ಕೆ ಆರ್ ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ: ಭಾರೀ ವಿರೋಧ

ಕೆ ಆರ್ ಎಸ್ ಡ್ಯಾಂಗೆ 90 ವರ್ಷ ಆಗಿದೆ. ಎಷ್ಟು ವರ್ಷ ಸ್ಥಿತವಾಗಿರುತ್ತೆ ಹೇಳಲು ಸಾಧ್ಯವಿಲ್ಲ. ಕೆ ಆರ್ ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಬೆಂಗಳೂರಿನ ಒಂದು ವರೆ ಕೋಟಿ ಜನರಿಗೆ ನೀರು. ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ತಮಿಳುನಾಡು ನೀರಿಗೆ ಅವಲಂಬಿತವಾಗಿದೆ ಎಂದು ಇಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಡಿಸ್ನಿ ಲ್ಯಾಂಡ್‌ಗೆ  9 ಪ್ರಮುಖ ತಾಂತ್ರಿಕ ಅಂಶ ನೀಡಿ ವಿರೋಧ ಪಡಿಸಲಾಗಿದೆ.

Drop idea of building Disney Land in KRS  Says M Lakshman snr

ಮೈಸೂರು (ಮಾ.13) : ಕೆ ಆರ್ ಎಸ್‌ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ ಯೋಜನೆಗೆ ಮತ್ತೆ ಜೀವ ತುಂಬಲು ಹೊರಟ ಸಚಿವ ಯೋಗೇಶ್ವರ್‌ಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಮೈಸೂರಿನಲ್ಲಿ ಇಂಜಿನಿಯರ್ ಎಂ ಲಕ್ಷ್ಮಣ ವಿರೋಧ ವ್ಯಕ್ತಪಡಿಸಿದ್ದಾರೆ. 

ಡಿಸ್ನಿಲ್ಯಾಂಡ್ ಸುಮಾರು 2000 ಕೋಟಿ ಪ್ರಾಜೆಕ್ಟ್. ಇದಕ್ಕಾಗಿ 5 ಕಂಪನಿ ಗುರುತಿಸಲಾಗಿದೆ. ಸರ್ಕಾರದ 331 ಎಕರೆ 23 ಗುಂಟೆ ಹಾಗೂ ರೈತರಿಂದ 400 ಎಕರೆ ಸ್ವಾಧೀನ ಮಾಡಿಕೊಂಡಿದ್ದು,ವಿಜಯಪುರದ ಸಿನ್ಸಿಯರ್ ಆರ್ಕಿಟೆಕ್ಟ್ ಈ ಬಗ್ಗೆ ಯೋಜನೆ ಸಿದ್ದಪಡಿಸಿದೆ. ಸರ್ಕಾರ ಪ್ರವಾಸೋದ್ಯಮದ ದೃಷ್ಟಿ ಉದ್ಯೋಗ ಸೃಷ್ಟಿಯ ಕಾರಣ ನೀಡಿದೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಲಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.

ಕೆ ಆರ್ ಎಸ್ ಡ್ಯಾಂಗೆ 90 ವರ್ಷ ಆಗಿದೆ. ಎಷ್ಟು ವರ್ಷ ಸ್ಥಿತವಾಗಿರುತ್ತೆ ಹೇಳಲು ಸಾಧ್ಯವಿಲ್ಲ. ಕೆ ಆರ್ ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಬೆಂಗಳೂರಿನ ಒಂದು ವರೆ ಕೋಟಿ ಜನರಿಗೆ ನೀರು. ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ತಮಿಳುನಾಡು ನೀರಿಗೆ ಅವಲಂಬಿತ.ವಾಗಿದೆ.  9 ಪ್ರಮುಖ ತಾಂತ್ರಿಕ ಅಂಶ ನೀಡಿ ವಿರೋಧ ಪಡಿಸಲಾಗಿದೆ.

ಪೊಲೀಸರಿಂದಲೇ ಕೆಆರ್‌ಎಸ್‌ನಲ್ಲಿ ಲೋಪ! ಅಧಿಕಾರಿಯಿಂದಲೇ ವಿಡಿಯೋ ಚಿತ್ರೀಕರಣ ...

ಹಿಂದೆ ಕೆ ಆರ್ ಎಸ್ 3.75 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅರ್ಧ ಸುಣ್ಣ ಹಾಗೂ ಅರ್ಧ ಮಣ್ಣಿನಿಂದ ನಿರ್ಮಾಣವಾಗಿದೆ. ಕಟ್ಟಬಾರದ ಜಾಗದಲ್ಲಿ ಡ್ಯಾಂ ಕಟ್ಟಲಾಗಿದೆ. ಸಣ್ಣ ಪ್ರಮಾಣದ ಅಲುಗಾಡಿದರೂ ಡ್ಯಾಂಗೆ ಅಪಾಯವಾಗಲಿದೆ.  ಕೆ ಆರ್ ಎಸ್‌ಗೆ ಜನರು ಬರುತ್ತಿರುವುದೇ ಅಪಾಯವಾಗಿದೆ. ಈ ಬಗ್ಗೆ ಕೇಂದ್ರಕ್ಕೆ ವರದಿ‌ ನೀಡಲಾಗಿದೆ ಎಂದು ವಿರೋಧಿಸಲಾಗಿದೆ. 

ಬರುತ್ತಿರುವ ಜನರನ್ನು ಕಡಿಮೆ‌ ಮಾಡಲು ತಿಳಿಸಲಾಗಿದೆ. ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯಿಂದ ವರದಿ. ಕಾವೇರಿ ಮಾತೆ ದೇವರು ಎಂದು ಪೂಜೆ ಮಾಡಲಾಗುತ್ತದೆ. ಆದರೆ ಆ ಜಾಗದಲ್ಲಿ ಹೋಟೆಲ್ ನೈಟ್ ಲೈಫ್.
24 ಗಂಟೆ ಮದ್ಯ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಮೆರಿಕಾ ಮಾದರಿಯಲ್ಲಿ ಪುಡ್ ಸ್ಟ್ರೀಟ್ ಮಾಡಲಾಗುತ್ತದೆ. ಕೆ ಆರ್ ಎಸ್‌ನ್ನು ಜಿ ಆರ್ ಎಸ್ ಫ್ಯಾಂಟಸಿ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಎಂ ಲಕ್ಷ್ಮಣ ಮಾಹಿತಿ ನೀಡಿದ್ದಾರೆ. 
 
ಯಾವುದೇ ಕಾರಣಕ್ಕೆ ಕೆ ಆರ್ ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಇದು ಕೇವಲ‌ ಖಾಸಗಿಯವರಿಗೆ ಲಾಭದಾಯಕ ಉದ್ಯಮವಾಗಲಿದೆ. ಇದರ ಎಂಟ್ರಿ ಶುಲ್ಕ ಸಹಾ ದುಬಾರಿಯಾಗಿರಲಿದೆ.  ಮಿನಿಮಮ್ ಒಬ್ಬರಿಗೆ 5 ಸಾವಿರ ರೂಪಾಯಿ ಆಗಲಿದೆ.

ಸಾಮಾನ್ಯ ಜನರು ಬಡ ಜನರು ಡಿಸ್ನಿಲ್ಯಾಂಡ್‌ಗೆ ಹೋಗಲು ಸಾಧ್ಯವಿಲ್ಲ. ಒಳಗಡೆಯೇ ಹೋಟೆಲ್ ಲಾಡ್ಜ್ ಇರುವುದರಿಂದ ಸ್ಥಳೀಯರಿಗೆ ಯಾವುದೇ ಲಾಭ ಇಲ್ಲ. ಪ್ರವಾಸೋದ್ಯಮ ಅಭಿವೃದ್ದಿಗೆ ನಮ್ಮ ಅಭ್ಯಂತರ ಇಲ್ಲ.
ಕೆ ಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್‌ಗೆ ನಮ್ಮ ವಿರೋಧ ಇದೆ. ಈ ಬಗ್ಗೆ ನಾವು ಸುಪ್ರೀಂಕೋರ್ಟ್ ಮೊರೆ ಹೋಗಲು ನಾವು ಸಿದ್ದರಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ದೂರು ನೀಡಲಾಗುವುದು. ಕೆ ಆರ್ ಎಸ್ ಬಿಟ್ಟು ಎಲ್ಲಿ ಬೇಕಾದರೂ ಮಾಡಿ ನಮ್ಮ ವಿರೋಧ ಇಲ್ಲ. ಮೈಸೂರಿನಲ್ಲಿ ಇನಸ್ಟಿಟ್ಯೂಟ್ ಆಫ್ ಇಂಜಿನಿಯರ್‌ನ ಎಂ ಲಕ್ಷ್ಮಣ ಹೇಳಿದ್ದಾರೆ.

Latest Videos
Follow Us:
Download App:
  • android
  • ios