Shivamogga: ಶಿರಾಳಕೊಪ್ಪದಲ್ಲಿ ಭಾರೀ ಶಬ್ದದೊಂದಿಗೆ ಭೂಕಂಪನದ ಅನುಭವ!
ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಬೆಳಗಿನ ಜಾವ 3.35 ರಿಂದ 3.56ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ಶಿವಮೊಗ್ಗ (ಅ.6) : ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಬೆಳಗಿನ ಜಾವ 3.35 ರಿಂದ 3.56ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.
ಭಾರೀ ಶಬ್ದದೊಂದಿಗೆ ಭೂಕಂಪನ ಅನುಭವ ಆಗುತ್ತಿದ್ದಂತೆ ಸುಖ ನಿದ್ದೆಯಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಕಂಪಿಸಿದ ಅನುಭವ ಆಗ್ತಿದ್ದಂತೆ ಮಕ್ಕಳು ಮರಿಗಳನ್ನು ಎದೆಗವಚಿಕೊಂಡು ಹೊರಗೆ ಓಡಿಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 4.1ರಷ್ಟು ಕಂಪನ ದಾಖಲಾಗಿದೆ ಎನ್ನಲಾಗಿದೆ. ಮೊದಲಿಗೆ ಭೂಮಿ ಕಂಪಿಸಿದೆ. ಇದಾಗಿ ಹತ್ತು ನಿಮಿಷದ ಬಳಿಕ ಮತ್ತೊಮ್ಮೆ ಶಬ್ದ ಕೇಳಿದರೂ ಕಂಪನದ ಅನುಭವ ಆಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಭೂಕಂಪನಕ್ಕೆ ಕಾರಣವೇನು? ಭೂಕಂಪನದ ಕೇಂದ್ರ ಬಿಂದು ಎಲ್ಲಿದೆ ಎಂಬುದು ತಿಳಿದುಬಂದಿಲ್ಲ. ಆದರೆ ಶಿರಾಳಕೊಪ್ಪ ಸುತ್ತಮುತ್ತಲ ಭಾಗದಲ್ಲಿ ಭೂಕಂಪನದ ಅನುಭವಧ ಬಗ್ಗೆ ಸ್ಥಳೀಯರ ಚರ್ಚೆ ನಡೆದಿದೆ. ಭೂ ಕಂಪನದ ಅನುಭವ ಹಿನ್ನೆಲೆ ಶಿರಾಳಕೊಪ್ಪ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ. ಬೆಳಗಿನ ಜಾವದಿಂದ ನಿದ್ದೆ ಮಾಡದೆ ಹೊರಗೆ ಕುಳಿತಿರುವ ಜನರು.
ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜ್ಞಾನಿಗಳು ಬಂದಾಗಲೇ ಕಂಪಿಸಿದ ಭೂಮಿ..!