Asianet Suvarna News Asianet Suvarna News

Chikkaballapur : ಚಿಂತಾಮಣಿ ಬಳಿ ಭೂಕಂಪದ ಅನುಭವ

  • ಜಿಲ್ಲೆಯ ಚಿಂತಾಮಣಿ ಸಮೀಪದ ಮಿಟ್ಟಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಭೂಕಂಪನದ ಅನುಭವ
  • ರಾತ್ರಿ 11 ಗಂಟೆ ಸುಮಾರಿಗೆ ಜೋರಾದ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವ
Earthquake near Chikkaballapur  District Chintamani snr
Author
Bengaluru, First Published Nov 10, 2021, 6:35 AM IST

ಚಿಕ್ಕಬಳ್ಳಾಪುರ (ನ.10): ಜಿಲ್ಲೆಯ ಚಿಂತಾಮಣಿ (chintamanai) ಸಮೀಪದ ಮಿಟ್ಟಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಭೂಕಂಪನದ (Earthquake) ಅನುಭವವಾಗಿದೆ.

ರಾತ್ರಿ 11 ಗಂಟೆ ಸುಮಾರಿಗೆ ಜೋರಾದ ಶಬ್ದದೊಂದಿಗೆ ಭೂಮಿ  ನಡುಗಿದ ಅನುಭವವಾಗಿದ್ದ ಜನ ಭೂಕಂಪ ಆಗಿದೆ ಎಂದು ಭಯಭೀತರಾಗಿ ಮನೆಗಳಿಂದ ಹೊರ ಓಡಿ ಬಂದಿದ್ದಾರೆ. 

ಘಟನೆಯಿಂದಾಗಿ ಗ್ರಾಮದ (village) ಜನರಲ್ಲಿ ಆತಂಕ ಹೆಚ್ಚಿದೆ. ಸ್ಥಳಕ್ಕೆ ಚಿಂತಾಮಣಿ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭೂಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆಯೇ ಎಂಬ ಮಾಹಿತಿ ಈವರೆಗೆ ತಿಳಿದು ಬಂದಿಲ್ಲ.

ವಿಜಯಪುರದಲ್ಲಿ ಹಲವು ಭಾರಿ ಭೂ ಕಂಪ ತಜ್ಞರ ಭೇಟಿ :  ಜಿಲ್ಲೆಯ ವಿವಿಧೆಡೆ 2019ರಿಂದ ಸಂಭವಿಸುತ್ತಿರುವ ಲಘು ಭೂಕಂಪನಗಳು(Earthquake) ಹಾಗೂ ಭೂಗರ್ಭದಿಂದ ಶಬ್ದ ಹೊರಡುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ(Karnataka State Disaster Management Authority), ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ(Karnataka State Natural Disaster) ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ಜನರಲ್ಲಿ ಭೂಕಂಪನ ಜಾಗೃತಿ(Awareness) ಮತ್ತು ಆತ್ಮವಿಶ್ವಾಸ ವೃದ್ಧಿಯ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಕಲಬುರಗಿ(Kalaburagi) ಜಿಲ್ಲೆಯಲ್ಲಿ ನ. 8 ಮತ್ತು 9ರಂದು ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ್‌ ಕಳಸದ ತಿಳಿಸಿದ್ದಾರೆ.

ಈ ಕಾರ್ಯಾಗಾರದಲ್ಲಿ ಹೆಸರಾಂತ ವಿವಿಧ ರಾಷ್ಟ್ರೀಯ ಸಂಸ್ಥೆಗಳಾದ ರಾಷ್ಟ್ರೀಯ ಭೌತ ಸಂಶೋಧನಾ ಸಂಸ್ಥೆ (Hydrerabad), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Bengaluru), ಭಾರತೀಯ ವಿಜ್ಞಾನ ಸಂಸ್ಥೆ (ಬೆಂಗಳೂರು) ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಶೋಧನಾ ಸಂಸ್ಥೆ (ಬೆಂಗಳೂರು), ರಾಷ್ಟ್ರೀಯ ಭೂಕಂಪನ ಅಧ್ಯಯನ ಸಂಸ್ಥೆ (New Delhi) ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಬೆಂಗಳೂರು) ಸಂಸ್ಥೆಗಳ ವಿಷಯ ತಜ್ಞರು ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಕಲಬುರಗಿ) ಮೈಸೂರು ವಿಶ್ವವಿದ್ಯಾಲಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ(Government of Karnataka) ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಕಾರ್ಯಾಗಾರಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಸುಪ್ರಿಡೆಂಟ್‌ ಆಫ್‌ ಪೊಲೀಸ್‌, ಸಹಾಯಕ ಆಯುಕ್ತರು, ತಹಸೀಲ್ದಾರರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನೀರಾವರಿ ಜಲಸಂಪನ್ಮೂಲ ಇಲಾಖೆಯ ಅಭಿಯಂತರರು ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭಾಗವಹಿಸಲು ಮತ್ತು ತಜ್ಞರ ತಂಡವು ನ. 8ರಂದು ವಿಜಯಪುರ(Vijayapura) ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು ಅವಶ್ಯಕ ಮಾಹಿತಿ ನೀಡಲು ಸೂಚಿಸಲಾಗಿದೆ.

ಅದರಂತೆ ಈ ಮೇಲ್ಕಾಣಿಸಿದ ಎಲ್ಲಾ ಅಧಿಕಾರಿಗಳು ನ. 8ರಂದು ತಜ್ಞರ ತಂಡವು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಜೊತೆಗಿದ್ದು ಅವರಿಗೆ ಅವಶ್ಯಕ ಮಾಹಿತಿ ನೀಡಲು ಮತ್ತು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಮಹೇಶ ಹಿರಿಯ ವಿಜ್ಞಾನಿಗಳು, ಅಂತರ್ಜಲ ಗಣಿ ಮತ್ತು ಭೂಗರ್ಭ ಇಲಾಖೆ, ವಿಜಯಪುರ ಇವರನ್ನು ಲೈಸೆನ್‌ ಅಧಿಕಾರಿಗಳೆಂದು ನೇಮಿಸಿ ಅಪರ ಜಿಲ್ಲಾಧಿಕಾರಿ ರಮೇಶ್‌ ಕಳಸದ ಆದೇಶ ಹೊರಡಿಸಿದ್ದಾರೆ. ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಭೂಕಂಪನ(Earthquake) ಪೀಡಿತ ಗ್ರಾಮಗಳಲ್ಲಿರುವ ಮನೆಗಳ ಮುಂದೆ ಶೆಡ್‌ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕುರಿತಂತೆ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ(R Ashok) ಭರವಸೆ ನೀಡಿದ್ದರು.

ಇತ್ತೀಚೆಗೆ ಭೂಕಂಪನ ಭಯಗ್ರಸ್ತ ಊರುಗಳಾದ ಗಡಿಕೇಶ್ವರ, ಹೊಸಳ್ಳಿ ಹಾಗೂ ಕೊರವಿ ತಾಂಡಾಗಳಿಗೆ ಭೇಟಿ ನೀಡಿದ ಕಂದಾಯ ಸಚಿವರು ಜನತೆಯೊಂದಿಗೆ ಸಂವಾದ ನಡೆಸಿ ಯಾವುದೇ ಕಾರಣಕ್ಕೂ ಭಯ ಪಡದಂತೆ ಮನವಿ ಮಾಡಿದರಲ್ಲದೆ ಸರ್ಕಾರ(Government) ನಿಮ್ಮೊಂದಿಗೆ ಎಂದು ಅಭಯ ನೀಡಿದರು.

ಗಡಿಕೇಶ್ವರ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿ ಭೂಮಿ ಕಂಪಿಸುತ್ತಿರುವ ಕಾರಣ ಗ್ರಾಮದಲ್ಲಿ ಭೂಕಂಪದ ತೀವ್ರತೆ ಅರಿಯಲು ಹೈದ್ರಬಾದ್‌ನ(Hyderabad) ಎನ್‌ಜಿಆರ್‌ಐ ವಿಜ್ಞಾನಿಗಳ(NGRI Scientists) ತಂಡ ಸಿಸ್ಮೋಮೀಟರ್‌ ಯಂತ್ರ ಅಳವಡಿಸಿದ್ದಾರೆ. ಮುಂದಿನ 1 ತಿಂಗಳ ಕಾಲ ವಿಜ್ಞಾನಿಗಳು ಈ ಯಂತ್ರದ ಮೂಲಕ ದಾಖಲಾಗುವ ಪ್ರತಿಯೊಂದು ಮಾಹಿತಿಯನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವೈಜ್ಞಾನಿಕವಾಗಿ ವರದಿ(Scientific Report) ಸಲ್ಲಿಸಲಿದ್ದು, ತದನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

Follow Us:
Download App:
  • android
  • ios