ಬೆಂಗಳೂರು [ಸೆ.05]: ಬಂಧಿಸಲು ತೆರಳಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಡಬಲ್ ಮರ್ಡರ್ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಆತ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ತಲಘಟ್ಟಪುರದ ನಾಗನಗೌಡ ಪಾಳ್ಯದ ಬಳಿ ವಿನೋದ್ ಅಲಿಯಾಸ್ ಕೋತಿ ಎಂಬ ಡಬಲ್ ಮರ್ಡರ್ ಆರೋಪಿಯನ್ನು ಪೊಲೀಸರು ಬಂಧಿಸಲು ಹೋದಾಗ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದರಿಂದ ಆತ್ಮ ರಕ್ಷಣೆಗೆಗಾಗಿ ಫೈರಿಂಗ್ ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಕ್ಲಿಕ್ಕಿಸಿ

ತಲಘಟ್ಟಪುರ ಠಾಣೆಯ ಎಸ್ ಐ ನಾಗೇಶ್ ಗುಂಡು ಹಾರಿಸಿದ್ದು ಈ ವೇಳೆ ವಿನೋದ್ ಕಾಲಿಗೆ ಗಾಯವಾಗಿದೆ. ಇದರಿಂದ ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿ ಜೆ ಪಿ ನಗರದಲ್ಲಿ ಆಗಸ್ಟ್ 25 ರಂದು ಮಂಜ ಹಾಗೂ ವರುಣ್ ಎಂಬುವರನ್ನು ಕೊಲೆಗೈದು ಬಳಿಕ ತಲೆಮರೆಸಿಕೊಂಡಿದ್ದ. ಎರಡು ಕೊಲೆ ಪ್ರಕರಣ ಸೇರಿದಂತೆ ಒಟ್ಟು ಐದು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ವಿನೋದ್ ಇದೀಗ ಪೊಲೀಸರ ಬೆಲೆಗೆ ಬಿದ್ದಿದ್ದಾನೆ.