Asianet Suvarna News Asianet Suvarna News

ಇಸ್ರೋ ಅಧ್ಯಕ್ಷ ಕೆ.ಶಿವನ್‌ಗೆ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿ

ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್‌ಗೆ ಗೌರವ ಪದವಿ ಪ್ರದಾನ ಮಾಡಿದ ರಾಜ್ಯಪಾಲ ವಜೂಭಾಯಿ ವಾಲಾ| ಇಸ್ರೋ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಕೆ.ಶಿವನ್‌ ನೀಡಿದ ಕೊಡುಗೆ ಶ್ಲಾಘಿಸಿದ ರಾಜ್ಯಪಾಲ| 

Doctor of Science Honorary for ISRO President K Sivan grg
Author
Bengaluru, First Published Nov 22, 2020, 8:40 AM IST

ಬೆಂಗಳೂರು(ನ.22): ಇಸ್ರೋ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್‌ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ‘ಡಾಕ್ಟರ್‌ ಆಫ್‌ ಸೈನ್ಸ್‌’ ಗೌರವ ಪದವಿಗೆ ಪಾತ್ರರಾಗಿದ್ದಾರೆ.

ರಾಜಭವನದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಕೆ.ಶಿವನ್‌ ಅವರಿಗೆ ಗೌರವ ಪದವಿ ಪ್ರದಾನ ಮಾಡಿದರಲ್ಲದೆ, ಇಸ್ರೋ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.

ಚಂದ್ರಯಾನ-3ಗೆ ಅಧಿಕೃತ ಒಪ್ಪಿಗೆ: 2021ರಲ್ಲಿ ಮತ್ತೆ ಚಂದ್ರನ ಅಪ್ಪುಗೆ!

ಶಿವನ್‌ ಅವರನ್ನು ಅಭಿನಂದಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಿವನ್‌ ನಾಯಕತ್ವದಲ್ಲಿ ಇಸ್ರೋ ಬಾಹ್ಯಾಕಾಶದಲ್ಲಿ ಅದ್ಭುತಗಳನ್ನೇ ಸೃಷ್ಟಿಸುತ್ತಿದೆ. ನಮ್ಮ ದೇಶ ಕೈಗೊಂಡ ಅನೇಕ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಅವರ ಪಾತ್ರವಿದೆ. ಅವರ ಮುಂದಿನ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಇತರರಿದ್ದರು.
 

Follow Us:
Download App:
  • android
  • ios