ಗ್ಯಾರೆಂಟಿ ಭರವಸೆ ಯಥಾವತ್ತಾಗಿ ಜಾರಿಗೊಳಿಸಿ: ಗೌಡ

ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್‌ ಭರವಸೆ ಮತದಾರರ ಮನಸ್ಸಿನಲ್ಲಿ ನೇರವಾದ ಪ್ರಭಾವ ಬೀರಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದ್ದರಿಂದ ಜನರಿಗೆ ಕೊಟ್ಟಆಶ್ವಾಸನೆಗಳನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಯಥಾವತ್ತಾಗಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು.

 Duly enforce guarantee promise: Gowda snr

  ಶಿರಾ :  ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್‌ ಭರವಸೆ ಮತದಾರರ ಮನಸ್ಸಿನಲ್ಲಿ ನೇರವಾದ ಪ್ರಭಾವ ಬೀರಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದ್ದರಿಂದ ಜನರಿಗೆ ಕೊಟ್ಟಆಶ್ವಾಸನೆಗಳನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಯಥಾವತ್ತಾಗಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಶಿರಾ ಕ್ಷೇತ್ರದ ಮತದಾರರು 42329 ಸಾವಿರಕ್ಕೂ ಹೆಚ್ಚು ಮತ ನೀಡಿ ಬೆಂಬಲ ಸೂಚಿಸಿದ್ದಾರೆ. ಮತದಾರರು ಕೊಟ್ಟಿರುವ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇವೆ. ನಾನು ಶಿರಾ ತಾಲೂಕಿನಲ್ಲಿ ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡುತ್ತೇನೆ. ಟಿ.ಬಿ.ಜಯಚಂದ್ರ ಅವರಿಗೆ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ತಪ್ಪು ದಾರಿಗೆ ಹೋದರೆ ವಿರೋಧಿಸುತ್ತೇವೆ. ಶಿರಾ ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಬಾರದು. ಮದಲೂರು ಕೆರೆಗೆ ನೀರು ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು, ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯನ್ನು ಪೂರ್ಣಗೊಳಿಸಬೇಕು, ಕೋವಿಡ್‌ ಸಂದರ್ಭದಲ್ಲಿ ತಾಲೂಕಿನಲ್ಲಿ ಸಾಕಷ್ಟುಶಾಲಾ ಕಾಲೇಜುಗಳ ಕಟ್ಟಗಳು ಶಿಥಿಲವಾಗಿವೆ. ಅವುಗಳನ್ನು ಸರಿಪಡಿಸಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಸಂತೇಪೇಟೆ ನಟರಾಜ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ಈರಣ್ಣ ಪಟೇಲ್‌, ಮುಖಂಡರಾದ ಹನುಮಂತೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ, ನಾದೂರ್‌ ಕುಮಾರ್‌, ಕರೂರು ರೇಣುಕ ಪ್ರಸಾದ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರಿಯಣ್ಣ, ಡಿ.ಎಚ್‌.ಗೌಡ, ಕ್ಯಾದಿಗುಂಟೆ ಮಂಜುನಾಥ್‌ ಸೇರಿದಂತೆ ಹಲವರು ಹಾಜರಿದ್ದರು.

ಮುಖ್ಯಮಂತ್ರಿ ಹುದ್ದೆಗೆ  ಕಗ್ಗಂಟು

ಬೆಂಗಳೂರು (ಮೇ.16) : ಭಾರಿ ಬಹುಮತದಿಂದ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಗೆ ಹಿಡಿದಿರುವ ಬಿಗಿ ಪಟ್ಟನ್ನು ದಿನ ಕಳೆದಂತೆ ಮತ್ತಷ್ಟುಬಿಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಗ್ಗಂಟು ಬಗೆಹರಿಸುವ ಹೊಣೆ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರ ಹೆಗಲೇರಿದೆ.

ಸೋನಿಯಾ ಹಾಗೂ ರಾಹುಲ್‌ ಅವರ ಮಧ್ಯಸ್ಥಿಕೆ ಇಲ್ಲದೇ ಈ ಕಗ್ಗಂಟು ಬಗೆಹರಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸಲು ಭಾನುವಾರ ನಡೆಸಲಾದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ಬಿಡುವ ಏಕ ಸಾಲಿನ ನಿರ್ಣಯ ಹಾಗೂ ಅದರೊಟ್ಟಿಗೆ ಎಲ್ಲ ಶಾಸಕರ ರಹಸ್ಯ ಮತದಾನ ಕೂಡ ನಡೆಸಲಾಗಿತ್ತು.

DK Shivakumar: ಡಿಕೆಶಿಗೇ ಸಿಎಂ ಪಟ್ಟ: ಒಕ್ಕಲಿಗ ಸಂಘ ಪಟ್ಟು!...

ಈ ರಹಸ್ಯ ಮತದಾನದ ಪೆಟ್ಟಿಗೆಯನ್ನು ಕಾಂಗ್ರೆಸ್‌ ವೀಕ್ಷಕರು ಸೋಮವಾರವೇ ದೆಹಲಿಗೆ ಒಯ್ದಿದ್ದರು. ಇದರ ಹಿನ್ನೆಲೆಯಲ್ಲೇ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ(DK Shivakumar and Siddaramaiah) ಅವರಿಗೆ ದೆಹಲಿಗೆ ಬರುವಂತೆ ಬುಲಾವ್‌ ಕೂಡ ಬಂದಿತ್ತು. ಅದರಂತೆ, ಸಿದ್ದರಾಮಯ್ಯ ಅವರು ಸೋಮವಾರ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರೂ ಡಿ.ಕೆ. ಶಿವಕುಮಾರ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ರದ್ದುಪಡಿಸಿದರು.

ಈ ರೀತಿ ಹಠಾತ್‌ ದೆಹಲಿ ಯಾತ್ರೆ ರದ್ದಾಗುವುದರ ಹಿಂದೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ(Soniya gandhi and rahul gandhi)ಅವರು ದೆಹಲಿಯಲ್ಲಿ ಸೋಮವಾರ ಇಲ್ಲದ್ದೇ ಇದ್ದದ್ದು ಕೂಡ ಕಾರಣ ಎನ್ನಲಾಗುತ್ತಿದೆ. ವಾಸ್ತವವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge) ಅವರು ಸೋಮವಾರ ವೀಕ್ಷಕರೊಂದಿಗೆ ಸಭೆ ನಡೆಸಿ ಶಾಸಕಾಂಗ ಪಕ್ಷದ ಸಭೆಯ ನಡಾವಳಿಯ ಮಾಹಿತಿ ಹಾಗೂ ರಹಸ್ಯ ಮತದಾನದ ಪೆಟ್ಟಿಗೆ ಸುಪರ್ದಿಗೆ ಪಡೆದಿದ್ದರು. ಈ ಪೆಟ್ಟಿಗೆಯನ್ನು ದೆಹಲಿಗೆ ಆಗಮಿಸುವ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಸಮ್ಮುಖ ತೆರೆದು ಶಾಸಕರ ಅಭಿಪ್ರಾಯವನ್ನು ಉಭಯ ನಾಯಕರಿಗೂ ತಿಳಿಸಿ ಮುಖ್ಯಮಂತ್ರಿ ಹುದ್ದೆಯ ವಿಚಾರ ಬಗೆಹರಿಸಬೇಕಿತ್ತು.

Latest Videos
Follow Us:
Download App:
  • android
  • ios