ಧಾರವಾಡ ನಗರದ ಹಿರಿಯ ವೈದ್ಯ ಡಾ.ವಿ.ಡಿ.‌ಕರ್ಪೂರಮಠ ನಿಧನ| ಹುಬ್ಬಳ್ಳಿ ನವನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಕರ್ಪೂರಮಠ|  ನಿವೃತ್ತಿಯ ನಂತರವೂ  ಕೊನೆಯುಸಿರಿರುವರೆಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ವೈದ್ಯ| ‌ಕರ್ಪೂರಮಠ ನಿಧನಕ್ಕೆ ಗಣ್ಯರ ತೀವ್ರ ಸಂತಾಪ| 

ಧಾರವಾಡ(ಆ.29): ನಗರದ ಹಿರಿಯ ವೈದ್ಯ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.‌ಕರ್ಪೂರಮಠ (80) ನಿಧನರಾಗಿದ್ದಾರೆ. ಇಂದು(ಶನಿವಾರ) ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿ ನವನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂಲತಃ ವಿಜಯಪುರ ಜಿಲ್ಲೆಯ ಕರ್ಪೂರಮಠ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರವೂ ಕೊನೆಯುಸಿರಿರುವರೆಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಡಾ.ಸುಲೋಚನಾ, ಪುತ್ರರಾದ ವಿವೇಕ್ ಹಾಗೂ ಕ್ಯಾನ್ಸರ್ ತಜ್ಞ ಡಾ.ಶಶಿ ಕರ್ಪೂರಮಠ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪಕ್ಷಕ್ಕೆ ಮುಜುಗರ ತರುವಂತ ಹೇಳಿಕೆ ನೀಡಬಾರದು: ವಿಶ್ವನಾಥ್‌ ಹೇಳಿಗೆ ಹೆಬ್ಬಾರ್‌ ಅಸಮಾಧಾನ

ಸಚಿವರ ಸಂತಾಪ

ಡಾ.ವಿ.ಡಿ.ಕರ್ಪೂರಮಠ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಸಾರ್ಥಕ ಬದುಕು ಮತ್ತು ಸೇವಾ ಮನೋಭಾವವನ್ನು ಸ್ಮರಿಸಿದ್ದಾರೆ.