ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ತೋಡೂರು ಗ್ರಾಮದ ಬಳಿ ನಡೆದ ಘಟನೆ. 

ಉತ್ತರಕನ್ನಡ(ಮಾ.23): ಎರಡು ಲಾರಿಗಳ‌ ಮಧ್ಯ ಭೀಕರ ಅಪಘಾತ ಸಂಭವಿಸಿದ ಪರಿಣಾ ಓರ್ವ ಚಾಲಕ ಮೃತಪಟ್ಟ ಘಟನೆ ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ತೋಡೂರು ಗ್ರಾಮದ ಬಳಿ ನಿನ್ನೆ(ಬುಧವಾರ) ನಡೆದಿದೆ. 

ಬಾಕ್ಸೈಟ್ ಅದಿರು ಹಾಗೂ ಮದ್ಯ ಸಾಗಿಸುತ್ತಿದ್ದ ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಾಕ್ಸೈಟ್ ಸಾಗಿಸುತ್ತಿದ್ದ ಲಾರಿ ಚಾಲಕ ಬೆಳಗಾವಿ ಖಾನಾಪುರದ ರೂಪೇಶ್ ಪಾಟೀಲ್ (23) ಸಾವನ್ನಪ್ಪಿದ್ದಾರೆ. ಸಹ ಚಾಲಕ ಕೂಡ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. 

ಬೆಂಗಳೂರು: ಪಾರ್ಟಿ ಬಳಿಕ ಜಾಲಿ ರೈಡಲ್ಲಿ ಭೀಕರ ಅಪಘಾತ, ಇಬ್ಬರ ಸಾವು

ಹೆದ್ದಾರಿಯಲ್ಲಿ ಗೋವಾ ಮದ್ಯ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗೋವಾ ಮದ್ಯದ ತುಂಬಿದ ಲಾರಿ ಗೋವಾದಿಂದ ಪಾಂಡಿಚೇರಿಯತ್ತ ಸಾಗುತ್ತಿತ್ತು ಅಂತ ತಿಳಿದು ಬಂದಿದೆ. ತೆರಳುತ್ತಿದ್ದ ಬಾಕ್ಸೈಟ್ ಅದಿರು ತುಂಬಿದ್ದ ಲಾರಿಗೋವಾದಿಂದ ಮಂಗಳೂರು ಕಡೆ ಸಾಗುತ್ತಿತ್ತು. 

ನಿದ್ದೆಯ ಮಂಪರಿನಲ್ಲಿ ಮುಂಬದಿ ತೆರಳುತ್ತಿದ್ದ ಮದ್ಯ ಸಾಗಾಟ ಲಾರಿಗೆ ಅದಿರು ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಢಿಕ್ಕಿ ರಭಸಕ್ಕೆ ಎರಡೂ ಲಾರಿಗಳು ನುಜ್ಜುಗುಜ್ಜಾಗಿವೆ. 

ಪರ್ಮಿಟ್ ಹೊಂದಿದ ಏಳು ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಸಂಪೂರ್ಣವಾಗಿ ನಾಶವಾಗಿದೆ. ಲಾರಿಯಲ್ಲಿದ್ದ ಮದ್ಯದ ಬಾಕ್ಸ್‌ಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.