Asianet Suvarna News Asianet Suvarna News

Karnataka Police Department: ತೊಟ್ಟ ಬಟ್ಟೆ ನೋಡಿ ಬೆಲೆ ಕೊಡಬೇಡಿ : ರವಿ ಚೆನ್ನಣ್ಣವರ್

  • ತೊಟ್ಟಿರುವ ಬಟ್ಟೆಗಳನ್ನು ನೋಡಿ ಬೆಲೆ ಕೊಡಬೇಡಿ
  • ಬಡವರಾಗಿರಲಿ, ಶ್ರೀಮಂತರೇ ಆಗಿರಲಿ ಒಳಗೆ ಕರೆದು ಮಾತನಾಡಿಸಿ ಸಮಸ್ಯೆಗೆ ಸ್ಪಂದಿಸಿ
Dont Measure People From Their Clothes Says IPS Ravi D Channannavar snr
Author
Bengaluru, First Published Dec 27, 2021, 11:49 AM IST

ಹಾಸನ (ಡಿ.27):  ನಾನಾ ಸಮಸ್ಯೆಗಳನ್ನಿಟ್ಟು ಕೊಂಡು ಪೊಲೀಸ್ ಠಾಣೆಗೆ (Police Station) ಬಂದವರನ್ನು ಅವರು ತೊಟ್ಟಿರುವ ಬಟ್ಟೆ ಗಳನ್ನು (Clothes) ನೋಡಿ ಬೆಲೆ ಕೊಡಬೇಡಿ. ಅವರು ಬಡವರಾಗಿರಲಿ, ಶ್ರೀಮಂತರೇ ಆಗಿರಲಿ ಒಳಗೆ ಕರೆದು ಮಾತನಾಡಿಸಿ ಸಮಸ್ಯೆಗೆ ಸ್ಪಂದಿಸಿ, ಪರಿಹರಿಸುವ ಕೆಲಸ ಮಾಡಬೇಕು. ಮನುಷ್ಯತ್ವ ಇರುವವರು ದೊಡ್ಡ ದೊಡ್ಡ ಹುದ್ದೆಗೆ ಬಂದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಬೆಂಗಳೂರು (Bengaluru) ಸಿಐಡಿ (CID) ವಿಭಾಗದ ಪೊಲೀಸ್ (Police) ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರು (Ravi D Channannanavar) ಅಭಿಪ್ರಾಯಪಟ್ಟರು. 

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು (Malnad) ತಾಂತ್ರಿಕ ವಿದ್ಯಾಲಯದ ಸಭಾಂಗಣದಲ್ಲಿ ಆರ್‌ಡಿಸಿ ಕರಿಯರ್ ಅಕಾಡೆಮಿ, ವೈಇಎಸ್ - ಯುಪಿಎಸ್‌ಸಿ ( YES - UPSC) ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಜಿಲ್ಲಾ ಮಟ್ಟದ ಉಚಿತ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಸನ (Hassan) ಜಿಲ್ಲೆ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ (Districts) ಕೆಲಸ ಮಾಡಿದ ಸಂದರ್ಭದಲ್ಲಿ ನಾನು ಅನೇಕ ಜನ ಪಿಎಸ್‌ಐಗಳನ್ನು (PSI)  ನೋಡಿದ್ದೇನೆ. ಪೊಲೀಸ್ ಠಾಣೆಗೆ (Police station) ಯಾರೆ ಬರಲಿ ಬಂದಾಗ ಬನ್ನಿ ಸ್ವಾಮಿ ಕುಳಿತುಕೊಳ್ಳಿ ಎಂದು ಹೇಳಿ. ಟೀ ಕೊಡುವುದು ಬೇಡ ಅದರ ಬದಲು ನೀರು (water) ಕೊಡಲು ಶುರು ಮಾಡಿದ ನಂತರ ಏನು ಸಹಾಯ ಮಾಡಲಿ ಎಂದು ಕೇಳಬೇಕು. 

ಠಾಣೆ ಹೊರಗೆ (Police Station) ನಿಲ್ಲಿಸದೆ ಒಳಗೆ ಕರೆದು ಮಾತನಾಡಿದರೆ ಸಾಕು, ಪೊಲೀಸ್ (Police) ಎಂದರೆ ಭಯವಲ್ಲ, ಭರವಸೆ ಎಂಬ ಅಭಿಮಾನ ಹುಟ್ಟುತ್ತದೆ ಎಂದರು. ಕೆಟ್ಟ ಕೆಲಸ ಮಾಡಲು ಹೋದವರು ಪರಿವರ್ತನೆ ಆಗುತ್ತೀನಿ ಎಂದು ಬಂದವರನ್ನು ಅವಕಾಶ ಕೊಟ್ಟು ತಿದ್ದುವ ಕೆಲಸ ಮಾಡಿದರೆ ಸಾಕು. ಪಿಎಸ್‌ಐ (PSI) ವರ್ಗಾವಣೆಯಾದಾಗ ನಿಮ್ಮ ಮೇಲೆ ತೋರಿಸುವ ಪ್ರೀತಿ (Love) ವಿಶ್ವಾಸ ಮರೆಯಲು ಆಗುವುದಿಲ್ಲ ಎಂದು ಹಾಸನದ (Hassan) ಪಿಎಸ್‌ಐ (PSI) ಸುರೇಶ್ ಬಗ್ಗೆ ಉದಾಹರಣೆ ನೀಡಿದರು. 

ಜವಾಬ್ದಾರಿ ಹೊತ್ತ ವ್ಯಕ್ತಿಗಳಾಗಿರುವ ನಾವು, ಸಣ್ಣ ಇಲ್ಲವೇ ದೊಡ್ಡ ಹುದ್ದೆಗಳಾಗಿರಲಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಆಯ್ದುಕೊಂಡ ಹುದ್ದೆ ಯಾವುದೇ ಆಗಿರಲಿ, ಮೊದಲು ನನ್ನಲ್ಲಿ ಸೇವಾ ಕೊರತೆ ಇದೆಯಾ? ಜನಪರ ಕಾಳಜಿ ಇದೆಯಾ? ಸಂವಿಧಾನದಲ್ಲಿ ಹೇಗೆ ಜನರ ಸಮಸ್ಯೆ ಪರಿಹಾರ ಮಾಡಬೇಕು ಎಂಬ ದೃಷ್ಟಿ ಕೋನದಿಂದ ಕಾಯ್ದೆ, ಕಾನೂನು ನೋಡಿದಾಗ ಬೆಲೆ ಸಿಗುತ್ತದೆ ಎಂದು ಸಲಹೆ ನೀಡಿದರು. ಸಮಾಜದ ಅಸಮಾನತೆ ತೊಳೆದು ಹಾಕಲು ಶಿಕ್ಷಣದಿಂದ (Education) ಮಾತ್ರ ಸಾಧ್ಯ. ಎಲ್ಲಾ ಕಾಲದಲ್ಲಿ ಕಷ್ಟದ ಸಮಯದಲ್ಲಿ ಶಿಕ್ಷಣವು ಪಾರು ಮಾಡುತ್ತದೆ. 

ಮನುಷ್ಯನಿಗೆ ಬೇಕಾಗಿರುವುದು ಮನುಷ್ಯತ್ವ. ಅಂತಹವರು ದೊಡ್ಡ ದೊಡ್ಡ ಹುದ್ದೆಗೆ ಬಂದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಅಭಿಪ್ರಾಯ ಪಟ್ಟರು. ಓರ್ವ ಪೊಲೀಸ್ (Police) ಅಧಿಕಾರಿಯಾಗಲಿ ಇಲ್ಲವೇ ಸಿಬ್ಬಂದಿಯಾಗಲಿ ತಮ್ಮ ಕರ್ತವ್ಯವಾದ ಕಲಿಯುವುದನ್ನು ಮರೆಯಬಾರದು ಎಂದು ಕರೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ (Police) ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ ಗೌಡ, ಸಕಲೇಶಪುರ ಸಹಾಯಕ ಆಯುಕ್ತ ಪ್ರತೀಕ್ ಬಾಯರ್, ಹಾಸನ (Hassan) ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್ .ಬಿ.ಮದನ್‌ಗೌಡ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಯದೀಶ್ ಅವರು ನಿರ್ವಹಿಸಿದರು.  

Follow Us:
Download App:
  • android
  • ios