Asianet Suvarna News Asianet Suvarna News

ನೀರಿನ ಪೈಪ್‌ಗೆ ಮೋರಿ ನೀರು, ಕೋಲಾರ ಪುರಸಭೆಯಿಂದ ಕೊಳಚೆ ನೀರಿನ ಭಾಗ್ಯ

ಸರ್ಕಾರ ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಸಾಲು ಸಾಲು ಭಾಗ್ಯಗಳನ್ನು ಕಲ್ಪಿಸಿಕೊಟ್ಟರೆ, ಕೋಲಾರ ಪುರಸಭೆ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಮೋರಿ ನೀರು ಮಿಶ್ರಗೊಳಿಸಿ ಕೊಳಚೆ ನೀರು ಭಾಗ್ಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಕುರಿಯಾಗಿದೆ.

Drainage Water mixes with Drinking water in Kolar
Author
Bangalore, First Published Jul 31, 2019, 11:47 AM IST
  • Facebook
  • Twitter
  • Whatsapp

ಕೋಲಾರ(ಜು.31): ಸರ್ಕಾರ ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಸಾಲು ಸಾಲು ಭಾಗ್ಯಗಳನ್ನು ಕಲ್ಪಿಸಿಕೊಟ್ಟರೆ, ಬಂಗಾರಪೇಟೆಯ ಪುರಸಭೆ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಮೋರಿ ನೀರು ಮಿಶ್ರಗೊಳಿಸಿ ಕೊಳಚೆ ನೀರು ಭಾಗ್ಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಕುರಿಯಾಗಿದೆ.

ನೀರಿಗೆ ಕೊಳಚೆ ಸೇರ್ಪಡೆ:

ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್‌ ಬಡಾವಣೆಯ ನಾಗರಿಕರಿಗೆ ಮಂಗಳವಾರ ಪುರಸಭೆ ಸರಬರಾಜು ಮಾಡಿರುವ ನೀರಿನಲ್ಲಿ ಮೋರಿ ನೀರು ಸೇರಿ ಪೂರೈಕೆಯಾಗಿದೆ. ಎಲ್ಲ ಮನೆಗಳ ನಲ್ಲಿಗಳಿಗೆ ಬಂದ ನೀರು ದುರ್ನಾತದಿಂದ ಕೂಡಿದ್ದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ಕೊಳಚೆ ನೀರು ಪೂರೈಕೆಯಾದ ವಿಷಯ ಬಯಲಾಗಿದೆ. ನಲ್ಲಿ, ಪೈಪ್‌ಗಳನ್ನು ಮೋರಿಗೆ ಅಂಟ್ಟಿಕೊಂಡಂತೆ ಅಳವಡಿಸಿರುವುದರಿಂದ ಪೈಪ್‌ ಒಡೆದು ಕೊಳಚೆ ನೀರು ಮಿಶ್ರಿತವಾಗಿದ್ದು, ಅದನ್ನೇ ಜನತೆಗೆ ಪೂರೈಸಲಾಗಿದೆ.

ಪುರಸಭೆ ವಿರುದ್ಧ ಆಕ್ರೋಶ:

ಮೊದಲೇ ಪಟ್ಟಣದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಹರಡಿದ್ದು, ಈಗ ಪುರಸಭೆ ಸರಬರಾಜು ಮಾಡಿರುವ ನೀರನ್ನು ಕುಡಿದರೆ ಮತ್ತಷ್ಟುರೋಗಗಳಿಗೆ ತುತ್ತಾಗಬೇಕಾದಿತು ಎಂದು ನಾಗರಿಕರು ಪುರಸಭೆ ಸಿಬ್ಬಂದಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.

ಕಾಲಕಾಲಕ್ಕೆ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಎಲ್ಲಾ ಕಡೆ ಕೊಳಚೆ ನೀರು ನಿಂತು ಸೊಳ್ಳೆಗಳ ಸಂತಾನ ಉತ್ಪತಿ ಕೇಂದ್ರಗಳಾಗಿವೆ. ಇದರ ನಡುವೆ ಓಬಿರಾಯನ ಕಾಲದ ಪೈಪ್‌ಳನ್ನು ದುರಸ್ತಿಗೊಳಿಸದೆ ಬಿಟ್ಟಿರುವುದರಿಂದ ಶಿಥಿಲಗೊಂಡಿರುವ ಪೈಪ್‌ಗಳು ಆಗಾಗ ಒಡೆದು ನೀರು ಅಪಾರ ಪ್ರಮಾಣದಲ್ಲಿ ರಸ್ತೆ ಪಾಲಾದರೆ ಮತ್ತೊಂದೆಡೆ ಬಹುತೇಕ ಕಡೆ ಚರಂಡಿಯಲ್ಲೆ ಕುಡಿಯುವ ನೀರಿನ ಪೈಪ್‌ಗಳಿರುವುದರಿಂದ ಎರಡೂ ಮಿಶ್ರಿತವಾಗಿ ಮನೆಗಳಿಗೆ ಸರಬರಾಜು ಆಗುತ್ತಿದೆ.

ರಸ್ತೆಯಲ್ಲೇ ಹರಿಯುತ್ತೆ ಕೊಳಚೆ ನೀರು: ರೋಗ ಭೀತಿಯಲ್ಲಿ ಜನ

ಕೂಡಲೇ ಅವ್ಯವಸ್ಥೆಯಲ್ಲಿರುವ ನೀರಿನ ಪೈಪ್ಗಳನ್ನು ದುರಸ್ಥಿಗೊಳಿಸಿ ಕೊಳಚೆ ನೀರು ಬಾರದಂತೆ ಸೂಕ್ತ ಕ್ರಮವಹಿಸಬೇಕು ಇಲ್ಲದಿದ್ದರೆ ಪುರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಬಡಾವಣೆಯ ನಿವಾಸಿಗರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us:
Download App:
  • android
  • ios