Asianet Suvarna News Asianet Suvarna News

ಯಡಿಯೂರಪ್ಪ ಭೇಟಿಯಾದ ಡಾ.ಪರಮೇಶ್

ಕೆಲವೇ ದಿನಗಳ ಹಿಂದೆ ಮಾಜಿ ಸಚಿವ ವಿ.ಸೋಮಣ್ಣ ಬಿಎಸ್‌ವೈ ಭೇಟಿಯಾದ ಬಳಿಕ ಡಾ.ಎಸ್.ಪರಮೇಶ್ ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಸುಮಾರು ಒಂದು ತಾಸು ನಡೆದ ಚರ್ಚೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ಆಕಾಂಕ್ಷಿಗಳ ಪಟ್ಟಿ, ಪೈಪೋಟಿ ಹಾಗೂ ಸ್ಥಳೀಯ ಹಾಗೂ ಹೊರಗಿನ ಅಭ್ಯರ್ಥಿ ಕುರಿತು ಇರುವ ಚರ್ಚೆ ಹಾಗೂ ಮತದಾರರ ಮನಸ್ಥಿತಿಯ ಬಗ್ಗೆ ಬಿಎಸ್‌ವೈ ಗಮನ ಸೆಳೆದಿದ್ದಾರೆ ಎನ್ನಲಾಗಿದ್ದು, ಸ್ಥಳೀಯರಿಗೆ ಟಿಕೆಟ್ ನೀಡುವುದಾದರೆ ನನಗೂ ಅವಕಾಶ ನೀಡಿ ಎಂದು ಡಾ.ಎಸ್.ಪರಮೇಶ್ ಇದೇ ವೇಳೆ ಮನವಿ ಸಲ್ಲಿಸಿದ್ದಾರೆ.

Dr. Paramesh Meets Yediyurappa    snr
Author
First Published Mar 7, 2024, 11:23 AM IST

ತುಮಕೂರು: ಕೆಲವೇ ದಿನಗಳ ಹಿಂದೆ ಮಾಜಿ ಸಚಿವ ವಿ.ಸೋಮಣ್ಣ ಬಿಎಸ್‌ವೈ ಭೇಟಿಯಾದ ಬಳಿಕ ಡಾ.ಎಸ್.ಪರಮೇಶ್ ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಸುಮಾರು ಒಂದು ತಾಸು ನಡೆದ ಚರ್ಚೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿರುವ ಆಕಾಂಕ್ಷಿಗಳ ಪಟ್ಟಿ, ಪೈಪೋಟಿ ಹಾಗೂ ಸ್ಥಳೀಯ ಹಾಗೂ ಹೊರಗಿನ ಅಭ್ಯರ್ಥಿ ಕುರಿತು ಇರುವ ಚರ್ಚೆ ಹಾಗೂ ಮತದಾರರ ಮನಸ್ಥಿತಿಯ ಬಗ್ಗೆ ಬಿಎಸ್‌ವೈ ಗಮನ ಸೆಳೆದಿದ್ದಾರೆ ಎನ್ನಲಾಗಿದ್ದು, ಸ್ಥಳೀಯರಿಗೆ ಟಿಕೆಟ್ ನೀಡುವುದಾದರೆ ನನಗೂ ಅವಕಾಶ ನೀಡಿ ಎಂದು ಡಾ.ಎಸ್.ಪರಮೇಶ್ ಇದೇ ವೇಳೆ ಮನವಿ ಸಲ್ಲಿಸಿದ್ದಾರೆ.

ಗೆಲುವಿಗೆ ಎಲ್ಲಾ ಸಾಧ್ಯತೆಯಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು. ಈ ವಿಷಯದಲ್ಲಿ ವೀಕ್ಷಕರು ನೀಡಿರುವ ಅಭಿಪ್ರಾಯ, ಜಿಲ್ಲಾ ಮುಖಂಡರ ಸಹಮತ ಹಾಗೂ ಪಕ್ಷ ನಡೆಸಿರುವ ಸಮೀಕ್ಷೆಯ ಆಧಾರದ ಮೇಲೆ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡುತ್ತದೆ. ನಿಮ್ಮ ಮನವಿಗೆ ಪೂರಕವಾಗಿ ಸ್ಪಂದಿಸುವುದಾಗಿ ಬಿಎಸ್‌ವೈ ತಿಳಿಸಿದ್ದಾರೆ ಎನ್ನಲಾಗಿದೆ. ಟಿ.ಕೆ.ನಂಜುಂಡಪ್ಪ, ಟಿ.ಬಿ.ಶೇಖರ್, ಕೋರೆ ಮಂಜಣ್ಣ, ಚಂದ್ರಮೌಳಿ,ಎಸ್.ವಿಶ್ವನಾಥ್ ಮುಂತಾದವರಿದ್ದರು.

ಯಡಿಯೂರಪ್ಪ ಕರ್ನಾಟಕದ ಮೋದಿ

ಕೂಡ್ಲಿಗಿ (ಮಾ.3): ರಾಷ್ಟ್ರಕ್ಕೆ ನರೇಂದ್ರ ಮೋದಿಯಾದರೆ ರಾಜ್ಯದಲ್ಲಿ ಇನ್ನೊಬ್ಬ ಮೋದಿಯಾಗಿ ಯಡಿಯೂರಪ್ಪ ಇದ್ದಾರೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ ಯಡಿಯೂರಪ್ಪ ನೇತೖತ್ವದಲ್ಲಿ ಗೆಲ್ಲಲಿದೆ ಎಂದು ಮಾಜಿ ಸಚಿವ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಔತಣಕೂಟದಲ್ಲಿ ಅವರು ಮಾತನಾಡಿದರು. ದೇಶ ಇಂದು ವಿಶ್ವದಲ್ಲಿ ಗುರುತಿಸಿಕೊಳ್ಳುವುದಕ್ಕೆ ನರೇಂದ್ರ ಮೋದಿ ಕಾರಣ. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಮುಂದಿನ ದಿನಗಳಲ್ಲಿ ಅಮೆರಿಕಾ, ರಷ್ಯಾ, ಜಪಾನ್‌ನಂತಹ ದೇಶಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕೇಸ್; 4 ಬಾರಿ ಸಮನ್ಸ್ ನೀಡಿದ್ರೂ ಹಾಜರಾಗದ ಶ್ರೀರಾಮುಗೆ ಕೋರ್ಟ್ ತರಾಟೆ!

ಶ್ರೀಕೃಷ್ಣನಂತೆ ಯಡಿಯೂರಪ್ಪ ಅವರು ನಿಂತು ವಿಜಯೇಂದ್ರ ಅವರಿಗೆ ಅರ್ಜುನನಂತೆ ಶಕ್ತಿ ತುಂಬಿ ಬಿಜೆಪಿ ಅಭೂತಪೂರ್ವ ಗೆಲುವನ್ನು ಸಾಧಿಸಲು ಅವಕಾಶ ಮಾಡಿಕೊಡಲಿದ್ದಾರೆ ಎಂದರು.

ಕಳೆದ ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸಲಿದ್ದೇವೆ. ನಾವೆಲ್ಲ ನಿಮ್ಮ ಜತೆ ನಾವಿದ್ದೇವೆ ಎಂದು ಸ್ಥಳೀಯ ಮುಖಂಡರು, ಕಾರ್ಯಕರ್ತರು ಹೇಳಿದ್ದು, ನನ್ನ ಆತ್ಮಬಲ ಹೆಚ್ಚಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 10 ವರ್ಷಗಳ ಆಡಳಿತಾವಧಿಯಲ್ಲಿ ಉಜ್ವಲ, ಕಿಸಾನ್ ಸಮ್ಮಾನ್ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಉತ್ತಮ ಆಡಳಿತಗಾರರಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರಲ್ಲದೆ, ಚಿತ್ರದುರ್ಗ - ಹೊಸಪೇಟೆ, ಬಳ್ಳಾರಿ -ಹಿರಿಯೂರು ಸೇರಿ ನಾನಾ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿರುವುದನ್ನು ಯಾರೂ ಮರೆಯುವಂತಿಲ್ಲ ಎಂದರು.

Follow Us:
Download App:
  • android
  • ios