ಹಂಪಿಯಲ್ಲಿ ನಡುಗಿದ ಭೂಮಿ: ಸುಳ್ಳು ಸುದ್ದಿ ಎಂದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ

ಹಂಪಿಯಲ್ಲಿ ಭೂಮಿ ಕಂಪಿಸಿದ ಎಂಬ ಗಾಳಿ ಸುದ್ದಿ| ಸುಳ್ಳು ಸುದ್ದಿ ಹಬ್ಬುತ್ತಿದ್ದಂತೆ ಸ್ಥಳೀಯ ಜನರಲ್ಲಿ ಆತಂಕ| ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ|

Earthquake in Hampi in Ballari district

ಬಳ್ಳಾರಿ(ಜೂ.05): ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಹಂಪಿಯಲ್ಲಿ ಇಂದು(ಶುಕ್ರವಾರ) ಭೂಕಂಪನವಾಗಿದೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡಿತ್ತು. ಇದರಿಂದ ಸ್ಥಳೀಯ ಬಹಳ ಆತಂಕಕ್ಕೊಳಗಾಗಿದ್ದರು. 

ಈ ಬಗ್ಗೆ ಸ್ಪಷ್ಟಣೆ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ್ ಅವರು, KSNDMC  ಕೇಂದ್ರದಲ್ಲಿ ಭೂಮಿ ಕಂಪಿಸಿದ ಬಗ್ಗೆ ದಾಖಲಾಗಿಲ್ಲ. ಹೊಸಪೇಟೆಯ ತುಂಗಭದ್ರಾ ಜಲಾಶಯದ ಭೂಕಂಪನ ವೀಕ್ಷಣಾಲಯದ ಕೇಂದ್ರದಿಂದ ಮಾಹಿತಿಯನ್ನು ಪಡೆಯಲಾಗಿದೆ. ಹೀಗಾಗಿ ಜನರು ಭಯಪಡುವ ಅಗತ್ಯತೆ ಇಲ್ಲ ಎಂದು ಹೇಳಿದ್ದಾರೆ. 

ಪೇದೆಗೆ ಅಂಟಿದ ಕೊರೋನಾ: ಕೊಟ್ಟೂರು ಪೊಲೀಸ್‌ ಠಾಣೆ ಸೀಲ್‌ಡೌನ್‌

ಇಂದು ಬೆಳ್ಳಂಬೆಳಿಗ್ಗೆ 6.55 ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್‌ ಮಾಪಕದಲ್ಲಿ 4 ರಷ್ಟು ತೀವ್ರತೆ ದಾಖಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಈ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳೀಯ ಜನರಲ್ಲಿ ಭಯಭೀತರಾಗಿದ್ದರು. 

ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು, ಹಂಪಿ ಅಥವಾ ಸುತ್ತಮುತ್ತ ಭಾಗದಲ್ಲಿ ಭೂಮಿ ಕಂಪಿಸಿಲ್ಲ. KSNMDC ನಲ್ಲೂ ಭೂಮಿ ಕಂಪಿಸಿರುವುದು ದಾಖಲಾಗಿಲ್ಲ. ಇದೊಂದು ಗಾಳಿ ಸುದ್ದಿಯಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನ ನಂಬಬೇಡಿ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ ರಾಷ್ಟ್ರ ರಾಜಧಾನಿ ದೆಹಲಿ, ಗುಹವಾಟಿ, ಅಸ್ಸಾಂ, ಮೇಘಾಲಯ, ಮಿಜೋರಾಂನಲ್ಲಿ ಭೂಕಂಪನವಾಗಿತ್ತು. ಕೊರೋನಾ ಭಯದಿಂದ ನಲಗಿರುವ ಜನರಿಗೆ ಭೂಕಂಪನ ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. 
 

Latest Videos
Follow Us:
Download App:
  • android
  • ios