ಉಡುಪಿ(ಡಿ.21): ಪೇಜಾವರ ಶ್ರೀಗಳನ್ನು ಯಾರೂ ಕೂಡ ಭೇಟಿ ಮಾಡಿ ತೊಂದರೆ ಕೊಡಬೇಡಿ. ಭಕ್ತರ ಭೇಟಿಯಿಂದ ಶ್ರೀಗಳ‌ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ದೂರದಿಂದಲೇ ಅವರಿಗಾಗಿ ಪ್ರಾರ್ಥನೆ ಮಾಡಿ ಎಂದು ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪೇಜಾವರ ಶ್ರೀಗಳ‌ ಅನಾರೋಗ್ಯ ಹಿನ್ನೆಲೆ ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠದಲ್ಲಿ ಹೇಳಿಕೆ ನೀಡಿದ್ದಾರೆ. ಶ್ರೀಗಳು‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೆ ಶ್ರೀಗಳ ದೇಹದಿಂದ ಮೂತ್ರವಿಸರ್ಜನೆ ಮಾಡಿರುವುದು ನೋಡಿದ್ದೇನೆ. ಆದಷ್ಟು ಬೇಗ ಅವರು ಗುಣಮುಖರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಮೈಸೂರು: 'ಶ್ರೀನಿವಾಸಪ್ರಸಾದ್‌, ಸಿದ್ದರಾಮಯ್ಯ ವಿರೋಧಿಗಳಲ್ಲ'

ಯಾರೂ ಕೂಡ ಭೇಟಿ ಮಾಡಿ ತೊಂದರೆ ಕೊಡಬೇಡಿ. ಭಕ್ತರ ಭೇಟಿಯಿಂದ ಶ್ರೀಗಳ‌ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ದೂರದಿಂದಲೇ ಅವರಿಗಾಗಿ ಪ್ರಾರ್ಥನೆ ಮಾಡಿ. ಶ್ರೀಗಳು ಗುಣಮುಖರಾಗುವಂತೆ ಪೂಜೆ ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಿದೆ ಎಂದಿದ್ದಾರೆ.

ಆ್ಯಕ್ಷನ್‌ ಇದ್ರೆ ರಿಯಾಕ್ಷನ್‌: ವಿಶ್ವನಾಥ್‌ ಜೊತೆ ಸಾರಾ ಮಹೇಶ್‌ ಕದನ ವಿರಾಮ!