ಹೊಸ ವರ್ಷಾಚರಣೆಗೆ ಶಬ್ದ ಮಾಲಿನ್ಯ ಮಾಡಬೇಡಿ: ಪೊಲೀಸರ ಸಲಹೆ ಸೂಚನೆಗಳೇನು?

ಹೊಸ ವರ್ಷದ ಸಂಭ್ರಮಾಚರಣೆಗೆ ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಬೆಲೆ ಬಾಳುವ ಆಭರಣ ಧರಿಸಬೇಡಿ, ಶಬ್ದ ಮಾಲಿನ್ಯ ಮಾಡಬೇಡಿ, ಅನುಮತಿ ನೀಡಿದ ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಸಲಹೆ ಸೂಚನೆಗಳನ್ನು ನಗರ ಪೊಲೀಸರು ಸಾರ್ವಜನಿಕರಿಗೆ ನೀಡಿದ್ದಾರೆ. 

Dont cause noise pollution on New Years Eve What are the police instructions gvd

ಬೆಂಗಳೂರು (ಡಿ.30): ಹೊಸ ವರ್ಷದ ಸಂಭ್ರಮಾಚರಣೆಗೆ ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಬೆಲೆ ಬಾಳುವ ಆಭರಣ ಧರಿಸಬೇಡಿ, ಶಬ್ದ ಮಾಲಿನ್ಯ ಮಾಡಬೇಡಿ, ಅನುಮತಿ ನೀಡಿದ ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಸಲಹೆ ಸೂಚನೆಗಳನ್ನು ನಗರ ಪೊಲೀಸರು ಸಾರ್ವಜನಿಕರಿಗೆ ನೀಡಿದ್ದಾರೆ. ರಾಜಧಾನಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. 

ಇದರ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ವೇಳೆ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ವಿವಿಧ ಸೂಚನೆ ಪಾಲಿಸುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಹೊಸ ವರ್ಷವನ್ನು ಕಾನೂನು ನಿಯಮಗಳನ್ನು ಪಾಲನೆಯೊಂದಿಗೆ ಶಾಂತಿಯುತವಾಗಿ ಆಚರಿಸಬೇಕು. ವಾಹನಗಳ ಚಾಲನೆ ವೇಳೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಂತಿ ಮತ್ತು ಶಿಸ್ತನ್ನು ಕಾಪಾಡಲು ಪೊಲೀಸ್‌ ಅಧಿಕಾರಿಗಳು/ ಸಿಬ್ಬಂದಿಗೆ ಸಹಕರಿಸಬೇಕು. ಪೊಲೀಸರು ಮತ್ತು ಸ್ಥಳೀಯ ಆಡಳಿತ ಅನುಮತಿ ನೀಡಿದ ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಹೊಸ ವರ್ಷಾಚರಣೆಯ ಸಂಭ್ರಮಾಚರಣೆಗೆ ನಂದಿಬೆಟ್ಟ ಪ್ರವೇಶಕ್ಕೆ ನಿರ್ಬಂಧ: ಪೊಲೀಸ್‌ ಇಲಾಖೆ

ಡ್ರಂಕ್ ಆ್ಯಂಡ್‌ ಡ್ರೈವ್ ಬೇಡ: ಮದ್ಯ, ಮಾದಕವಸ್ತು ಸೇವಿಸಿ ವಾಹನ ಚಲಾಯಿಸಬೇಡಿ. ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಉಂಟು ಮಾಡಬೇಡಿ. ಅನಗತ್ಯವಾಗಿ ವಾಹನಗಳ ಹಾರ್ನ್‌ ಮೊಳಗಿಸುವುದು, ಪೀಪಿ ಊದುವುದು ಮಾಡಬೇಡಿ. ಅತಿವೇಗದಿಂದ ವಾಹನ ಚಲಾಯಿಸಬೇಡಿ. ಪೊಲೀಸರ ಮತ್ತು ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಯಾವುದೇ ಸಮಾರಂಭ ಆಯೋಜಿಸುವಂತಿಲ್ಲ. ಅವಧಿ ಮೀರಿ ಶಬ್ದ ಮಾಲಿನ್ಯ ಮಾಡಬೇಡಿ ಎಂದು ಸೂಚಿಸಿದ್ದಾರೆ.

ಅಪ್ರಾಪ್ತರಿಗೆ ವಾಹನ ಕೊಡಬೇಡಿ: ಅನಗತ್ಯ ಗೊಂದಲ, ದ್ವಂದ್ವ ಸೃಷ್ಟಿಸಬಾರದು. ನಿರ್ಬಂಧಿತ ಸ್ಥಳ/ಪ್ರದೇಶ ಪ್ರವೇಶಿಸಬಾರದು. ಪೊಲೀಸ್‌ ಬ್ಯಾರಿಕೇಡ್‌ ಹಾರುವ ಪ್ರಯತ್ನ ಮಾಡಬಾರದು. ತಮಾಷೆ-ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸಬಾರದು. ಅನಗತ್ಯವಾಗಿ ರಸ್ತೆ ಮಧ್ಯೆ ನಿಲ್ಲುವುದು, ಗುಂಪುಗೂಡುವಂತಿಲ್ಲ. ರಸ್ತೆ ದೀಪ ಮತ್ತು ಸರ್ಕಾರಿ ಸ್ವತ್ತುಗಳಿಗೆ ಹಾನಿ ಮಾಡಬಾರದು. ಪೋಷಕರು ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಡಬಾರದು. ಸಂಭ್ರಮಾಚರಣೆ ವೇಳೆ ವಿಕೃತ ಮುಖವಾಡ ಧರಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡದಂತೆ ಪೊಲೀಸರು ಸೂಚಿಸಿದ್ದಾರೆ.

112 ಸಹಾಯವಾಣಿ ಸಂಪರ್ಕಿಸಿ: ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಸಹಾಯವಾಣಿ ಅಥವಾ ಸಮೀಪದ ಪೊಲೀಸ್‌ ಠಾಣೆ/ ಪೊಲೀಸ್‌ ಕಿಯೋಸ್ಕ್‌ ಸಂಪರ್ಕಿಸಬೇಕು. ಹೊಸ ವರ್ಷಾಚರಣೆ ವೇಳೆ ನೆರೆಹೊರೆಯವರ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚು ಬೆಳಕಿರುವ ಪ್ರದೇಶಗಳಲ್ಲಿ ಆಚರಣೆ ಮಾಡಬೇಕು. ಮಹಿಳೆಯರು, ಮಕ್ಕಳು ಹಾಗೂ ಹಿರಿಯರ ಸುರಕ್ಷತೆ ಬಗ್ಗೆ ಗಮನಹರಿಸಬೇಕು. ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ರಾಜಸ್ಥಾನದ ಮರುಭೂಮಿಯಲ್ಲಿ ಮೈನಸ್‌ 2 ಡಿಗ್ರಿಯಲ್ಲಿ 161 ಕಿ. ಮೀ. ಓಡಿದ ಬೆಂಗಳೂರಿನ ವಿನೋದ್‌!

ಮೊಬೈಲ್‌, ಆಭರಣ, ಹಣದ ಬಗ್ಗೆ ಎಚ್ಚರ: ಯಾವುದೇ ಅಹಿತಕರ ಘಟನೆಗಳು/ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿ. ತಮ್ಮ ಚಲನವಲನದ ಬಗ್ಗೆ ಆಗಾಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿ. ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ವೇಳೆ ಬೆಲೆಬಾಳುವ ಆಭರಣಗಳನ್ನು ಧರಿಸದಿರುವುದು ಒಳಿತು. ಮೊಬೈಲ್‌ ಪೋನ್‌, ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಇತರೆ ಧರ್ಮದವರಿಗೆ ಘಾಸಿಯಾಗದಂತೆ ಆಚರಣೆ ಇರಲಿ. ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಮುನ್ನ ಅಧಿಕೃತವೇ ಎಂದು ಖಾತ್ರಿಪಡಿಸಿಕೊಂಡು ಪೊಲೀಸರು ಸೂಚಿಸಿರುವ ರಸ್ತೆಗಳಲ್ಲೇ ಸಂಚರಿಸಿ ಎಂದು ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios