ಉತ್ತರ ಕನ್ನಡ(ಮಾ.22): ವಿಶ್ವದೆಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಬಾಲವೃದ್ಧರ ಗೋಣು ಹಿಚುಕುತ್ತಿರುವ ಮಹಾಮಾರಿ ಕೊರೋನಾ ವೈರಾಣು ಮನುಕುಲದ ಮಹಾ ಶತ್ರುವಾಗಿದೆ. ಇದನ್ನು ಎದುರಿಸಲು ಯಾವ ದೇಶದಲ್ಲೂ ಯಾವ ಶಸ್ತಾ್ರಸ್ತ್ರಗಳಿಲ್ಲವೆಂಬುದು ನಿಜವಾದರೂ, ಯಾರೂ ಭಯಪಡಬೇಕಾಗಿಲ್ಲ. ಈ ಮಹಾಮಾರಿಯನ್ನು ಓಡಿಸಲು ಕತ್ತಿ, ಗುರಾಣಿ, ಮದ್ದು-ಗುಂಡುಗಳು ಬೇಕಿಲ್ಲ. ಯಾವ ದೇಶದಿಂದಲೂ ಅವುಗಳನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ಇದಕ್ಕೆ ಸರಳವಾದ ಪರಿಹಾರ ಭಾರತೀಯ ಸಂಸ್ಕೃತಿಯಲ್ಲಿದೆ. ಅದುವೇ ‘ಬಾಗಿದ ತಲೆ ಮುಗಿದ ಕೈ’ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಸ್ವಯಂಪ್ರೇರಿತಾ ಜನತಾ ಕಪ್ರ್ಯೂ ಅನುಸರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಸಂದೇಶವನ್ನು ನೀಡಿರುವ ಶ್ರೀಗಳು ಇಡೀ ವಿಶ್ವದ ಜನ ಈ ಭಾರತೀಯ ಸಂಸ್ಕೃತಿಯನ್ನು ಅನುಸರಿಸಿ ಶುಚಿರ್ಭೂತರಾಗಿ ಶುದ್ಧ ಮನಸ್ಕರಾಗಿ ದೇವರನ್ನು ಧ್ಯಾನಿಸಿ ಕೈ ಮುಗಿದರೆ ಸಾಕು ಮನೆಯ ಮುಂದೆ ಬಂದು ನಿಂತ ಈ ಮಹಾಮಾರಿ ಭಯಭೀತಗೊಂಡು ತಾನೇ ಓಡಿಹೋಗುತ್ತಾಳೆ ಎಂದು ಅವರು ತಿಳಿಸಿದ್ದಾರೆ.

ಜನತಾ ಕರ್ಫ್ಯೂಗೆ ಸುದರ್ಶನ್ ಪಟ್ನಾಯಕ್ ಸಪೋರ್ಟ್, ಪುರಿ ಬೀಚ್‌ನಲ್ಲಿ ಅರಳಿದ ಮರಳು ಶಿಲ್ಪ!

ನಮ್ಮ ದೇಶದ ಪ್ರಧಾನ ಮಂತ್ರಿ ಅವರ ಕರೆಯಂತೆ ಭಾರತೀಯರೆಲ್ಲರೂ ನಾಳೆ ಸಂಜೆ 5ಗಂಟೆಗೆ ಮನೆ ಮುಂದೆ ಕೈಮುಗಿದು ನಿಂತು ಮಾನವತೆಯ ಸೇವೆಯಲ್ಲಿ ನರತರಾಗಿರುವ ವೈದ್ಯರನ್ನು ನಮಿಸೋಣ. ನಮ್ಮ ಕಣ್ಮುಂದೆಯೇ ಈ ಮಹಾಮಾರಿ ಅಂಜಿ ಓಡಿ ಹೋಗುವುದನ್ನು ನೋಡಿ ಗಹಗಹಿಸಿ ನಗೋಣ ಎಂದು ಶ್ರೀಗಳು ತಿಳಿಸಿದ್ದಾರೆ.