Asianet Suvarna News Asianet Suvarna News

ಅಯೋಧ್ಯೆ-ಭಾರತೀಯರ ಅನೇಕ ವರ್ಷದ ಕನಸು ಸಾಕಾರ: ಡಾ.ವೀರೇಂದ್ರ ಹೆಗ್ಗಡೆ

ಈ ದಿನ ಐತಿಹಾಸಿಕವಾಗಿದೆ ಮತ್ತು ಭಾವನಾತ್ಮಕವಾಗಿ ಕೋಟ್ಯಂತರ ಭಕ್ತರ ಪಾಲಿಗೆ ಸದಾ ಅವಿಸ್ಮರಣೀಯವಾಗಿದೆ. ಈ ಮಹತ್ ಕಾರ್ಯದ ನೇತೃತ್ವ ವಹಿಸಿದ ಪ್ರಧಾನಿ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ 

Dr Veerendra Heggade Talks Over Ram Mandir grg
Author
First Published Jan 10, 2024, 12:32 PM IST

ಧರ್ಮಸ್ಥಳ(ಜ.10):  ಭಾರತೀಯರ ಅನೇಕ ವರ್ಷದ ಕನಸು, ನಿರೀಕ್ಷೆಗಳು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಸಾಕಾರಗೊಂಡಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಈ ದಿನ ಐತಿಹಾಸಿಕವಾಗಿದೆ ಮತ್ತು ಭಾವನಾತ್ಮಕವಾಗಿ ಕೋಟ್ಯಂತರ ಭಕ್ತರ ಪಾಲಿಗೆ ಸದಾ ಅವಿಸ್ಮರಣೀಯವಾಗಿದೆ. ಈ ಮಹತ್ ಕಾರ್ಯದ ನೇತೃತ್ವ ವಹಿಸಿದ ಪ್ರಧಾನಿ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ. 

ಮಂಗಳೂರು: ಅಯೋಧ್ಯೆಗೆ ತೆರಳುವ ಮುನ್ನ ಮೂಲ ಮಠ ಕಣ್ವತೀರ್ಥಕ್ಕೆ ಪೇಜಾವರ ಶ್ರೀ ಭೇಟಿ

ಅಯೋಧ್ಯೆಯಲ್ಲಿ ಮತ್ತೆ ಶ್ರೀರಾಮ ವೈಭವ ಮರುಕಳಿಸುತ್ತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ. ಶ್ರೀರಾಮನ ಸೇವೆಗಾಗಿ ಶ್ರೀ ಕ್ಷೇತ್ರದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.

Follow Us:
Download App:
  • android
  • ios