Asianet Suvarna News Asianet Suvarna News

ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ಥರಿಗೆ 25 ಕೋಟಿ ರು. ನೆರವು

ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ.ವಿರೇಂದ್ರ ಹೆಗಡೆ ನೆರೆ ಸಂತ್ರಸ್ಥರಿಗೆ ನೆರೆವಿನ ಹಸ್ತ| ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೆರೆ ಸಂತ್ರಸ್ಥರಿಗೆ 25 ಕೋಟಿ ಪರಿಹಾರ ಘೋಷಣೆ|ರಾಜ್ಯದ ನೆರೆ ಸಂತ್ರಸ್ಥರ ನಿಧಿಗೆ ಹಸ್ತಾಂತರಿಸಲು ನಿರ್ಧಾರ|ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ.

Dr veerendra heggade donates Rs 25 crore to flood relief fund
Author
Bengaluru, First Published Aug 17, 2019, 7:12 PM IST
  • Facebook
  • Twitter
  • Whatsapp

ಬೆಳ್ತಂಗಡಿ, [ಆ.17) : ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನೆಯಲ್ಲಿ ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳದ ಧರ್ಮಾಧಿಕಾರಿ ನೆರೆವಿನ ಹಸ್ತ ನೀಡಿದ್ದಾರೆ.

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ರಾಜ್ಯದ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ 25 ಕೋಟಿ ರು. ನೀಡುವುದಾಗಿ ಡಾ.ವಿರೇಂದ್ರ ಹೆಗ್ಗಡೆಯವರು ಇಂದು [ಶನಿವಾರ] ಘೋಷಣೆ ಮಾಡಿದ್ದಾರೆ.

ಕರ್ನಾಟಕ ಪ್ರವಾಃದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಇದೇ ವೇಳೆ ಬೆಳ್ತಂಗಡಿ ತಾಲೂಕಿಗೆ ಪ್ರತ್ಯೇಕವಾಗಿ  50 ಲಕ್ಷ ರು. ಪ್ಯಾಕೇಜ್ ಘೋಷಣೆ ಮಾಡಿದ್ದು,  ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶ್ರಮಿಕ ಕಾಳಜಿಯ ರಿಲೀಫ್ ಫಂಡ್ ಗೆ 50 ಲಕ್ಷ ರೂಪಾಯಿಯನ್ನು ಶಾಸಕರ ಮೂಲಕ ಹಸ್ತಾಂತರ ಮಾಡಿದರು.

 ಈ ಬಗ್ಗೆ ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ, ಪಶ್ಚಿಮಘಟ್ಟ ಅಧ್ಯಯನ ಪೀಠ ಸ್ಥಾಪನೆಗೆ 2 ಕೋಟಿ ರೂಪಾಯಿ ಮೀಸಲಾಗಿರಿಸಿದ್ದು, ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ ಮಾಡಿ 2 ಲಕ್ಷ ಸದಸ್ಯರಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios