ಶಿವಮೊಗ್ಗ: ಮರಬಿದ್ದು ಶಿವಪ್ಪ ನಾಯಕ ಅರಮನೆ ಸ್ಮಾರಕಕ್ಕೆ ಧಕ್ಕೆ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಮರ ಉರುಳಿಬಿದ್ದು, ನೂರಾರು ವರ್ಷ ಹಳೆಯ ಶಿಲಾ ಶಾಸನಗಳು ಹಾನಿಗೊಳಗಾಗಿವೆ. ಜಿಲ್ಲೆಯಾದ್ಯಾಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಆರ್ಭಟಕ್ಕೆ ಐತಿಹಾಸಿಕ ಶಿವಪ್ಪ ನಾಯಕ ಅರಮನೆಯಲ್ಲಿಯೂ ಹಾನಿ ಸಂಭವಿಸಿದೆ.
ಶಿವಮೊಗ್ಗ(ಆ.07): ಮಲೆನಾಡು, ಉತ್ತರ ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಮರ ಉರುಳಿ ಬಿದ್ದು, ಶಿಲಾಶಾಸನಗಳು ಹಾನಿಯಾಗಿದೆ.
ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಮರ ಉರುಳಿಬಿದ್ದು, ನೂರಾರು ವರ್ಷ ಹಳೆಯ ಶಿಲಾ ಶಾಸನಗಳು ಹಾನಿಗೊಳಗಾಗಿವೆ. ಜಿಲ್ಲೆಯಾದ್ಯಾಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಮಳೆಯ ಆರ್ಭಟಕ್ಕೆ ಐತಿಹಾಸಿಕ ಶಿವಪ್ಪ ನಾಯಕ ಅರಮನೆಯಲ್ಲಿಯೂ ಹಾನಿ ಸಂಭವಿಸಿದೆ.
ಶಿವಪ್ಪ ನಾಯಕನ ಬೇಸಿಗೆ ಅರಮನೆ:
ಇದು ಶಿವಪ್ಪನಾಯಕನ ಬೇಸಿಗೆ ಅರಮನೆ. 1985 ರ ಸುಮಾರಿಗೆ ಇತಿಹಾಸ ತಜ್ಞ ಅ. ಸುಂದರ ಸ್ಥಳೀಯ ಇತಿಹಾಸಾಕ್ತರ ಜೊತೆಗೂಡಿ ಇದನ್ನು ಪತ್ತೆ ಮಾಡಿದರು. ಅಲ್ಲಿಯವರೆಗೆ ಇದು ಅರಣ್ಯ ಇಲಾಖೆ ತನ್ನ ನಾಟಾ ಸಂಗ್ರಹಾಲಯವಾಗಿ ಬಳಕೆ ಮಾಡುತ್ತಿತ್ತು. ಪತ್ತೆಯ ಬಳಿಕ ಇದನ್ನು ಅಭಿವೃದ್ಧಿ ಪಡಿಸಲಾಗಿದೆ.
ಶಿವಮೊಗ್ಗ: ಅಪಾಯಮಟ್ಟಮೀರಿ ಹರಿಯುತ್ತಿರುವ ನದಿಗಳು
ವಿವಿಧೆಡೆ ದೊರೆತ ಮತ್ತು ದೊರೆಯುತ್ತಿರುವ ಪ್ರಾಚ್ಯ ವಸ್ತುಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಜೊತೆಗೆ ಶಿವಪ್ಪನಾಯಕ ಮತ್ತವರ ವಂಶಸ್ಥರು ಬಳಕೆ ಮಾಡುತ್ತಿದ್ದ ವಸ್ತುಗಳ ಸಂಗ್ರಹಾಲಯವೂ ಇದೆ. ಇತಿಹಾಸ ಮತ್ತು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಕಚೇರಿಯೂ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ.