯಲ್ಲಿ ಅಂತರ್ಜಲ ಕುಸಿತಗೊಂಡು ಕೃಷಿ ಪಂಪ್ಸೆಟ್ ಬೋರ್ವೆಲ್ಗಳು ಬತ್ತಿಹೋಗಿವೆ. ಈ ಬೋರ್ವೆಲ್ಗಳಲ್ಲಿ ನೀರಿನ ಪ್ರಮಾಣ ಭಾರೀ ಕುಸಿತಗೊಂಡಿದ್ದು ಪಂಪ್ಸೆಟ್ ಆಧಾರಿತ ಬೆಳೆಗಳು ನೀರಿಲ್ಲದೆ ಒಣಗಿ ಹೋಗುವ ಬೆಳೆಗಳಿಗೆ ನೀರುಣಿಸಲಾಗದೆ ರೈತರು ಪರದಾಡುತ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಬರದನಾಡು ಅಂತಲೇ ಕರೆಯುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಳೆಯ ಕೊರತೆ ಹಿನ್ನಲೆ ಅಂತರ್ಜಲ ಕುಸಿತಗೊಂಡಿದೆ. ಸಾಲ ಸೋಲ ಮಾಡಿ ವರ್ಷ ಪೂರ್ತಿ ಬೆವರು ಹರಿಸಿ ಬೆಳೆದಿರುವ ಸಾವಿರಾರು ಎಕರೆ ಕಬ್ಬು, ಬಾಳೆ, ಅರಶಿನ, ಈರುಳ್ಳಿ ಬೆಳೆ ತಮ್ಮ ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಇನ್ನೊಂದು ವಾರದಲ್ಲಿ ಸಮರ್ಪಕ ಮಳೆ ಬಾರದಿದ್ದರೆ ರೈತರ ಪರಿಸ್ಥಿತಿ ಅಧೋಗತಿಯಾಗಲಿದ್ದು ಮತ್ತೆ ಸಾಲದ ಕೂಪಕ್ಕೆ ಬೀಳುವ ಆತಂಕ ಎದುರಾಗಿದೆ. ಪೂರ್ವ ಮುಂಗಾರಿನಲ್ಲಿ ಈ ವೇಳೆಗಾಗಲೇ ಮೂರ್ನಾಲ್ಕು ಮಳೆಯಾಗಬೇಕಿತ್ತು. ಆದರೆ ಏಪ್ರಿಲ್ ಕಳೆದರು ವರುಣ ಕೃಪೆ ತೋರದೆ ಬೆಳೆಗಳು ಬಿಸಿಲ ಬೇಗೆಗೆ ಒಣಗಿ ಕರಕಲಾಗುತ್ತಿವೆ. ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಸರ್ಕಾರ ತಮ್ಮ ನೆರವಿಗೆ ಧಾವಿಸಲಿದೆ ಎಂಬ ನಿರೀಕ್ಷೆಯಲ್ಲಿ ಅನ್ನದಾತರು ಕಾಯತೊಡಗಿದ್ದಾರೆ. ಕಳೆದ ಎರಡು ದಿನದಿಂದ ಜಿಲ್ಲೆಯ ಹಲವೆಡೆ ವೇಳೆ ಮಳೆ ಬಿದ್ದಿದ್ದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದ್ರೆ ಈ ಮಳೆಯಿಂದಲೂ ಸಾಕಷ್ಟು ಅನಾಹುತ ಸಂಭವಿಸಿದ್ದು, ಮಳೆಯಿಂದ ಬೆಳೆ ನಷ್ಟವುಂಟಾಗಿದೆ. ಬಿಸಿಲಿನ ತಾಪಮಾನ ಕೂಡ ಏರಿಕೆಯಾಗಿರುವುದರಿಂದ ಬೆಳೆಗಳು ಒಣಗಿ ಹೋಗ್ತಿವೆ. ಇದರ ಜೊತೆಗೆ ಅಂತರ್ಜಲ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಉತ್ತಮ ಮಳೆ ಬೀಳದಿದ್ರೆ ಅನ್ನದಾತರ ಬದುಕು ಮೂರಾಬಟ್ಟೆಯಾಗಲಿದೆ.
ಅಪ್ರಾಪ್ತೆ ಮದುವೆಯಾಗುವೆ ಎಂದ ಆರೋಪಿ: ಫೋಕ್ಸೋ ಕೇಸ್ ಹೈಕೋರ್ಟ್‌ನಲ್ಲಿ ರದ್ದು!
ಒಟ್ನಲ್ಲಿ ಮೊದಲೇ ರೈತರು ಪೂರ್ವ ಮುಂಗಾರು ಕೈ ಕೊಟ್ಟ ಹಿನ್ನಲೆ ಕೈ ಕೊಟ್ಟ ಹಿನ್ನಲೆ ಅನ್ನದಾತರು ಬೆಳೆ ಬೆಳೆಯದೆ ಕೈ ಕಟ್ಟಿ ಕುಳಿತಿದ್ದಾರೆ.ಇನ್ನೂ ಕೃಷಿ ಪಂಪ್ ಸೆಟ್ ಉಳ್ಳವರು ಬೆಳೆ ಬೆಳೆದಿದ್ದು,ಪಂಪ್ ಸೆಟ್ ನಲ್ಲಿ ಅಂತರ್ಜಲ ಕೊರತೆವುಂಟಾಗಿದ್ದು ಬೆಳೆದ ಬೆಳೆ ಕೂಡ ಕೈಗೆ ಸಿಕ್ತಿಲ್ಲ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ.