ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್‌ 4 ನೇ ಅಲೆಯ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶ ಬಾಬು ಅವರು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್‌- 19 ಸಂಭಾವ್ಯ 4ನೇ ಅಲೆಯ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಕೆಸ್ವಾನ್‌ ಸಭಾಂಗಣದಲ್ಲಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಕೊಪ್ಪಳ (ಜ.1) : ಜಿಲ್ಲೆಯಲ್ಲಿ ಸಂಭಾವ್ಯ ಕೋವಿಡ್‌ 4 ನೇ ಅಲೆಯ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ. ಸುಂದರೇಶ ಬಾಬು ಅವರು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್‌- 19 ಸಂಭಾವ್ಯ 4ನೇ ಅಲೆಯ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಕೆಸ್ವಾನ್‌ ಸಭಾಂಗಣದಲ್ಲಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಕೋವಿಡ್‌- 19(Covid-19) ಸಂಬಂಧಿಸಿದಂತೆ ಈಗಾಗಲೇ ರಾಜ್ಯದಲ್ಲಿ ಅಲ್ಲಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಕೋವಿಡ್‌ ಸಂಭಾವ್ಯ 4ನೇ ಅಲೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ತಯಾರಿ ಮಾಡುವುಕೊಳ್ಳುವುದರ ಜತೆಗೆ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಊಟದ ವ್ಯವಸ್ಥೆ, ಬಿಸಿ ನೀರು ಹೀಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ

ಕೋವಿಡ್‌ ನಿರ್ವಹಣೆಗಾಗಿ ಅಗತ್ಯವಿರುವ ಆಕ್ಸಿಜನ್‌ ಸಿಲಿಂಡರ್‌, ಜಂಬೂ ಸಿಲಿಂಡರ್‌, ಸಣ್ಣ ಆಕ್ಸಿಜನ್‌ ಸಿಲಿಂಡರ್‌ಗಳು, ಆಕ್ಸಿಜನ್‌ ಕಾನ್ಸನ್ಟೆ್ರೕಟರ್‌, ಆಕ್ಸಿಜನ್‌ ಉತ್ಪಾದಕಾ ಘಟಕಗಳು ಸುಸ್ಥಿಯಲ್ಲಿರುವ ಬಗ್ಗೆ ನೋಡಿಕೊಳ್ಳಬೇಕು. ಆಕ್ಸಿಜನ್‌ ಸರಬರಾಜುಗೆ ಸಂಬಂಧಿಸದಂತೆ ಕ್ರಮ ಕೈಗೊಳ್ಳಿ. ಆಸ್ಪತ್ರೆಗಳಲ್ಲಿ ಬೆಡ್‌, ಔಷಧಿ, ಮಾಸ್‌್ಕ, ಪಿಪಿಇ ಕಿಟ್‌ ವ್ಯವಸ್ಥೆಯ ಜತೆಗೆ ವೆಂಟಿಲೇಟರ್‌ ಸುಸ್ತಿಯ ಬಗ್ಗೆ ಪರಿಶೀಲಿಸಿ ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯಾಧಿಕಾರಿಗಳು, ಸ್ಟಾಫ್‌ ನರ್ಸ್‌ ಮತ್ತು ಕೋವಿಡ್‌ ಸೇವೆಗೆ ಭಾಗವಹಿಸುವಂತಹ ಅಧಿಕಾರಿ ಸಿಬ್ಬಂದಿಗೆ ಕೋವಿಡ್‌ ನಿರ್ವಹಣೆಗೆ ಕುರಿತಂತೆ ಒಂದು ಸುತ್ತಿನ ತರಬೇತಿಯನ್ನು ನೀಡಬೇಕು ಎಂದರು.

ಸಾರ್ವಜನಿಕರಲ್ಲಿ ಮನವಿ:

ಸಂಭಾವ್ಯ 4ನೇ ಅಲೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಆರೋಗ್ಯ ಇಲಾಖೆಯ ತಯಾರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಒಟ್ಟು 1374 ಬೆಡ್‌ಗಳು ಇದ್ದು, ಅದರಲ್ಲಿ 654 ಆಕ್ಸಿಜನ್‌ ಸೌಲಭ್ಯವಿರುವ ಬೆಡ್‌ಗಳಿವೆ. ಒಟ್ಟು 173 ವೆಂಟಿಲೇಟರ್ಗಳಲ್ಲಿ ಮಕ್ಕಳಿಗಾಗಿ 35 ವೆಂಟಿಲೇಟರ್‌ಗಳು ಲಭ್ಯವಿವೆ. ಖಾಸಗಿ ಆಸ್ಪತ್ರೆಗಳಲ್ಲಿ 427 ಬೆಡ್‌ಗಳು ಲಭ್ಯವಿದ್ದು, 293 ಆಕ್ಸಿಜನ್‌ ಸೌಲಭ್ಯವಿರುವ ಬೆಡ್‌ಗಳು ಹಾಗೂ 42 ವೆಂಟಿಲೇಟರ್‌ಗಳಿವೆ. ಹೀಗಾಗಿ ಚಿಕಿತ್ಸೆಗೆ ಯಾವುದೆ ರೀತಿಯ ಕೊರತೆ ಇಲ್ಲ. ಹೀಗಾಗಿ ಸಾರ್ವಜನಿಕರು ಕೋವಿಡ್‌ ಬಗ್ಗೆ ಭಯಪಡದೇ ಜಾಗೃತೆಯಿಂದಿರಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಎಚ್‌. ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಂದರಂತೆ ಒಟ್ಟು 4 ಪಿಎಸ್‌ಎ ಪ್ಲಾಂಟ್‌ಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಂದು 6- ಕೆಎಲ…ಎಲ…ಎಂಒ ಟ್ಯಾಂಕ್‌ ಲಭ್ಯವಿದೆ. ಜಿಲ್ಲೆಯಲ್ಲಿ ಒಟ್ಟು 11 ಡ್ಯೂರಾ ಸಿಲಿಂಡರ್‌ಗಳು, 513 ಜಂಬೂ ಸಿಲಿಂಡರ್‌ಗಳು, 204 ಸಣ್ಣ ಆಕ್ಸಿಜನ್‌ ಸಿಲಿಂಡರ್‌ಗಳು, 483 ಆಕ್ಸಿಜನ್‌ ಕಾನ್ಸನ್ಟೆ್ರೕಟರ್‌ಗಳಿವೆ ಎಂದರು.

ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ. ಪ್ರಕಾಶ ವಿ. ಮಾತನಾಡಿ, ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್‌ ಲಸಿಕಾಕರಣವನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿಯವರೆಗೂ 11,55,459 ಪ್ರಥಮ ಡೋಸ್‌, 11,58,491 ದ್ವಿತೀಯ ಡೋಸ್‌ ಮತ್ತು 3,03,040 ಬೂಸ್ಟರ್‌ ಡೋಸ್‌ ನೀಡಲಾಗಿದೆ ಎಂದರು.

2023ನೇ ವರ್ಷದ ಮುನ್ನೋಟ: ಯೋಜನೆಗಳು ಜಾರಿಯಾಗಲಿ; ಭೂಬ್ಯಾಂಕ್ ಸ್ಥಾಪನೆಯಾಗಲಿ

ಜಿಪಂ ಸಿಇಒ ಬಿ.¶ೌಜಿಯಾ ತರನ್ನುಮ…, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಕಿಮ್ಸ… ನಿರ್ದೇಶಕರಾದ ಡಾ. ವೈಜನಾಥ ಇಟಗಿ, ಜಿಲ್ಲಾ ಶಸ್ತಚಿಕಿತ್ಸಕರಾದ ಡಾ. ಈಶ್ವರ ಸವಡಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ರಮೇಶ ಮೂಲಿಮನಿ ಇತರರು ಇದ್ದರು.