Tumakur : ಕಮರುತ್ತಿರುವ ಬಡವರ ವಸತಿಯ ಕನಸು: ಸಿಪಿಐ ಗಿರೀಶ್‌

ಮನೆ ನಿರ್ಮಿಸಿಕೊಳ್ಳುವ, ನಿವೇಶನ ಹೊಂದುವ ಬಡಜನರ ಕನಸು ಕಮರುತ್ತಿರುವ ಹಿನ್ನೆಲೆಯಲ್ಲಿ ಫೆ. 26 ರಿಂದ ನಿವೇಶನ ಮತ್ತು ವಸತಿ ರಹಿತರ ಕಾಲ್ನಡಿಗೆ ಜಾಥಾವು ಶಿರಾ ತಾಲೂಕಿನ ತಾಳಗುಂದ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗಲಿದೆ ಎಂದು ಸಿಪಿಐ (ಭಾರತ ಕಮ್ಯೂನಿಸ್ಟ್‌ ಪಕ್ಷ) ದ ಜಿಲ್ಲಾ ಕಾರ್ಯದರ್ಶಿ ಗಿರೀಶ್‌ ತಿಳಿಸಿದ್ದಾರೆ.

Dwindling housing dream Of Poor People CPI Girish snr

 ತುಮಕೂರು :  ಮನೆ ನಿರ್ಮಿಸಿಕೊಳ್ಳುವ, ನಿವೇಶನ ಹೊಂದುವ ಬಡಜನರ ಕನಸು ಕಮರುತ್ತಿರುವ ಹಿನ್ನೆಲೆಯಲ್ಲಿ ಫೆ. 26 ರಿಂದ ನಿವೇಶನ ಮತ್ತು ವಸತಿ ರಹಿತರ ಕಾಲ್ನಡಿಗೆ ಜಾಥಾವು ಶಿರಾ ತಾಲೂಕಿನ ತಾಳಗುಂದ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗಲಿದೆ ಎಂದು ಸಿಪಿಐ (ಭಾರತ ಕಮ್ಯೂನಿಸ್ಟ್‌ ಪಕ್ಷ) ದ ಜಿಲ್ಲಾ ಕಾರ್ಯದರ್ಶಿ ಗಿರೀಶ್‌ ತಿಳಿಸಿದ್ದಾರೆ.

ಅವರು ಈ ಕುರಿತು ಹೇಳಿಕೆ ನೀಡಿದ್ದು, ದುಡಿಯುವ ಕೈಗಳಿಗೆ ಉದ್ಯೋಗ, ಉಣ್ಣಲು ಹೊಟ್ಟೆತುಂಬ ಊಟ, ನೆಮ್ಮದಿಯಿಂದ ನಿದ್ರಿಸಲು ಸ್ವಂತದ ಒಂದು ಸೂರು ಇವು ಈ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಆದರೆ ಇಂದು ನಮ್ಮ ದೇಶದಲ್ಲಿ ನಮ್ಮನ್ನಾಳುತ್ತಿರುವ ಸರ್ಕಾರಗಳು ದುಡಿಯುವ ಕೈಗಳಿಗೆ ಉದ್ಯೋಗ ನೀಡದೆ ಹೊಟ್ಟೆತುಂಬ ಅನ್ನ ಸಿಗದಂತೆ ಮಾಡಿ ಹಸಿವೆಯಿಂದ ನರಳುತ್ತ, ಮಲಗಲೂ ಕೂಡ ಸ್ವಂತ ಮನೆಯಿಲ್ಲದ ಸ್ಥಿತಿಗೆ ಜನರನ್ನು ದೂಡಿದೆ. ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ನಮ್ಮ ಕಾರ್ಪೋರೇಟ್‌ ಮಾಲೀಕರು ಸೇರ್ಪಡೆಯಾಗುತ್ತಿದ್ದು, ಸಾರ್ವಜನಿಕ ಸಂಪತ್ತು ಎಗ್ಗಿಲ್ಲದೆ ಲೂಟಿಯಾಗುತ್ತಿದೆ. ಈ ನೆಲದ ಕಾನೂನುಗಳನ್ನೂ ಮೀರಿ ಸರ್ಕಾರಿ ಭೂಮಿಯನ್ನು ಶ್ರೀಮಂತರಿಗೆ, ಧಾರ್ಮಿಕ ಸಂಸ್ಥೆ, ಮತ್ತಿತರೆ ಪ್ರಭಾವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆದರೆ ಸೂರಿಲ್ಲದ ಬಡವನೊಬ್ಬ ಸ್ವಂತ ಸೂರಿಗಾಗಿ ಸರ್ಕಾರದ ಬಳಿ ಅಗತ್ಯ ಜಮೀನನ್ನು (ನಿವೇಶನ) ಕೇಳಿದರೆ ಭೂಮಿ ಲಭ್ಯವಿಲ್ಲ ಎಂಬ ಬೇಜವಾಬ್ದಾರಿ ಉತ್ತರ ಸಿಗುತ್ತಿದೆ ಎಂದು ಬೇಸರವ್ಯಕ್ತಪಡಿಸಿದ್ದಾರೆ.

ಫೆ. 26 ರಂದು ಬೆಳಗ್ಗೆ 10-30 ಕ್ಕೆ ಸಭೆ ನಡೆದು, ನಂತರ ಜಾಥಾವನ್ನು ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಉದ್ಘಾಟಿಸುವರು. ಈ ನಿವೇಶನ ರಹಿತರ ಕಾಲ್ನಡಿಗೆ ಜಾಥಾದಲ್ಲಿ ಸಿಪಿಐ ತುಮಕೂರು ಜಿಲ್ಲಾ ಉಸ್ತುವಾರಿ ಎ. ಜ್ಯೋತಿ ಅನಂತಸುಬ್ಬರಾವ್‌, ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎಂ.ಸಿ. ಡೋಂಗ್ರೆ, ರಾಜ್ಯ ಖಜಾಂಚಿ ಧರ್ಮರಾಜು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳು ಭಾಗವಹಿಸುವರು. ನಿವೇಶನ ಮತ್ತು ವಸತಿ ಹರಿತರ ಕಾಲ್ನಡಿಗೆ ಜಾಥಾವು ಫೆಬ್ರವರಿ 26 ರಂದು ಪ್ರಾರಂಭವಾಗಿ ಮಾಚ್‌ರ್‍ 9ರಂದು ಬೆಂಗಳೂರು ತಲುಪಲಿದೆ ಅಂದು ಸ್ವಾತಂತ್ರ್ಯ ಉದ್ಯಾನÜವನದಲ್ಲಿ ಬೃಹತ್‌ ಸಭೆ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಿರೀಶ್‌ ತಿಳಿಸಿದ್ದಾರೆ.

70ರಷ್ಟು ಜನರು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಗೆ ಮನಸ್ಸು ಮಾಡಿದ್ದಾರೆ

ನವದೆಹಲಿ (ಫೆ.22): ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಶೇ.45ರಷ್ಟು ಭಾರತೀಯರು ಹೊಸ ಮನೆಗೆ ಶಿಫ್ಟ್ ಆಗುವ ಪ್ಲ್ಯಾನ್ ಹೊಂದಿದ್ದಾರೆ. ಹಾಗೆಯೇ ಬಹುತೇಕರು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಸುವ ಯೋಚನೆ ಹೊಂದಿದ್ದಾರೆ ಎಮದು ಹೊಸ ಸಮೀಕ್ಷೆಯೊಂದು ಹೇಳಿದೆ. 'ಭಾರತದ ಧ್ವನಿಗಳು: ಭವಿಷ್ಯದಲ್ಲಿ ಜನರು ಹೇಗೆ ಬದುಕುತ್ತಾರೆ, ಕಾರ್ಯನಿರ್ವಹಿಸುತ್ತಾರೆ ಹಾಗೂ ಶಾಪಿಂಗ್ ಮಾಡುತ್ತಾರೆ?' ಎಂಬ ವರದಿಯೊಂದನ್ನು ಸಿಬಿಆರ್ ಇ ಇಂಡಿಯಾ ಬಿಡುಗಡೆಗೊಳಿಸಿದೆ. ಸಮೀಕ್ಷೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ.31ರಷ್ಟಿದ್ದರೆ ಈ ವರ್ಷ ಶೇ.44ರಷ್ಟು ಜನರು ಹೊಸ ಮನೆಗೆ ಹೋಗುವ ಬಯಕೆ ಹೊಂದಿದ್ದಾರೆ. ಇದು ಜಾಗತಿಕ ಹಾಗೂ ಏಷ್ಯಾ-ಫೆಸಿಫಿಕ್ ಪ್ರಾಂತ್ಯದಲ್ಲೇ ಅತೀಹೆಚ್ಚಿನದ್ದಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಜಾಗತಿಕ ಸಮೀಕ್ಷೆಗೆ 20 ಸಾವಿರಕ್ಕೂ ಅಧಿಕ ಜನರಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಭಾರತದ 1,500 ಜನರಿಂದ ಸಂಗ್ರಹಿಸಿದ ಮಾಹಿತಿಯೂ ಸೇರಿದೆ. 18ನೇ ವಯಸ್ಸಿನಿಂದ 57ನೇ ವಯಸ್ಸಿನ ತನಕದ ವಿವಿಧ ವಯೋಮಾನದವರಿಂದ ಸ್ಯಾಂಪಲ್ (ಮಾಹಿತಿ) ಸಂಗ್ರಹಿಸಲಾಗಿದೆ. ಇನ್ನು ಈ ಸಮೀಕ್ಷೆಯಲ್ಲಿ 18-25ನೇ ವಯೋಮಾನದವರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಹೊಸ ಮನೆಗೆ ಶಿಫ್ಟ್  ಆಗುವ ಕನಸು ಕಾಣುತ್ತಿದ್ದಾರೆ.  58 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದವರು ಹೊಸ ಮನೆ ಖರೀದಿ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಲ್ಲ.

2016 ನೇ ಸಾಲಿನ ಸಮೀಕ್ಷೆಗೆ ಹೋಲಿಸಿದ್ರೆ ಈ ಬಾರಿ ಟ್ರೆಂಡ್ ಬದಲಾಗಿದೆ ಎಂದು ಸಿಬಿಆರ್ ಇ ತಿಳಿಸಿದೆ. ಜಗತ್ತಿನಲ್ಲಿ ಶೇ.70ರಷ್ಟು ಜನರು ಬಾಡಿಗೆ ಮನೆ ಬದಲು ಸ್ವಂತ ಮನೆ ಖರೀದಿಗೆ ಮನಸ್ಸು ಮಾಡಿದ್ದಾರೆ ಎಂದು ಸಿಬಿಆರ್ ಇ (CBRE) ಹೇಳಿದೆ. 2016ರಲ್ಲಿ ಶೇ.68ರಷ್ಟು ಜನರು ಬಾಡಿಗೆ ಮನೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. 42ರಿಂದ 57ನೇ ವಯಸ್ಸಿನ ಜನರನ್ನು ಹೊರತುಪಡಿಸಿ ಉಳಿದ ಎಲ್ಲ ವರ್ಗದವರು ನಗರ ಕೇಂದ್ರಗಳಿಗೆ ಸಮೀಪವಿರುವ ಸ್ಥಳಗಳಲ್ಲಿ ಮನೆ ಖರೀದಿಸಲು ಆಸಕ್ತಿ ತೋರಿದ್ದಾರೆ. ಇನ್ನು 42ರಿಂದ 57ನೇ ವಯಸ್ಸಿನ ಜನರು ದೂರದ ಸ್ಥಳಗಳನ್ನು ಹೆಚ್ಚು ಆಯ್ಕೆ ಮಾಡಿದ್ದಾರೆ. ಅಲ್ಲದೆ, ವೃತ್ತಿಯಲ್ಲಿ ಹೆಚ್ಚಿನ ಪರಿಣತಿ ಸಾಧಿಸಿರುವ ಕಾರಣ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಅನ್ಯರಾಷ್ಟ್ರಗಳಿಗೆ ತೆರಳುವ ಪ್ಲ್ಯಾನ್ ಕೂಡ ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 

Latest Videos
Follow Us:
Download App:
  • android
  • ios