ಮಹಿಳಾ ಪೊಲೀಸ್ ಹಾಡಿಗೆ ತಲೆದೂಗಿದ ಜನ! ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗೆ ಬಂದಿದ್ದ DYSP

ಮಹದೇಶ್ವರ ಬೆಟ್ಟದಲ್ಲಿ ಭದ್ರತೆಗಾಗಿ ತೆರಳಿದ್ದ ಪೊಲೀಸ್ ಅಧಿಕಾರಿ ಅಲ್ಲಿ ಹಾಡನ್ನು ಹೇಳಿದ್ದು ನೆರೆದಿದ್ದವರು ತಲೆದೂಗುವಂತೆ ಮಾಡಿದೆ. 

DYSP Priyadarshini Sang Song in Mahadeshwara Temple snr

ಚಾಮರಾಜನಗರ (ನ.17):  ಇತ್ತೀಚಿಗಷ್ಟೇ ಚಾಮರಾಜನಗರದ ಡಿವೈಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ನೂತನ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಾಡು ಹಾಡುವ ಮೂಲಕ ಎಲ್ಲರ ಗಮನವನ್ನು ಸೆಳೆಯುವಂತೆ ಮಾಡಿದ್ದಾರೆ.

ನ. 25ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬರುವ ಹಿನ್ನೆಲೆಯಲ್ಲಿ ಬಂದೋಬಸ್‌್ತ ಯೋಜನೆ ಕುರಿತು ತೆರಳಿದ್ದ ವೇಳೆ ದೇಗುಲದ ಆವರಣದಲ್ಲಿ ಎಎಸ್ಪಿ ಅನಿತಾ ಹದ್ದಣ್ಣನವರ್‌ ಹಾಗೂ ಇನ್ನಿತರ ಪೊಲೀಸರ ಸಮ್ಮುಖದಲ್ಲಿ ಮಾದಪ್ಪನ ಜನಪ್ರಿಯ ಹಾಡಾದ ಸೋಜುಗದ ಸೂಜು ಮಲ್ಲಿಗೆ ಹಾಡನ್ನು ಹೇಳಿ ಪೊಲೀಸರು ತಲೆದೂಗುವಂತೆ ಮಾಡಿದ್ದಾರೆ. 

ಮಾದಪ್ಪ ಬರುವಾಗ ಮಾಳೆಲ್ಲ ಘಮ್ಮೆಂದು.. ..

ಈ ಹಿಂದೆ ಬೇರೆ ಜಿಲ್ಲೆಗಳಲ್ಲಿ ಪ್ರಿಯದರ್ಶಿನಿ ಸುಶ್ರಾವ್ಯವಾಗಿ ವಚನ ಗಾಯನವನ್ನು ಮಾಡುವ ಮೂಲಕ ಮನ ಸೆಳೆದಿದ್ದರು. ಇದೀಗ ಪ್ರಿಯದರ್ಶಿನಿ ಅವರು ಸೋಜುಗದ ಸೂಜು ಮಲ್ಲಿಗೆ ಹಾಡು ಪೊಲೀಸ್‌ ಸಿಬ್ಬಂದಿ ಮತ್ತು ಸಾರ್ವಜನಿಕರ ಮೊಬೈಲ್‌ನಲ್ಲಿ ಹರಿದಾಡುವ ಮೂಲಕ ಸಾಕಷ್ಟುಮೆಚ್ಚುಗೆಗೂ ಪಾತ್ರವಾಗಿದೆ.

Latest Videos
Follow Us:
Download App:
  • android
  • ios