ಬಾಗಲಕೋಟೆ: ಬಸ್ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿದ ಕುಡುಕ!
ಕುಡಿದ ಮತ್ತಿನಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕ| ಬಾಗಲಕೋಟೆ ತಾಲೂಕಿನ ಸಿಕ್ಕೇರಿ ಗ್ರಾಮದ ಬಳಿ ನಡೆದ ಘಟನೆ|ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಬರುತ್ತಿದ್ದ ಬಸ್| ರಾಂಪೂರನಿಂದ ಬಾಗಲಕೋಟೆಗೆ ಪ್ರಯಾಣಿಸುತ್ತಿದ್ದ ಕುಡುಕ ಸಂತೋಷ|
ಬಾಗಲಕೋಟೆ(ಡಿ.19): ಸರ್ಕಾರಿ ಬಸ್‌ನಲ್ಲಿದ್ದ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಸಿಕ್ಕೇರಿ ಗ್ರಾಮದ ಬಳಿ ಇಂದು(ಗುರುವಾರ) ನಡೆದಿದೆ. ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಎಂಬುವವರ ಮೇಲೆ ಕುಡಿದ ಮತ್ತಿನಲ್ಲಿ ಸಂತೋಷ ವಾಲಿಕಾರ ಎಂಬಾತ ಹಲ್ಲೆ ನಡೆಸಿದ್ದಾನೆ.
"
ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಬರುತ್ತಿದ್ದ ಬಸ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ಸಂತೋಷ ಸೀಟ್‌ನಲ್ಲಿ ಮಲಗಿಕೊಂಡಿದ್ದನು ಕೊನೆಗೆ ಬಾಗಿಲ ಬಳಿ ಬಂದು ನಿಂತಿದ್ದನು. ಈ ವೇಳೆ ಈ ವೇಳೆ ಸೀಟ್ ಮೇಲೆ ಕೂರುವಂತೆ ಕಂಡಕ್ಟರ್ ಕಾಶೀನಾಥ್ ಅವರು ಹೇಳಿದ್ದರು. ಕುಡುಕ ಸಂತೋಷ ರಾಂಪೂರನಿಂದ ಬಾಗಲಕೋಟೆಗೆ ಆಗಮಿಸುತ್ತಿದ್ದನು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ವೇಳೆ ಜಗಳವಾಡಿಕೊಂಡ ಪಾನಮತ್ತ ಸಂತೋಷ ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಅವರ ಮುಖದ ಮೇಲೆ ರಕ್ತ ಬರುವ ಹಾಗೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಅವರು ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಸಂತೋಷನನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ.