ಪರಂ ಠೇವಣಿ ಹಣಕ್ಕೆ ಕಾರ್ಯಕರ್ತರ ದೇಣಿಗೆ

ಕೊರಟಗೆರೆ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಅವರ ನಾಮಪತ್ರ ಸಲ್ಲಿಸುವ ವೇಳೆ ಇಡಲಾಗುವ ಠೇವಣಿ ಹಣವನ್ನು ಕಾಂಗ್ರೆಸ್‌ ಕಾರ್ಯಕರ್ತರು ನೀಡಿದ್ದಾರೆ.

Donation of Congress Workers  for param deposit money snr

 ತುಮಕೂರು :  ಕೊರಟಗೆರೆ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಅವರ ನಾಮಪತ್ರ ಸಲ್ಲಿಸುವ ವೇಳೆ ಇಡಲಾಗುವ ಠೇವಣಿ ಹಣವನ್ನು ಕಾಂಗ್ರೆಸ್‌ ಕಾರ್ಯಕರ್ತರು ನೀಡಿದ್ದಾರೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರದಲ್ಲಿ 100 ಕ್ಕೂ ಹೆಚ್ಚು ಕಾರ್ಯಕರ್ತರು ಠೇವಣಿ ಹಣವನ್ನು ತಾವು ನೀಡಿದ ದೇಣಿಗೆಯಿಂದಲೇ ಸಲ್ಲಿಸಬೇಕು ಎಂದು ಒತ್ತಾಯಿಸಿ, ಪರಮೇಶ್ವರ್‌ಗೆ ನೀಡಿದ್ದಾರೆ. ಕಾರ್ಯಕರ್ತರ ಒತ್ತಾಯ, ಪ್ರೀತಿಗೆ ಪರಂ ಭಾವುಕರಾದ ಘಟನೆ ನಡೆಯಿತು.

ತುಮಕೂರು ಜಿಲ್ಲೆಯಲ್ಲಿ 11 ನಾಮಪತ್ರ

ತುಮಕೂರು :  ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏ.15 ರಂದು 11 ನಾಮಪತ್ರಗಳು ಸ್ವೀಕೃತಗೊಂಡಿವೆ.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ(ಜಾತ್ಯಾತೀತ) ಪಕ್ಷದ ಸಿ.ಬಿ. ಸುರೇಶ್‌ಬಾಬು 1 ನಾಮಪತ್ರ ಸಲ್ಲಿಸಿರುತ್ತಾರೆ. ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಕೆ.ಟಿ. ಶಾಂತಕುಮಾರ 1 ನಾಮಪತ್ರ ಸಲ್ಲಿಸಿರುತ್ತಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ ಜಾತ್ಯಾತೀತದಿಂದ ಎಂ.ಟಿ.ಕೃಷ್ಣಪ್ಪ 1 ನಾಮಪತ್ರ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ರಾಮ್‌ಪ್ರಸಾದ್‌ ಅವರು 2 ನಾಮಪತ್ರ ಸಲ್ಲಿಸಿರುತ್ತಾರೆ.

ಕುಣಿಗಲ್‌ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗದೇ ಇದ್ದು, ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಷಿಯಾಲಿಸ್ಟಿಕ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ(ಕಮ್ಯೂನಿಸ್ಟ್‌) ಎಂ.ವಿ. ಕಲ್ಯಾಣಿ 1 ನಾಮಪತ್ರ ಸಲ್ಲಿಸಿರುತ್ತಾರೆ. ತುಮಕೂರು ಗ್ರಾಮಾಂತರ ಯಾವುದೇ ನಾಮಪತ್ರ ಸ್ವೀಕೃತಿಯಾಗದೇ ಇದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಜನತಾದಳ(ಜಾತ್ಯಾತೀತ) ಪಕ್ಷದಿಂದ ಪಿ.ಆರ್‌.ಸುಧಾಕರಲಾಲ್‌ 1 ನಾಮಪತ್ರ, ಉತ್ತಮ ಪ್ರಜಾಕೀಯ ಪಕ್ಷದಿಂದ ನಾಗೇಂದ್ರ ಟಿ.ಎನ್‌. 1 ನಾಮಪತ್ರ ಸಲ್ಲಿಸಿರುತ್ತಾರೆ.

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರವೀಣ್‌ ಎಸ್‌.ಆರ್‌. 1 ನಾಮಪತ್ರ ಸಲ್ಲಿಸಿದ್ದು, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ರಂಗನಾಥ 1 ನಾಮಪತ್ರ, ಆಮ್‌ ಆದ್ಮಿ ಪಕ್ಷದಿಂದ ಶಶಿಕುಮಾರ್‌ ಆರ್‌ 1 ನಾಮಪತ್ರ ಸಲ್ಲಿಸಿರುತ್ತಾರೆ. ಪಾವಗಡ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸ್ವೀಕೃತಿಯಾಗದಿದ್ದು, ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಕೂಡ ಯಾವುದೇ ನಾಮಪತ್ರ ಸ್ವೀಕೃತಿಯಾಗಿರುವುದಿಲ್ಲ. ಜನತಾದಳ(ಜಾತ್ಯಾತೀತ) ಪಕ್ಷದಿಂದ 4, ಆಮ್‌ ಆದ್ಮಿ ಪಕ್ಷದಿಂದ 1, ಸ್ವತಂತ್ರ 1 ಮತ್ತು ಇತರೆ ಪಕ್ಷಗಳಿಂದ 5 ಸೇರಿ ಒಟ್ಟು 11 ನಾಮಪತ್ರಗಳು ಸ್ವೀಕೃತವಾಗಿವೆ.

ಸೊಗಡಿ ಜೊತೆ ಎಚ್‌ಡಿಕೆ ಚರ್ಚೆ

ತುಮಕೂರು: ಟಿಕೆಟ್‌ ನಿರಾಕರಣೆ ಬೆನ್ನಲ್ಲೇ ವರಿಷ್ಠರ ವಿರುದ್ಧ ಸಿಡಿದೆದ್ದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಶನಿವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಚರ್ಚೆಯ ವಿಷಯವನ್ನು ಬಹಿರಂಗಗೊಳಿಸದ ಸೊಗಡು ಶಿವಣ್ಣ, ಜೆಡಿಎಸ್‌ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಅಲ್ಲದೇ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲೂ ಕೂಡ ತಾವು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಕುರಿತು ತಿಳಿಸುವುದಾಗಿ ಹೇಳಿದ್ದರು. ತಾವು ಸ್ಪರ್ಧಿಸುವುದು ನೂರಕ್ಕೆ ನೂರು ಸತ್ಯ ಎಂದು ಸ್ಪಷ್ಟಪಡಿಸಿರುವ ಶಿವಣ್ಣ ಅವರು ಜೋಳಿಗೆ ಹಾಕಿಕೊಂಡು ಮತಭಿಕ್ಷೆ ಮಾಡುವ ಮೂಲಕ ಗಮನಸೆಳೆದಿದ್ದರು.

Latest Videos
Follow Us:
Download App:
  • android
  • ios