Asianet Suvarna News Asianet Suvarna News

ಮೀಟರ್‌ ಆಧರಿಸಿ ಕುಡಿಯುವ ನೀರಿಗೆ ಬಿಲ್‌

ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ನೀರಿನ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿರುವುದರಿಂದ ನೀರಿನ ದರವನ್ನು ವ್ಯಾಲ್ಯೂ ಮೆಟ್ರಿಕ್‌ (ಮೀಟರ್‌ ಆಧಾರದಂತೆ) ವಸೂಲಿ ಮಾಡಲು ನಿರ್ಧರಿಸಲಾಗಿದೆ. ಫೆ.1ರಿಂದಲೇ ಕರ ವಸೂಲಾತಿ ಆರಂಭವಾಗಲಿದೆ.

Drinking water bill based on meter snr
Author
First Published Jan 25, 2023, 6:21 AM IST

 ಮಂಡ್ಯ :  ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ನೀರಿನ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿರುವುದರಿಂದ ನೀರಿನ ದರವನ್ನು ವ್ಯಾಲ್ಯೂ ಮೆಟ್ರಿಕ್‌ (ಮೀಟರ್‌ ಆಧಾರದಂತೆ) ವಸೂಲಿ ಮಾಡಲು ನಿರ್ಧರಿಸಲಾಗಿದೆ. ಫೆ.1ರಿಂದಲೇ ಕರ ವಸೂಲಾತಿ ಆರಂಭವಾಗಲಿದೆ.

ನಗರಸಭೆಯಲ್ಲಿ ಜ.17 ರಂದು ನಡೆದ ಸಭೆಯಲ್ಲಿ ನೀರಿನ ಕರವನ್ನು ವಸೂಲಾತಿ ಮಾಡಲು ಅನುಮೋದನೆ ನೀಡಲಾಗಿದೆ. ಕುಡಿಯುವ ನೀರಿನ ಸಂಪರ್ಕದ ನೀರಿನ ದರ ಗೃಹ ಬಳಕೆ ಪ್ರತಿ ಸಂಪರ್ಕಕ್ಕೆ ಕನಿಷ್ಠ ದರ 128 ರು. (0-8 ಕಿ.ಲೀಟರ್‌ಗೆ 16 ರು., 8-15 ಕಿ.ಲೀಟರ್‌ವರೆಗೆ 20 ರು., 15-25 ಕಿ.ಲೀಟರ್‌ವರೆಗೆ 26 ರು. ಹಾಗೂ 25 ಕಿ.ಲೀಟರ್‌ ಮೇಲ್ಪಟ್ಟು 31 ರು.) ನಿಗದಿಪಡಿಸಲಾಗಿದೆ.

ಗೃಹೇತರ ಬಳಕೆ ನೀರಿನ ದರ ಪ್ರತಿ ಸಂಪರ್ಕಕ್ಕೆ ಕನಿಷ್ಠ 260ರು. (0-8 ಕಿ.ಲೀಟರ್‌ವರೆಗೆ 33 ರು., 8-15 ಕಿ.ಲೀಟರ್‌ವರೆಗೆ 43 ರು., 15-25 ಕಿ.ಲೀಟರ್‌ವರೆಗೆ 52 ರು. ಹಾಗೂ 25 ಕಿ.ಲೀಟರ್‌ ಮೇಲ್ಪಟ್ಟು 61 ರು.) ನಿಗದಿಪಡಿಸಿದ್ದು, ವಾಣಿಜ್ಯ, ಕೈಗಾರಿಕಾ ಬಳಕೆಯ ನೀರಿನ ದರ ಪ್ರತಿ ಸಂಪರ್ಕಕ್ಕೆ ಕನಿಷ್ಠ ದರ 520 ರು. (0-8 ಕಿ.ಲೀಟರ್‌ಗೆ 66 ರು., 8-15 ಕಿ.ಲೀಟರ್‌- 85 ರು., 15-25 ಕಿ.ಲೀಟರ್‌ 104 ರು. ಹಾಗೂ 25 ಕಿ.ಲೀಟರ್‌ ಮೇಲ್ಪಟ್ಟು 122ರು.) ನಿಗದಿ ಮಾಡಲಾಗಿದೆ.

ಮನೆಮನೆಗೆ ಶೀಘ್ರ ನೀರು

 ಪಾವಗಡ :  ತಾಲೂಕಿನ ನೀರಿನ ಬವಣೆ ನಿವಾರಿಸುವ ಹಿನ್ನೆಲೆಯಲ್ಲಿ ಎರಡು ತಿಂಗಳೊಳಗೆ ಮನೆಮನೆಗೂ ನಲ್ಲಿ ಅಳವಡಿಸುವ ಮೂಲಕ ತುಂಗಭದ್ರಾ ನದಿಯ ಕುಡಿಯುವ ನೀರು ಕಲ್ಪಿಸಲಾಗುತ್ತದೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

ತಾಲೂಕು ಆಡಳಿತದಿಂದ ಶನಿವಾರ ತಾಲೂಕಿನ ಗುಜ್ಜನಡು ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಉದ್ಟಾಟನೆ ನೆರವೇರಿಸಿ ಮಾತನಾಡಿದರು.

ಪ್ರಯಾಣಿಕರ ಸುಗಮ ಸಂಚಾರಕ್ಕೆ ಗ್ರಾಮೀಣ ರಸ್ತೆ, ರೈಲ್ವೆ ಯೋಜನೆ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲಾ ಕಾಲೇಜು ಹಾಗೂ ವಸತಿ ಶಾಲೆ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಶಾಶ್ವತ ಕುಡಿವ ನೀರು ಸರಬರಾಜು ಕಲ್ಪಿಸುವ ಸಲುವಾಗಿ ತಾಲೂಕಿನ ಪ್ರತಿ ಮನೆಗಳಿಗೆ ನಲ್ಲಿ ಅಳವಡಿಕೆ ಪ್ರಗತಿಯಲ್ಲಿದೆ. ಇನ್ನು ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನೀರು ಪೂರೈಕೆಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಪ್ರಸಕ್ತ ಸಾಲಿಗೆ ಈ ಭಾಗದಲ್ಲಿ 12 ಕೋಟಿ ವೆಚ್ಚದಲ್ಲಿ ಗುಜ್ಜುನಡು ಮತ್ತು ಚಿನ್ನಮ್ಮನಹಳ್ಳಿ, ಪೆಮ್ಮನಹಳ್ಳಿಯಿಂದ ಅರಸೀಕೆರೆಗೆ ಸಂಪರ್ಕದ ಡಾಂಬರೀಕರಣ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.

ಮಾಚ್‌ರ್‍ ಒಳಗೆ ರೈಲು ತಾಲೂಕಿನ ಕೆ.ರಾಂಪುರಕ್ಕೆ ಆಗಮಿಸಲಿರುವ ಭರವಸೆ ನೀಡಿದರು.

ತಹಸೀಲ್ದಾರ್‌ ವರದರಾಜು ಮಾತನಾಡಿ, ಕುಂದು ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಕರೆ ನೀಡಿದರು.

ತಾಪಂ ಇಒ ಶಿವರಾಜಯ್ಯ ಮಾತನಾಡಿ, ಗ್ರಾಮಗಳಲ್ಲಿ ಶೌಚಾಲಯ, ಕಾಂಪೌಂಡು ನಿರ್ಮಾಣಕ್ಕೆ ನರೇಗಾದಲ್ಲಿ ಅವಕಾಶವಿದೆ. ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಗಮನಸೆಳೆದಿದ್ದು, ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ, ಆರೋಗ್ಯಾಧಿಕಾರಿ ಡಾ.ಕಿರಣ್‌, ಬಿಇಒ ಅಶ್ವತ್‌ ನಾರಾಯಣ…, ಎಡಿಎಗಳಾದ ವಿಜಯಮೂರ್ತಿ, ಶಂಕರ್‌ಮೂರ್ತಿ, ಅನಿಲ್‌, ಸಿದ್ದಗಂಗಯ್ಯ, ಹನುಮಂತರಾಯಪ್ಪ, ಸತೀಶ್ಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ, ಸಿದ್ದರಾಜು, ಸಿಡಿಪಿಒ ನಾರಾಯಣ್‌, ಚೌಡಪ್ಪ, ಅಶೋಕ್‌, ರಂಗನಾಥ್‌, ಮಲ್ಲಿಕಾರ್ಜುನ ಪಿಡಿಒ ಶ್ರೀನಿವಾಸ್‌, ಗ್ರಾಪಂ ಉಪಾಧ್ಯಕ್ಷೆ, ಸದಸ್ಯರು ಮತ್ತು ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿದ್ಯುತ್ ಸೌಲಭ್ಯ ಕಾಣದ ಹಳ್ಳಿಗಳು

ನಗರದಲ್ಲಿನ ಕೆಲವು ನೀರು ಸರಬರಾಜು ಗ್ರಾಹಕರು ಮಂಡಳಿ ವತಿಯಿಂದ ಅಳವಡಿಸಿರುವ ನೀರಿನ ಮಾಪಕವನ್ನು ತೆಗೆದು ಹಾಕಿರುವುದು ಕಂಡುಬಂದಿದ್ದು, ನೀರಿನ ಮಾಪಕವನ್ನು ಅಳವಡಿಸಿಕೊಳ್ಳದ ಗ್ರಾಹಕರಿಗೆ ಫೆ.1ರಿಂದ ಸರ್ಕಾರದ ಆದೇಶದ ಪ್ರಕಾರವೇ ಕರ ವಸೂಲಾತಿ ಮಾಡಲಾಗುವುದು.

ನೀರಿನ ಮಾಪಕವನ್ನು ಅಳವಡಿಸಿಕೊಂಡು ವಾಲ್ಯೂಮೆಟ್ರಿಕ್‌ ಪದ್ದತಿಯಲ್ಲಿ ಜನವರಿ 2023ನೇ ಮಾಹೆಯಿಂದ ಅನ್ವಯವಾಗುವಂತೆ ನೀರಿನ ತೆರಿಗೆ ಬಿಲ್ಲನ್ನು ನೀಡಲಾಗುವುದು. ಎಲ್ಲಾ ಗ್ರಾಹಕರು ಮಂಡಳಿಯೊಂದಿಗೆ ಸಹಕರಿಸಿ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಲ್‌ ಪಾವತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಡಿಆರ್‌ ಬಿಲ್ಡಿಂಗ್‌, ಜಿಲ್ಲಾ ನ್ಯಾಯಾಲಯ ಕಾಂಪ್ಲೆಕ್ಸ್‌, ಮಂಡ್ಯ ಆವರಣದಲ್ಲಿ ಫೆ.1 ರಿಂದ ತೆರೆಯಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios