Hijab Row: ಮುಸ್ಲಿಮರ ಪ್ರತಿಭಟನೆ ವೇಳೆ ಹಿಂದೂ ಹೆಸರಿನ‌ ಅಂಗಡಿಗಳು ಯಾಕೆ ಮುಚ್ಚಿದ್ದವು ಗೊತ್ತಾ?

ಕಳೆದ ಒಂದು ತಿಂಗಳಿಂದ ರಾಜ್ಯ, ದೇಶ, ವಿದೇಶಗಳಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿವಾದ ಕೋರ್ಟ್‌ನಲ್ಲಿ ಇತ್ಯರ್ಥ ಆಗಿದೆ. ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಮರು ರಾಜ್ಯವ್ಯಾಪಿ ವ್ಯಾಪಾರ ವಹಿವಾಟು ಬಂದ್ ಮಾಡಿದ್ದೂ ಆಗಿದೆ.

Do you know why Hindu named shops were closed during Muslim protests in Nanjangud gvd

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

ಮೈಸೂರು (ಮಾ.19): ಕಳೆದ ಒಂದು ತಿಂಗಳಿಂದ ರಾಜ್ಯ, ದೇಶ, ವಿದೇಶಗಳಲ್ಲಿ ಸದ್ದು ಮಾಡಿದ್ದ ಹಿಜಾಬ್ ವಿವಾದ (Hijab Row) ಕೋರ್ಟ್‌ನಲ್ಲಿ ಇತ್ಯರ್ಥ ಆಗಿದೆ. ಹೈಕೋರ್ಟ್ (High Court) ತೀರ್ಪು ವಿರೋಧಿಸಿ ಮುಸ್ಲಿಮರು ರಾಜ್ಯವ್ಯಾಪಿ ವ್ಯಾಪಾರ ವಹಿವಾಟು ಬಂದ್ ಮಾಡಿದ್ದೂ ಆಗಿದೆ. ಆದರೆ ದಕ್ಷಿಣಕಾಶಿ ನಂಜನಗೂಡಿನಲ್ಲಿ ಮುಸ್ಲಿಮರ (Muslim) ಪ್ರತಿಭಟನೆ (Protest) ವೇಳೆ ಹಿಂದೂ ಹೆಸರಿನ‌ ಅಂಗಡಿಗಳು ಯಾಕೆ ಮುಚ್ಚಿದ್ದವು ಎಂಬುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಆ ಹಿಂದೂ ಹೆಸರಿಗೆ ಅಂಗಡಿಗಳು ಯಾರ ಒಡೆತನದವು, ಮುಚ್ಚಿದ್ದರ ಪರಿಣಾಮ ಈಗ ಏನಾಗಿದೆ, ಎಲ್ಲವನ್ನೂ ಈ ಸ್ಟೋರಿಯಲ್ಲಿ ನೋಡಿ.

ಪ್ರಿಯಾ ಬೇಕರಿ, ಸೀನು ಟೆಕ್ಸ್‌ಟೈಲ್, ಸರಸ್ವತಿ ಬೇಕರಿ ಮತ್ತು ಸ್ವೀಟ್ಸ್... ಹೀಗೆ ಸಾಲು ಸಾಲು ಹಿಂದೂ ಹೆಸರಿ ಅಂಗಡಿ ಮಳಿಗೆಗಳು ಮುಚ್ಚಿದ್ದು ದಕ್ಷಿಣಕಾಶಿ ನಂಜನಗೂಡಿನಲ್ಲಿ. ಅಂದಹಾಗೆ ಶಾಲೆಗಳಲ್ಲಿ ಹಿಜಾಬ್ ಧರಿಸಬಾರದು  ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿದ ತೀರ್ಪಿನ ವಿರುದ್ಧ ಮುಸ್ಲಿಮರು ರಾಜ್ಯವ್ಯಾಪಿ ಶಾಂತಿಯುತ ಪ್ರತಿಭಟನೆ ನಡೆಸಿದರು. ರಾಜ್ಯದಾದ್ಯಂತ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಇದಕ್ಕೆ ಜನಗೂಡಿನ ಮುಸ್ಲಿಮರ ಬೆಂಬಲವೂ ಇತ್ತು.

Karnataka Politics: ಹಿಜಾಬ್‌ ಬಗ್ಗೆ ನನ್ನ ಹೇಳಿಕೆ ತಿರುಚಲಾಗ್ತಿದೆ: HDK

ಅಸಲಿ ವಿಷಯ ಅಂದ್ರೆ ಆಚರಣೆಗೆ ಮುಸಲ್ಮಾನರಾದ ಇವರು ವ್ಯಾಪರಕ್ಕೆ ಅಂಗಡಿಗಳ ಹೆಸರನ್ನು ಹಿಂದೂ ಲೇಬಲ್‌ನಲ್ಲಿ ಅಂಟಿಸಿರೋದು ಸ್ಥಳೀಯರಲ್ಲಿ ಕೋಪ ತರಿಸಿದೆ.‌ ನಂಜನಗೂಡಿನಲ್ಲಿ ಕೇರಳ ಮುಸ್ಲಿಮರ ತಾಳಿರುವ ಇಬ್ಬಗೆತನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಳು, ಬೇಕರಿಗಳು, ತರಕಾರಿ ಅಂಗಡಿ, ಸೂಪರ್ ಮಾರ್ಕೆಟ್, ಮಾಲ್ ಗಳ ಹೆಸರುಗಳೆಲ್ಲ ಹಿಂದೂ ಹೆಸರುಗಳಾಗಿದ್ದು, ಅಲ್ಲಿ ವ್ಯಾಪಾರ ಮಾಡುವವರೆಲ್ಲ ಕೇರಳದಿಂದ ಬಂದಿರುವ ಮುಸ್ಲಿಮರು ಎಂಬುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಿಂದಲೋ‌ ಬಂದು ಇಲ್ಲಿ ನೆಲೆ‌ ಕಂಡವರು, ಈಗ ನಮ್ಮ ಮೇಲೆ ಶಕ್ತಿ ಪ್ರದರ್ಶನಕ್ಕೆ‌ ಮುಂದಾಗುತ್ತಿದ್ದಾರೆ ಅಂತ ಆಕ್ರೋಶ ಹೊರ‌ಹಾಕಿದ್ದಾರೆ.

ಈಗ ಬಂದಿರುವ 8-10 ಪರ್ಸೆಂಟ್ ಜನರೇ ಈ ರೀತಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮು.ಮದಾಗಿರೋದು ಮುಂದೆ ತಮ್ಮ ಹಿಡಿತ ಸಾಧಿಸುತ್ತಾರೆ ಎಂಬ ಆತಂಕ ಸ್ಥಳೀಯರಿಗೆ ಮೂಡಿದೆ. ಅಲ್ಲದೆ ಮುಸ್ಲಿಂ ಆಚರಣೆಯನ್ನೇ ಪಾಲಿಸುವ ಇವರು ವ್ಯಾಪಾರಕ್ಕೆ ಹಿಂದೂ ಹೆಸರನ್ನೂ ಯಾಕೆ ಬಳಸಬೇಕು ಎಂಬ ಪ್ರಶ್ನೆ ಕೂಡ ಹುಟ್ಟುಹಾಕಿದೆ. ಇದರ ಜೊತೆಗೆ ಸ್ಥಳೀಯರು ಇನ್ನು ಮುಂದೆ ಮುಸಲ್ಮಾನರ ಅಂಗಡಿ ಬಿಟ್ಟು ಹಿಂದೂಗಳ ಅಂಗಡಿಗಳಲ್ಲೇ ವಸ್ತು ಖರೀದಿ ಮಾಡುವಂತೆ ಒತ್ತಾಯ ಕೂಡ ಕೇಳಿ ಬಂದಿದೆ.

Hijab Row Verdict: ದಕ್ಷಿಣ ಕನ್ನಡದಲ್ಲಿ ಪರೀಕ್ಷೆಗಳಿಗೆ ಮುಸ್ಲಿಂ ವಿದ್ಯಾರ್ಥಿಗಳು ಗೈರು

ಹೈಕೋರ್ಟ್ ಆದೇಶದ ಬಳಿಕ ಗೈರಾದವರಿಗೆ ಮರುಪರೀಕ್ಷೆ ಇಲ್ಲ: ಹಿಜಾಬ್ ವಿವಾದ (Hijab Row) ಹಿನ್ನೆಲೆಯಲ್ಲಿ ಪರೀಕ್ಷೆಗಳಿಗೆ ಗೈರು ಹಾಜರಾದ ವಿದ್ಯಾರ್ಥಿನಿಯರಿಗೆ ಕೆಲವು ಷರತ್ತುಗಳೊಂದಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಿಜಾಬ್ ಧರಿಸಲು ಅನುಮತಿಸಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಬಂದರೆ ಮತ್ತೊಮ್ಮೆ ಪರೀಕ್ಷೆ (Exam) ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಗುರುವಾರ ಬಿಜೆಪಿ ಶಾಸಕ ರಘುಪತಿ ಭಟ್ ಅವರು ಸದನದಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು (J.C.Madhu Swamy), ಹೈಕೋರ್ಟ್ ಅಂತಿಮ ಆದೇಶ ಬರುವ ಮೊದಲು ಹಿಜಾಬ್'ಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಗೆ ಗೈರಾದವರಿಗೆ ಮತ್ತೊಂದು ಅವಕಾಶ ನೀಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಆದರೆ, ಹೈಕೋರ್ಟ್ (High court) ಅಂತಿಮ ಆದೇಶದ ಬಳಿಕವೂ ಪರೀಕ್ಷೆ ಬಹಿಷ್ಕರಿಸಿ ಹೊರ ಹೋದವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios