Uttara Kannada: ಕಗ್ಗಂಟಾಗಿ ಉಳಿದ ಟೊಂಕ ಬಂದರು ಅಳಿವೆ ಸಮಸ್ಯೆ

ತಾಲೂಕಿನ ಕಾಸರಕೋಡ ಟೊಂಕ ಮೀನುಗಾರಿಕಾ ಬಂದರಿನ ಅಳಿವೆ ಸಮಸ್ಯೆ ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದು, ಸರ್ಕಾರ ಹಾಗೂ ಮೀನುಗಾರಿಕೆ ಇಲಾಖೆ ದಿವ್ಯ ನಿರ್ಲಕ್ಷದಿಂದ ಬಡ ಮೀನುಗಾರ ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಂತಿದೆ. ಈ ಬಗ್ಗೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

do not solve the problem Tonka fishing port of Honnawara at UK rav

ಹೊನ್ನಾವರ (ಡಿ.9) : ತಾಲೂಕಿನ ಕಾಸರಕೋಡ ಟೊಂಕ ಮೀನುಗಾರಿಕಾ ಬಂದರಿನ ಅಳಿವೆ ಸಮಸ್ಯೆ ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದು, ಸರ್ಕಾರ ಹಾಗೂ ಮೀನುಗಾರಿಕೆ ಇಲಾಖೆ ದಿವ್ಯ ನಿರ್ಲಕ್ಷದಿಂದ ಬಡ ಮೀನುಗಾರ ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಂತಿದೆ. ಈ ಬಗ್ಗೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಬೋಟ್‌ಗಳು ಅಳಿವೆಯಲ್ಲಿ ಸಿಲುಕಿದಾಗ ಕಾರ್ಮಿಕರನ್ನು ಮತ್ತು ಬೋಟ್‌ಗಳನ್ನು ರಕ್ಷಿಸಲು ಕಾರ್ಯಾಚರಣೆಗೆ ಮೀನುಗಾರರಿಗೆ ಬೇಕಾಗಿರುವಂತಹ ಉಪಕರಣಗಳನ್ನು ಒದಗಿಸಲು ಈ ಹಿಂದೆ ಅನೇಕ ಬಾರಿ ಸಂಘ ಸಂಸ್ಥೆಯಿಂದ ಮನವಿ ನೀಡಿದ್ದರು. ಈ ಸಂಬಂಧ ಎಸಿ ಅಧ್ಯಕ್ಷತೆಯಲ್ಲಿ ಸಭೆ ಸಹ ನಡೆದಿತ್ತು. ಯಾವುದೇ ಬೆಳವಣಿಗೆಯಾಗದಿರುವುದು ವ್ಯವಸ್ಥೆಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

 

Uttara Kannada: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಇನ್ನೂ ಸಲ್ಲಿಕೆಯಾಗಿಲ್ಲ ಪ್ರಸ್ತಾವನೆ!

ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಕಡಲ ಮಕ್ಕಳದ್ದಾಗಿದೆ. ಕಾಸರಕೋಡ ಟೊಂಕ ಬಂದರಿನಿಂದ ಪ್ರತಿದಿನ ಸಾವಿರಾರು ಜನರು ಸಮುದ್ರ ಮೀನುಗಾರಿಕೆಗೆ ತೆರಳುತ್ತಾರೆ. ತುತ್ತು ಅನ್ನಕ್ಕಾಗಿ ಕಡಲ ಮಾತೆಯೇ ದೈವ ಎಂದು ನಿತ್ಯ ನಮಿಸಿ ನಂಬಿ ಕಡಲ ಒಡಲೊಳಗೆ ಸೆಣಸಾಟದೊಂದಿಗೆ ಬದುಕುತ್ತಿರುವ ಜೀವವಾಗಿದೆ.

ಸಮಸ್ಯೆ ಬಗ್ಗೆ ನಿರ್ಲಕ್ಷ್ಯ:

ಸರ್ಕಾರದಿಂದ ಯಾವುದೆ ರೀತಿಯ ಫಲಾಪೇಕ್ಷೆ ಬಯಸದೇ ತಮ್ಮ ಜೀವನ ನಡೆಸಲು ಅಳಿವೆ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ/ ಜನಪ್ರತಿನಿಧಿಗಳಿಗೆ ಸಂಬಂಧಪಟ್ಟಅಧಿಕಾರಿಗಳಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಮೂಲಭೂತ ಸೌಕರ್ಯ ಅವ್ಯವಸ್ಥೆ:

ಕಾಸರಕೋಡ ಟೊಂಕ ಮೀನುಗರಿಕಾ ಬಂದರಿನಲ್ಲಿ ಅನೇಕ ಸಮಸ್ಯೆಗಳಿವೆ. ಮೀನುಗಾರ ಮಹಿಳೆಯರಿಗೆ ಶೌಚಾಲಯ ಮತ್ತು ವಿಶ್ರಾಂತಿಗೃಹದ ಅವ್ಯವಸ್ಥೆ, ಹೈಮಾಸ್ಟ್‌ ಬೆಳಕಿನ ಅವ್ಯವಸ್ಥೆ, ಹೊಸದಾಗಿ ದಕ್ಕೆ ವಿಸ್ತರಿಸಿದ ಜಾಗದಲ್ಲಿ ಹೂಳೆತ್ತಿದ ಹೂಳನ್ನು ಅಲ್ಲಲ್ಲಿ ರಾಶಿ ಹಾಕಿದ್ದು, ಬೆಳೆದು ನಿಂತ ಗಿಡ-ಮರ ನೋಡಲು ಕಾಡಿನಂತಾಗಿದೆ. ಹೊಸದಾಗಿ ನಿರ್ಮಾಣ ಮಾಡಿದಂತ ಶೆಡ್‌ಗಳು ಸಮರ್ಪಕವಾಗಿ ಉಪಯೋಗಿಸದೇ ಪಾಳು ಬಿದ್ದಿದೆ. ಈ ಬಗ್ಗೆ ಸ್ಥಳೀಯ ಇಲಾಖೆಯ ಅಧಿಕಾರಿಗಳಿಗೆ ಮೀನುಗಾರ ಸಂಘಟನೆಯಿಂದ ಮನವಿ ಸಲ್ಲಿಸಿದರೂ ಸೂಕ್ತ ಸ್ಪಂದನೆ ಇಲ್ಲ. ಸಮಸ್ಯೆ ಬಂದಾಗ ಮೀನುಗಾರಿಕಾ ಫೆಡರೇಶನ್‌ ಮಾತ್ರ ಜೊತೆ ನಿಲ್ಲುತ್ತದೆ ಎನ್ನುತ್ತಾರೆ ಮೀನುಗಾರರು.

Udupi news: 15 ದಿನಗಳಲ್ಲಿ ಸೀಮೆಎಣ್ಣೆ ಪೂರೈಕೆಗೆ ಮೀನುಗಾರರ ಹಕ್ಕೊತ್ತಾಯ

ಮೀನುಗಾರರ ಬದುಕು ನಾಶ ಮಾಡಿ ಮೀನುಗಾರಿಕಾ ಪ್ರದೇಶದಲ್ಲಿ ವಾಣಿಜ್ಯ ಬಂದರು ಮಾಡಲು ಹೊರಟಿರುವುದು ವಿಪರ್ಯಾಸ. ಈ ಸ್ಥಳದಲ್ಲಿ ಹೈ ಮಾಸ್ಟ್‌ ಲೈಟ್‌ ಸಹಿತ ಮೂಲಭೂತ ಸೌಕರ್ಯ ಒದಗಿಸಬೇಕು.

-ರಾಜು ತಾಂಡೇಲ್‌ ಟೊಂಕ, ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಕಾರ್ಯದರ್ಶಿ

Latest Videos
Follow Us:
Download App:
  • android
  • ios