ಹುಬ್ಬಳ್ಳಿ (ಸೆ.13): ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಮುಖಂಡನೊಬ್ಬನನ್ನು ಇಲ್ಲಿನ ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮಾಜಿ ಸಚಿವರೊಬ್ಬರ ಆಪ್ತನಾಗಿರುವ ಈತ, ನಟಿ ರಾಗಿಣಿ ಸೇರಿದಂತೆ ಮತ್ತಿತರರನ್ನು ಗೋವಾ ಕ್ಯಾಸಿನೋಗೆ ಕರೆದುಕೊಂಡು ಹೋಗಿದ್ದ. ಆಗ ರಾಗಿಣಿ ಜತೆ ತೆಗೆಸಿಕೊಂಡ ಫೋಟೋಗಳನ್ನು ಫೇಸ್‌ಬುಕ್‌ಗೂ ಅಪ್‌ಲೋಡ್‌ ಮಾಡಿದ್ದ. 

ಡ್ರಗ್ಸ್ ಕೇಸಲ್ಲಿ ತಗಲಾಕೊಂಡಿರೋ ನಟಿಮಣಿಯರಿಗೆ ಮತ್ತೊಂದು ಸಂಕಷ್ಟ ...

ಬಳಿಕ ಡಿಲೀಟ್‌ ಕೂಡ ಮಾಡಿದ್ದು, ಒಂದು ವಾರದಿಂದ ಈ ಕುರಿತು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ಸಿಸಿಬಿ ಅಧಿಕಾರಿಗಳ ತಂಡ ಇಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆನ್ನಲಾಗಿದೆ. 

ಅದರಂತೆ ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಹಲವರನ್ನು ಬಂಧಿಸಿ ತನಿಖೆಗೂ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಮುಖಂಡನನ್ನು ಅರೆಸ್ಟ್ ಮಾಡಲಾಗಿದೆ. 

ರಾಜ್ಯದಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬರುತ್ತಲೇ ಒಂದೊಂದೇ ಹೆಸರುಗಳು ಹೊರಬರುತ್ತಿದ್ದು, ಹೊಸ ಹೊಸ ಆಯಾಮಗಳೇ ದೊರೆಯುತ್ತಿವೆ.