ರಾಮನಗರ [ಜ.17]: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಸೂಚನೆಗಳಿರುವ ಬೆನ್ನಲ್ಲೇ ಅವರ ತಾಯಿ ಗೌರಮ್ಮ ಆರಾಧ್ಯ ದೈವ ಕಬ್ಬಾಳಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. 

ತೀವ್ರ ಪೈಪೋಟಿ ಕಂಡಿದ್ದ ಕೆಪಿಸಿಸಿ ಪಟ್ಟ  ಹಿರಿಯಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಒಲಿಯುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿರುವ ಬೆನ್ನಲ್ಲೇ  ಅವರು ಹೆಚ್ಚು ನಂಬಿಕೆ ಇಡುವ ದೈವ ಕನಕಪುರದ ಕಬ್ಬಾಳಮ್ಮ ದೇಗುಲಕ್ಕೆ ತೆರಳಿ ಗೌರಮ್ಮ ಪೂಜೆ ಸಲ್ಲಿಸಿದ್ದಾರೆ. 

ಈ ಹಿಂದೆ ಡಿಕೆ ಶಿವಕುಮಾರ್ ಅವರು ಜೈಲು ಸೇರಿದ್ದ ಸಂದರ್ಭದಲ್ಲಿಯೂ ಡಿ.ಕೆ.ಶಿವಕುಮಾರ್ ತಾಯಿ ಕಬ್ಬಾಳಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. 

ಆದರೆ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಪುತ್ರ ಉನ್ನತ ಹುದ್ದೆಯೊಂದನ್ನು ಅಲಂಕರಿಸುವ ಸೂಚನೆ ಸಿಕ್ಕದ್ದು ದೇವಾಲಯದಲ್ಲಿ ಪೂಜೆ  ಮಾಡಿದ್ದಾರೆ. 

ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ...
ಕಾಂಗ್ರೆಸ್ ಹೈ ಕಮಾಂಡ್ ಯಾವುದೇ ಕ್ಷಣದಲ್ಲಿ ಡಿಕೆಶಿ ಅವರನ್ನು ಅಧ್ಯಕ್ಷರೆಂದು ಘೊಷಿಸಲಿದೆ ಎನ್ನುವ ವಾತಾವರಣ ಈಗ ಪಕ್ಷದಲ್ಲಿ ಸೃಷ್ಟಿಯಾಗಿದೆ.  ಈಗಾಗಲೇ ಪೂರ್ವ ತಯಾರಿಯೂ ನಡೆದಿದೆ ಎನ್ನಲಾಗಿದೆ. 

ಓಟು ಬೇಕು, ಬೇಡಿಕೆ ಬೇಡವೇ?: ಪಂಚಮಸಾಲಿ ಬೆಂಕಿಗೆ ಡಿಕೆಶಿ ತುಪ್ಪ!..

ಈ ಸುದ್ದಿ ತಿಳಿದು ಅಭಿಮಾನಿಗಳು ಹಾಗೂ ಡಿಕೆ ಶಿವಕುಮಾರ್ ಅವರ ಬೆಂಬಲಿಗರು, ಹಿಂಬಾಲಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.