ಗಂಗಾವತಿ: ನಿಸರ್ಗ ಸಂಗೀತ ರತ್ನ ಪ್ರಶಸ್ತಿಗೆ ಡಾ.ಸಿ.ಮಹಾಲಕ್ಷ್ಮಿ-ರಿಜ್ವಾನ್ ಮುದ್ದಾಬಳ್ಳಿ ಆಯ್ಕೆ
ಆಗಸ್ಟ್ 20ರಂದು ಕರಿಸಿದ್ದೇಶ್ವರ ಸಭಾಭವನದಲ್ಲಿ ಸಾಧಕರ ಸಂಗೀತ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು: ಮಲ್ಲಯ್ಯ ಕೊಮಾರಿ
ಗಂಗಾವತಿ(ಆ.18): ಹನುಮಸಾಗರದ ಹೆಸರಾಂತ ನಾಟಕಕಾರ ಪಿ.ಬಿ. ದುತ್ತರಗಿ ಮತ್ತು ಸರೋಜಮ್ಮ ದುತ್ತರಗಿ ಸ್ಮರಣಾರ್ಥ ನಿಸರ್ಗ ಸಂಗೀತ ಶಾಲೆ ಮತ್ತು ರಂಗ ಕಲಾವಿದರ ಸಂಘದಿಂದ ಕೊಡ ಮಾಡುವ "ನಿಸರ್ಗ ಸಂಗೀತ ರತ್ನ "ರಾಜ್ಯ ಮಟ್ಟದ ಪ್ರಶಸ್ತಿಗೆ ಗಂಗಾವತಿಯ ಡಾ.ಸಿ. ಮಹಾಲಕ್ಷ್ಮಿ ಮತ್ತು ರಿಜ್ವಾನ್ ಮುದ್ದಾಬಳ್ಳಿ ಆಯ್ಕೆಯಾಗಿದ್ದಾರೆ.
ಆಗಸ್ಟ್ 20ರಂದು ಕರಿಸಿದ್ದೇಶ್ವರ ಸಭಾಭವನದಲ್ಲಿ ಸಾಧಕರ ಸಂಗೀತ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕರಾದ ಮಲ್ಲಯ್ಯ ಕೊಮಾರಿ ತಿಳಿಸಿದ್ದಾರೆ.
ಬಾಂಬೆ ಬಾಯ್ಸ್ ಅಷ್ಟೇ ಅಲ್ಲ ಬಿಜೆಪಿ, ಜೆಡಿಎಸ್‌ನಲ್ಲಿ ಯಾವ ಶಾಸಕರೂ ಇರೋಲ್ಲ: ತಂಗಡಗಿ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದ ನಿಸರ್ಗ ಸಂಗೀತ ಶಾಲೆ ಮತ್ತು ರಂಗ ಕಲಾವಿದರ ಸಂಘ ಹೆಸರಾಂತ ನಾಟಕಕಾರ ಪಿ.ಬಿ. ದುತ್ತರಗಿ ಮತ್ತು ಸರೋಜಮ್ಮ ದುತ್ತರಗಿ ಸ್ಮರಣಾರ್ಥವಾಗಿ "ನಿಸರ್ಗ ಸಂಗೀತ ರತ್ನ ಪ್ರಶಸ್ತಿ ನೀಡುತ್ತಾ ಬಂದಿದೆ.