Asianet Suvarna News Asianet Suvarna News

ಮದ್ಯ ಸೇವಿಸಿ ಹೊಳೆಗೆ ಹಾರಿದ ವಿಜ್ಞಾನಿ!

ಕಂಠಪೂರ್ತಿ ಕುಡಿದ ವಿಜ್ಞಾನಿಯೋರ್ವರು ಹೊಳೆಗೆ ಹಾರಿದ ಘಟನೆ ನಡೆದಿದೆ.

Drunk Scientist Jumping To River  At Uppinangadi  snr
Author
Bengaluru, First Published Oct 4, 2020, 3:33 PM IST
  • Facebook
  • Twitter
  • Whatsapp

ಉಪ್ಪಿನಂಗಡಿ (ಅ.04):  ಕಡಬ ರಬ್ಬರ್‌ ಸಂಶೋಧನಾ ಕೇಂದ್ರದ ವಿಜ್ಞಾನಿಯೋರ್ವರು ಮದ್ಯ ಸೇವಿಸಿ ಹೊಸಮಠ ಹೊಳೆಗೆ ಹಾರಿದ ಘಟನೆ ಬುಧವಾರ ಸಾಯಂಕಾಲ ಸಂಭವಿಸಿದೆ.

ತಮಿಳುನಾಡು ಮೂಲದ ರವಿಚಂದ್ರನ್‌ ಎಂಬವರು ಮದ್ಯ ಸೇವನೆಯ ಅಮಲಿನಲ್ಲಿ ಬೈಕೊಂದರಲ್ಲಿ ಹೊಸಮಠಕ್ಕೆ ಬಂದು ಹೊಳೆಗೆ ಹಾರಿದರು.

ಮೈಸೂರು; ಸಾಯುತ್ತೇನೆ ಎಂದು ಹೇಳ್ತಾ ಕೊನೆಗೂ ಎಣ್ಣೆ ಏಟಲ್ಲಿ ನೇಣು ಹಾಕ್ಕೊಂಡ!

ಇದನ್ನು ಕಂಡ ಸ್ಥಳೀಯರು ಹಾಗೂ ಮೆಸ್ಕಾಂನ ಇಬ್ಬರು ಸಿಬ್ಬಂದಿ ಅವರನ್ನು ರಕ್ಷಿಸಲು ಮುಂದಾದರಾದರೂ, ಅವರನ್ನೇ ಹೊಳೆಯಲ್ಲಿ ಸತಾಯಿಸಿದ್ದಾರೆ. 

ವಿಚಾರ ತಿಳಿದು ಧಾವಿಸಿದ ಕಡಬ ಎಸೈ ರುಕ್ಮ ನಾಯ್ಕ್  ಮತ್ತವರ ಸಿಬ್ಬಂದಿ ರವಿಚಂದ್ರನ್‌ ಅವರನ್ನು ಹೊಳೆಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಫಲರಾದರು.

Follow Us:
Download App:
  • android
  • ios