ಬೆಕ್ಕಿಗೆ ಹಾಲುಣಿಸುವ ಶ್ವಾನ: ಒಂದನ್ನೊಂದೊ ಬಿಟ್ಟಿರಲಾರದಷ್ಟು ಮಮತೆ
ನೆಮ್ಮಾಲೆ ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ, ಶಾರದಾ ದಂಪತಿ ಮನೆಯಲ್ಲಿ ಸಾಕಿರುವ ನಾಯಿ, ಬೆಕ್ಕುವಿನ ಮಮಕಾರ ಎಲ್ಲರನ್ನೂ ಕಣ್ತೆರೆಸುವಂತಿದೆ.
ಗೋಣಿಕೊಪ್ಪ(ಮೇ 31): ನೆಮ್ಮಾಲೆ ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ, ಶಾರದಾ ದಂಪತಿ ಮನೆಯಲ್ಲಿ ಸಾಕಿರುವ ನಾಯಿ, ಬೆಕ್ಕುವಿನ ಮಮಕಾರ ಎಲ್ಲರನ್ನೂ ಕಣ್ತೆರೆಸುವಂತಿದೆ.
ನಿತ್ಯ ಬೆಕ್ಕಿಗೆ ನಾಯಿ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿಸುತ್ತಿದೆ. ಅಪರೂಪದ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ನಾಯಿ ಮರಿಗಳು ಹಾಲು ಕುಡಿಯುವುದನ್ನು ನಿಲ್ಲಿಸಿರುವುದರಿಂದ ಬೆಕ್ಕು ಹಾಲು ಕುಡಿಯಲು ಆರಂಭಿಸಿದೆ.
ಮಂಗಳೂರಿನಲ್ಲಿ ನಾಳೆ ಖಾಸಗಿ ಬಸ್ಸು ಶುರು: ಹೀಗಿದೆ ಸಿದ್ಧತೆ
ಒಂದು ತಿಂಗಳಿಂದ ತಾಯಿ, ಮಗು ಪ್ರೀತಿ ಮುಂದುವರಿದಿದೆ. ನಿತ್ಯ ಜತೆಯಲ್ಲಿಯೇ ಈ ಜೋಡಿ ಆಟವಾಡಿಕೊಂಡು ಜತೆಯಲ್ಲಿಯೇ ಮಲಗುತ್ತದೆ. ಒಂದನ್ನು ಒಂದು ಬಿಟ್ಟಿರಲಾರದಷ್ಟುಪ್ರೀತಿ ತೋರಿಸುತ್ತಿದೆ.
ಮನೆಯವರಿಗೂ ಕೂಡ ಇದು ಆಶ್ಚರ್ಯವಾಗಿದೆ. ಸಾಮಾನ್ಯವಾಗಿ ನಾಯಿಯನ್ನು ಕಂಡು ಓಡುವ ಬೆಕ್ಕುಗಳೇ ಹೆಚ್ಚು. ಇದರ ನಡುವೆ ಹಾಲು ಉಣಿಸುತ್ತಿರುವುದು ಕೂಡ ವಿಶೇಷ ಎಂದು ಸ್ಥಳೀಯರಾದ ಚೆಟ್ಟಂಗಡ ಕಂಬ ಕಾರ್ಯಪ್ಪ ಹೇಳುತ್ತಾರೆ.