ಚಡಚಣ(ಡಿ.14): ಡಿಪೋ ಮ್ಯಾನೇಜರ್‌ ಒತ್ತಡಕ್ಕೆ ಬಸ್‌ ಚಾಲಕನೊಬ್ಬ ಕುಡಿದ ಅಮಲಿನಲ್ಲಿಯೇ ಇಂಡಿ ಬಸ್‌ ನಿಲ್ದಾಣದಿಂದ ಚಡಚಣದವರೆಗೆ ಬಸ್‌ ಚಲಾಯಿಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಜರುಗಿದೆ.

ಇಂಡಿ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕನನ್ನು ಒತ್ತಾಯಪೂರ್ವಕವಾಗಿ ಕರ್ತವ್ಯ ನಿರ್ವಹಿಸುವಂತೆ ಡಿಪೋ ಮ್ಯಾನೇಜರ್‌ ಎಂ.ಆರ್‌.ಲಮಾಣಿ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿದ ಚಾಲಕ ಕುಡಿದ ಅಮಲಿನಲ್ಲಿಯೇ ಬಸ್‌ನ್ನು ಚಲಾಯಿಸಿಕೊಂಡು ಸುಮಾರು 40 ಕಿಮೀ ದೂರದ ಚಡಚಣ ಪಟ್ಟಣಕ್ಕೆ ಬಂದಿದ್ದಾನೆ.

ಬೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಬಸ್‌ನಲ್ಲಿ ಡಿಪೋ ಮ್ಯಾನೇಜರ್‌ ಸುಮಾರು 20 ಕಿಮೀ ದೂರವಿರುವ ಝಳಕಿ ಗ್ರಾಮದವರೆಗೂ ಆಗಮಿಸಿದ್ದಾರೆ. ಪಟ್ಟಣಕ್ಕೆ ಬಸ್‌ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಬಸ್‌ನ ಒಳಗಡೆ ತೆರಳುವ ಸಂದರ್ಭದಲ್ಲಿ ಚಾಲಕ ಪಾನಮತ್ತನಾಗಿರುವುದು ಗಮನಕ್ಕೆ ಬಂದಿದೆ. ಪ್ರಯಾಣಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಚಾಲಕ ನಿಲ್ದಾಣದಲ್ಲಿ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ.