ಹಾಲಿಗೆ ನೀರು, ಜಾತಿ, ರಾಜಕೀಯ ಬೆರಸಬೇಡಿ- ಈರೇಗೌಡ
ರೈತರಿಗೆ ನಿಗದಿತ ಬೆಲೆ ಸಿಗುತ್ತಿರುವುದು ಹಾಲಿನಲ್ಲಿ ಮಾತ್ರ, ಹಾಲಿಗೆ ನೀರು, ಜಾತಿ, ರಾಜಕೀಯ ಬೆರಸಬೇಡಿ ಎಂದು ಮ್ಯಮುಲ… ನಿರ್ದೇಶಕ ಈರೇಗೌಡ ಸಲಹೆ ನೀಡಿದರು.
ಸರಗೂರು : ರೈತರಿಗೆ ನಿಗದಿತ ಬೆಲೆ ಸಿಗುತ್ತಿರುವುದು ಹಾಲಿನಲ್ಲಿ ಮಾತ್ರ, ಹಾಲಿಗೆ ನೀರು, ಜಾತಿ, ರಾಜಕೀಯ ಬೆರಸಬೇಡಿ ಎಂದು ಮ್ಯಮುಲ… ನಿರ್ದೇಶಕ ಈರೇಗೌಡ ಸಲಹೆ ನೀಡಿದರು.
ತಾಲೂಕಿನ ತೆಲಗುಮಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಮಕ್ಕಳು ಉನ್ನತ ವ್ಯಾಸಂಗಕ್ಕೆ ಮೈಸೂರು ಮತ್ತು ಬೆಂಗಳೂರಿನಲ್ಲಿ ಡೈರಿ ಹಾಸ್ಟೆಲ… ಇದೆ, ಮೈಸೂರಿನಲ್ಲಿ ಡೈರಿ ಹಾಸ್ಟೆಲ… ಕಟ್ಟಡ ನಿರ್ಮಾಣ ಹಂತದಲ್ಲಿ ಇದೆ, ನಂತರ ಸೌಲಭ್ಯ ಪಡೆದುಕೊಳ್ಳಬಹುದು. ಮೈಸೂರು ಜಿಲ್ಲಾ ಹಾಲು ಒಕ್ಕೂಟ 2ಲಕ್ಷ ಕೆಎಂಎಫ್ 4.5, ಶಾಸಕರ ಅನುದಾನ 1 ಲಕ್ಷ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ದಿ ಯೋಜನೆ 1 ಲಕ್ಷ, ಉಳಿದ ಸಂಘದ ಲಾಭದ ಹಣದಿಂದ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು. ಗುಣಮಟ್ಟದ ಹಾಲನ್ನು ನೀವು ನೀಡುವುದರ ಜೊತೆಗೆ ಒಕ್ಕೂಟವನ್ನು ಬೆಳೆಸುವಂತೆ ಅವರು ಸಲಹೆ ನೀಡಿದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ದಿವಾಕರ್ ಮಾತನಾಡಿ, ಹಾಲಿನ ತಾಜಾತನ ಕಾಪಾಡಲು ತಾಲೂಕಿನಲ್ಲಿ 30 ಬಿಎಂಸಿ ನಿರ್ಮಿಸಿದೆ. ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದನೆಗೆ ಹೆಚ್ಚು ಗಮನಹರಿಸಿ ಉತ್ತಮ ಲಾಭಾಂಶ ಪಡೆಯಿರಿ ಎಂದರು.
ಮೈಸೂರು ಜಿಲ್ಲಾ ಒಕ್ಕೂಟದ ಸದಸ್ಯೆ ದಾಕ್ಷಾಯಿಣಿ ಬಸವರಾಜು, ತೆಲಗು ಮಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿದರು.
ತೆಲಗುಮಸಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶಿಲ್ಪಾ ಪರಶಿವಮೂರ್ತಿ, ಉಪಾಧ್ಯಕ್ಷ ಮಂಜುಳಾ ಮಹೇಶ್, ಕಾರ್ಯದರ್ಶಿ ರೇಖಾ, ಹೆಗ್ಗನೂರು ಗ್ರಾಪಂ ಅಧ್ಯಕ್ಷ ಎಚ್.ಎಂ. ಸುಧೀರ್, ಶೋಭಾ ಲೋಕೇಶ್, ಬಸವರಾಜು, ಹಿರಿಯ ವಿಸ್ಥರಣಾಧಿಕಾರಿ ಆರೀಫ್ ಇಕ್ಬಾಲ…, ರಾಮಪ್ಪಬಾರ್ಕಿ, ಎಂ. ಅವಿನಾಶ್, ಯೋಗೀಶ್, ಜಗದಾಂಭಾ, ಟಿಎಪಿಎಂಎಸ… ಮಾಜಿ ಉಪಾಧ್ಯಕ ಸಕಲೇಶ್, ಗ್ರಾಮದ ಮುಖಂಡರಾದ ಬಸವರಾಜು, ಶಿವಮಲ್ಲು, ಮಲ್ಲಿಕಾರ್ಜುನಪ್ಪ, ನಾಗೇಂದ್ರ, ಮಹದೇವಮ್ಮ, ಶಿಲ್ಪಾಶ್ರೀ, ನಾಗಮ್ಮ, ಚನ್ನಗೌರಮ್ಮ, ಗಿರಿಜಾಂಭ, ಸವಿತಾ, ಪ್ರಭಾ ಇದ್ದರು.
ಗುಣಮಟ್ಟದ ಹಾಲು ಸರಬರಾಜು ಮಾಡಿ
ಮಧುಗಿರಿ : ತಾಲೂಕಿನ ಹಾಲು ಉತ್ಪಾದಕ ಸಂಘಗಳು ಗುಣಮಟ್ಟದ ಹಾಲು ಉತ್ಪಾದಿಸುವ ಜೊತೆಗೆ ಹಾಲಿನ ಶೇಖರಣೆ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಕ್ಕೂಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶುಕ್ರವಾರ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮಲ್ಲಸಂದ್ರದ ವತಿಯಿಂದ ಮಧುಗಿರಿಯ ಹಿಂದೂಪುರ ರಸ್ತೆಯಲ್ಲಿರುವ ಉಪ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕಿನ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ಅಧ್ಯಕ್ಷೆತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಧುಗಿರಿ ತಾಲೂಕಿನಲ್ಲಿ ಕ್ವಾಲಿಟಿ ಹಾಲು ಬರುತ್ತಿಲ್ಲ, ಅದೇ ಶಿರಾ, ಪಾವಗಡ ತಾಲೂಕುಗಳಲ್ಲಿ ಗುಣಮಟ್ಟದ ಹಾಲು ಶೇಖರಣೆಯಾಗುತ್ತಿದೆ. ನಮ್ಮಲ್ಲಿ ಏಕೆ ಕಳಪೆ ಹಾಲು ಶೇಖರಣೆಯಾಗುತ್ತಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಾ.? ಬಿಎಂಸಿಗಳಲ್ಲಿ ಯಾರು ಹೇಳೋರು ಕೇಳೋರು ಇಲ್ಲವೆ. ಕಳಪೆ ಹಾಲು ನಿಲ್ಲಿಸಿ ಇಲ್ಲವಾದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದು ಎಂಡಿಗೆ ಸೂಚಿಸಿ, ಹಾಲು ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಿ. ತಾವುಗಳು ರಾಜಕೀಯ ಮಾಡುವುದು ಬಿಟ್ಟು, ರೈತರ ಕೆಲಸ ಮಾಡಿ ಖಾಸಗಿ ಡೈರಿಗಳಿಗೆ ಕಡಿವಾಣ ಹಾಕಿ. ಹಾಲು ಶೇಖರಣೆ ಹೆಚ್ಚಿಸಿ ರೈತರಿಗೆ ನೆರವಾಗುವ ಮೂಲಕ ಪುಣ್ಯ ಕಟ್ಟಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.
ಖಾಸಗಿಯವರಿಗೆ ಹಾಲು ಮಾರಾಟ ಮಾಡಿ ರೈತರಿಗೆ ಅನ್ಯಾಯ ಮಾಡುವುದನ್ನು ನಾನು ಸಹಿಸುವುದಿಲ್ಲ. ಅಧ್ಯಕ್ಷರ ಜವಾಬ್ದಾರಿ ಹೆಚ್ಚಿರುತ್ತದೆ . ಕಾರ್ಯದರ್ಶಿಗಳು ಒಕ್ಕೂಟದ ನಿಯಮಾನುಸಾರ ಕೆಲಸ ಮಾಡಬೇಕು. ರೈತರ ಪರ ಕೆಲಸ ಮಾಡುವ ಸಂಘಗಳಿಗೆ ನನ್ನ ಸಹಕಾರವಿದೆ. ಉಪ್ಪು, ಸಕ್ಕರೆ ಹಾಕಿ ಹಾಲು ಮಾರಾಟ ಮಾಡಿದರೆ ಶೋಷಣೆಯಲ್ಲವೆ ಎಂದರು.