ಹಾಸನ (ನ.16): ಇಂದು ಪ್ರಸಿದ್ಧ  ಹಾಸನಾಂಬೆ ದೇಗುಲದ ವಾರ್ಷಿತ ಉತ್ಸವದ ಕೊನೆ ದಿನವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೇವಿನ ದರ್ಶನ ಪಡೆದಿದ್ದಾರೆ.

 ಪತ್ನಿ ಉಷಾ ಜೊತೆಗೆ ಹಾಸನಕ್ಕೆ  ಆಗಮಿಸಿದ ಡಿಕೆ ಶಿವಕುಮಾರ್ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಹಾಸನಾಂಬ ಉತ್ಸವದ ಕಡೆದಿನ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. 

ಬೈ ಎಲೆಕ್ಷನ್ ಸೋಲಿನ ಬಳಿಕ ವಿಶೇಷ ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ

ಇಂದು  ಹಾಸನಾಂಬೆ ಉತ್ಸವಕ್ಕೆ ಅಂತಿಮ ದಿನವಾಗಿದ್ದು ಜಿಲ್ಲಾಡಳಿತದ ಸೂಚನೆ ಮೇಲೆರೆ ಇಂದು 12 ಗಂಟೆ ಸುಮಾರಿಗೆ ದೇಗುಲದ ಬಾಗಿಲು ಬಂದ್ ಮಾಡಲಾಗುತ್ತದೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ನವೆಂಬರ್ 5 ರಂದು ತೆರೆಯಲಾಗಿತ್ತು.