ಯಾದಗಿರಿ (ಸೆ.01): ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಹಾಗೂ ಬಂಧನ ಭೀತಿಯಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದುರ್ಗಾದೇವಿ ಶಾಪ ತಟ್ಟಿದೆಯೇ?

ಈ ಚರ್ಚೆ ಜಿಲ್ಲೆಯಲ್ಲಿ ಆರಂಭವಾಗಿದೆ. ತಾವು ಸದಾ ನಂಬುತ್ತಿದ್ದ ಶಕ್ತಿದೇವತೆಯನ್ನು ನಿರ್ಲಕ್ಷ್ಯ ಮಾಡಿದ್ದು, ಡಿಕೆಶಿಗೆ ಸಂಕಷ್ಟ  ಎದುರಾಗಲಿದೆ ಎಂದು ಇತ್ತೀಚೆಗೆಷ್ಟೆ ‘ಭವಿಷ್ಯ’ ನುಡಿದಿದ್ದ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ಆರಾಧಕ ಮಹಾದೇವಪ್ಪ ಪೂಜಾರಿ, ಇದೀಗ ಡಿಕೆಶಿ ನೆರವಿಗೆ ಧಾವಿಸಿದ್ದಾರಂತೆ. 

ಡಿಕೆಶಿ ಅವರಿಗೆ ಎದುರಾಗಿರುವ ಸಂಕಷ್ಟಗಳ ನಿವಾರಿಸಲು ಗೋನಾಲ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾದೇವಪ್ಪ, ಅಮಾವಾಸ್ಯೆ ದಿನವಾದ ಶುಕ್ರವಾರ ವಿಶೇಷ ಪೂಜೆ ನೆರವೇರಿಸಿದ್ದಾರೆ. 

ಬಳಿಕ ಬೆಂಗಳೂರಿಗೆ ತೆರಳಿ, ಡಿಕೆಶಿ ಅವರನ್ನು ಭೇಟಿಯಾಗಿ ಜಪಮಾಲೆ ಹಾಗೂ ಕುಂಕುಮ ಕೊಟ್ಟು ಎಲ್ಲವೂ ಸುಗಮವಾಗಿ ಸಾಗಿ, ತೊಂದರೆ ನಿವಾರಣೆ ಯಾಗುತ್ತದೆ ಎಂಬ ಅಭಯ ನೀಡಿ ಬಂದಿದ್ದಾರೆ ಎನ್ನಲಾಗಿದೆ.